Monday, December 2, 2019

ತಂದೂರಿ ರೋಟಿ - with tawa !!!

ತವಾದಲ್ಲಿ ತಂದೂರಿ ರೋಟಿ ಮಾಡುವ ವಿಧಾನ :

ತಂದೂರಿ ರೋಟಿ ಸವಿಯಲು ರೆಸ್ಟೋರೆಂಟ್ಗೇ ಹೋಗಬೇಕಾಗಿಲ್ಲ. ಸುಲಭವಾಗಿ ಮನೆಯಲ್ಲೇ ತಯಾರಿಸಬಹುದು. ಇಲ್ಲಿ ಅದರ ವಿಧಾನವನ್ನು ತಿಳಿಸುತ್ತೇನೆ.


ಬೇಕಾಗುವ ಸಾಮಗ್ರಿಗಳು:

ಗೋಧಿ ಹಿಟ್ಟು – 1 ಕಪ್
ಮೈದಾ ಹಿಟ್ಟು – 1 ಕಪ್
ಮೊಸರು – ½ ಕಪ್
ಸಕ್ಕರೆ – 1 ಟೀ ಸ್ಪೂನ್ 
ಉಪ್ಪು – ರುಚಿಗೆ ತಕ್ಕಂತೆ 
ಚಿಟಿಕೆ ಅಡುಗೆ ಸೋಡಾ
ನೀರು – ಚಪಾತಿ ಹಿಟ್ಟಿನ ಹದಕ್ಕೆ
ಮೇಲಿನ ಸಾಮಗ್ರಿಗಳೊಂದಿಗೆ ಚಪಾತಿಯ ಹಿಟ್ಟಿನ ಹದದಲ್ಲಿ ಹಿಟ್ಟು ಕಲಸಿ 4-5 ಗಂಟೆ ನಂತರ ರೋಟಿ ತಯಾರಿಸಿಬಹುದು. ಲಟ್ಟಿಸಬೇಕಾದರೆ ಚಪಾತಿಗಿಂತ ಸ್ವಲ್ಪ ದಪ್ಪ ಲಟ್ಟಿಸಬೇಕು. 

ಈಗ ಮುಖ್ಯವಾಗಿ ಮಾಡಬೇಕಾದ ವಿಧಾನ ನೋಡೋಣ. 
ರೋಟಿ ಲಟ್ಟಿಸಿ ಆದ ಮೇಲೆ ಒಂದು ಭಾಗಕ್ಕೆ ಚೆನ್ನಾಗಿ ನೀರನ್ನು ಸವರಬೇಕು. ಚಿತ್ರ ೧. 
ಚಿತ್ರ ೧. 
ನೀರು ಸೇರಿದ ಭಾಗ ಕಾದ ತವಾದ ಮೇಲೆ ಬರುವಂತೆ ಬೇಯಿಸಲು ಹಾಕಬೇಕು. ಇದರಿಂದ ರೋಟಿ ತವಾಗೆ ಅಂಟಿಕೊಳ್ಳುತ್ತದೆ. ಚಿತ್ರ ೨. ಗಮನಿಸಿ
ಚಿತ್ರ ೨. 
ರೋಟಿಯ ಗುಳ್ಳೆಗಳು ಮೂಡಿದ ನಂತರ (ಸುಮಾರು ½ ನಿಮಿಷ) ತವಾ ತಿರುಗಿಸಿ ನೇರವಾಗಿ ರೋಟಿ ಸುಡಬೇಕು. 
ಚಿತ್ರ ೩. ಗಮನಿಸಿ  
ಚಿತ್ರ ೩

ನಂತರ ರೋಟಿ ತಿರುಗಿಸಿದರೆ ನೀರು ಹಚ್ಚಿದ ಭಾಗವೂ ಹದವಾಗಿ ಬೆಂದಿರುತ್ತದೆ. ಈ ರೋಟಿ ದಾಲ್ ಜೊತೆ ಸವಿಯಲು ಬಹಳ ರುಚಿಯಾಗಿರುತ್ತದೆ. ಚಿತ್ರ ೪ ಹಾಗು ಚಿತ್ರ ೫. ಗಮನಿಸಿ. 
ಚಿತ್ರ ೪. 

ಚಿತ್ರ ೫. 

ಮೇಲೆ ಹೇಳಿದ ಸಾಮಗ್ರಿಗಳ ಅಳತೆಗೆ 5-6 ರೋಟಿ ತಯಾರಿಸಬಹುದು.

Tandoori roti without oven/tandoor just with tawa:

Ingredients 

1. Wheat flour – 1 cup
2. All purpose flour – 1 cup
3. Curd – ½ cup
4. Sugar – 1 tea spoon
5. Salt to taste
6. Pinch of Baking soda
7. Water to consistency of dough

Prepare the dough with above ingredients to consistency of chapati and rest it for 4-5 hours.  After rolling roti ( bit thicker than chapati)  smear water to one side. Refer Fig 1
Fig 1

Place rolled roti on heated tawa with watered side on the tawa (cast iron tawa would be better). Roti will stick to tawa. Refer Fig 2
 Fig 2
 After around half a minute flip the tawa and hold the roti to fire. Refer Fig 3
 Fig 3

The other side will be also properly cooked within Tawa.  These rotis taste better with Dal.
Refer Fig 4 and Fig 5.
Fig 4

Fig 5

To the mentioned ingredients quantity above,  we can prepare 5-6 rotis.

4 comments: