Saturday, December 28, 2019

ರಾಗಪ್ರಧಾನ ಜನಪ್ರಿಯ ಕನ್ನಡ ಚಲನಚಿತ್ರಗೀತೆಗಳು - 1

ಚಲನಚಿತ್ರ ಸಂಗೀತವು ಬೇಡವೆಂದರೂ ನಮ್ಮ ಜೀವನದ ಹಾಸುಹೊಕ್ಕಾಗಿ ಬೆರೆತುಹೋಗುತ್ತವೆ!!!
ನಾನಿಲ್ಲಿ ಶಾಸ್ತ್ರೀಯ ಸಂಗೀತದ ರಾಗಪ್ರಧಾನವಾದ ಜನಪ್ರಿಯ (ನನ್ನ ಮೆಚ್ಚಿನ!!)  ಚಿತ್ರಗೀತೆಗಳನ್ನ ಮೆಲುಕು ಹಾಕುವ ಪ್ರಯತ್ನ ಮಾಡಿದ್ದೇನೆ.

ನನಗೆ ಎಲ್ಲದಕ್ಕಿಂತ ಮೊದಲು ನೆನಪಿಗೆ ಬರುವುದು ಅಣ್ಣಾವ್ರ 'ಜೀವನಚೈತ್ರ' ಚಿತ್ರದ 'ನಾದಮಯ... ' ಗೀತೆ.  ಅತ್ಯುತ್ತಮ ಗಾಯನಕ್ಕಾಗಿ ರಾಷ್ಟ್ರೀಯ ಪುರಸ್ಕಾರ ಪಡೆದ ಮೊದಲ ನಟ ಎಂಬ ಶ್ರೇಯ ಡಾ. ರಾಜ್ ಅವರದು!!(ಗಮನಿಸಿ,  'ಮೊದಲ ನಟ', ಮೊದಲ ಗಾಯಕ ಅಲ್ಲ!). ಈ ಗೀತೆ ಕರ್ನಾಟಕ ಶಾಸ್ತ್ರೀಯ ಸಂಗೀತದ 'ಹನುಮತೋಡಿ' ರಾಗಾಧಾರಿತ ಗೀತೆ. ಚರಣದ ಸ್ವರಾಲಾಪನೆಯಲ್ಲಿ ಮೋಹನವೂ ಬಂದು ಹೋಗುತ್ತದೆ. ಈ ಗೀತೆಯ ಸಾಹಿತ್ಯ ಚಿ. ಉದಯಶಂಕರ್ ಅವರದ್ದಾದರೆ  ಸಂಗೀತ ಉಪೇಂದ್ರ ಕುಮಾರ್ ಅವರದ್ದು.  ಈ ಗೀತೆ ಕನ್ನಡ ಚಿತ್ರಸಂಗೀತದ ಚಿರಸ್ಥಾಯಿಯಾಗಿ ಉಳಿದಿದೆ.



ನನಗೆ ನೆನಪಿಗೆ ಬರುತ್ತಿರುವ ಮುಂದಿನ ಹಾಡು, ಬಭೃವಾಹನ ಚಿತ್ರದ 'ಆರಾಧಿಸುವೆ ಮದನಾರಿ'. ಇದು ಖರಹರಪ್ರಿಯ ರಾಗದಲ್ಲಿ ಸೊಗಸಾಗಿ ಮೂಡಿ ಬಂದಿರುವ ಗೀತೆ. ಸಂಗೀತ ಟಿ.ಜಿ. ಲಿಂಗಪ್ಪ, ಸಾಹಿತ್ಯ ಮತ್ತೆ ಉದಯಶಂಕರ್ ಅವರದು. ಇದನ್ನೂ ಸಹ ಡಾ. ರಾಜ್ ಸೊಗಸಾಗಿ ಹಾಡಿದ್ದಾರೆ. ಅರ್ಜುನನು ಸುಭದ್ರೆಯನ್ನು ಒಲಿಸಿಕೊಳ್ಳಲು  ಶಿವನನ್ನು ಕುರಿತು ಸನ್ಯಾಸಿಯಂತೆ ನಟಿಸುವ ಸಂದರ್ಭದಲ್ಲಿ ಮೂಡಿಬಂದ ಹಾಡು. ಸ್ವರಾಲಾಪನೆ, ನಟುವಾಂಗ ಎಲ್ಲವೂ ಸೊಗಸಾಗಿ ಮೂಡಿಬಂದಿದೆ. ಹಾಡಿನ ದೃಶ್ಯಗಳೂ ಸಹ ಮರೆಯುವಂತಿಲ್ಲ. ಡಾ.ರಾಜ್ ಹಾಡುತ್ತಾ,  ವೀಣೆ ನುಡಿಸುತ್ತಾ, ಕೊಳಲನೂದುತ್ತಾ,  ಮೃದಂಗ  ನುಡಿಸುತ್ತಾ,  ಘಟ ಭಾರಿಸುತ್ತಾ, ಅಮೋಘ ಅಭಿನಯ  ನೀಡಿದ್ದಾರೆ.


ನನ್ನ ನೆಚ್ಚಿನ ಇನ್ನೊಂದು  ಹಾಡು, ಸಂಧ್ಯಾರಾಗ ಚಿತ್ರದ 'ನಂಬಿದೆ ನಿನ್ನ ನಾದ ದೇವತೆಯೇ ... ' ಗೀತೆ.  ಈ ಗೀತೆಯನ್ನು  ಚಿತ್ರದ ಬೇರೆ ಬೇರೆ ಸಂದರ್ಭಗಳಲ್ಲಿ ಮೂವರು ಗಾಯಕರು ಹಾಡಿದ್ದಾರೆ. ಮೂರೂ ಸೊಗಸಾಗಿ ಮೂಡಿ ಬಂದಿವೆ.  ಭಾರತರತ್ನ ಭೀಮಸೇನ್  ಜೋಶಿ, ಡಾ. ಬಾಲಮುರಳಿಕೃಷ್ಣ ಹಾಗು ಎಸ್. ಜಾನಕಿ ಈ  ಗಾಯಕರು. ಗೀತಸಾಹಿತ್ಯ ಜಿ.ವಿ.  ಅಯ್ಯರ್  ಅವರದು, ಸಂಗೀತ ಜಿ.ಕೆ. ವೆಂಕಟೇಶ್. ಈ ಹಾಡು ಪೂರ್ವಿಕಲ್ಯಾಣಿ ರಾಗದಲ್ಲಿ ಸ್ವರ ಸಂಯೋಜನೆಗೊಂಡಿದೆ.



ಪುಟ್ಟಣ್ಣ ಕಣಗಾಲ್ ಅವರ ಉಪಾಸನೆ ಚಿತ್ರದ ಎಲ್ಲ ಹಾಡುಗಳೂ ಮಧುರವಾಗಿವೆ. ಸಂಗೀತ ಸಾಧಕಿಯೊಬ್ಬಳ ಕಥೆಯಾಗಿರುವುದರಿಂದ ಚಿತ್ರದ ಎಲ್ಲ ಹಾಡುಗಳೂ ಸಹ ರಾಗಪ್ರಧಾನವಾದವೇ . ಇದರಲ್ಲಿ ನನ್ನ ಮೆಚ್ಚಿನ ಹಾಡು 'ಭಾರತ  ಭೂ ಶಿರ ಮಂದಿರ ಸುಂದರಿ... ' ಈ ಹಾಡನ್ನು ಎಸ್.ಜಾನಕಿ ಅಮೋಘವಾಗಿ ಹಾಡಿದ್ದಾರೆ. ಸಾರಮತಿ ರಾಗದಲ್ಲಿ ಸ್ವರ ಸಂಯೋಜನೆಗೊಂಡಿರುವ ಈ ಹಾಡಿನ ಸಂಗೀತ  ವಿಜಯಭಾಸ್ಕರ್ ಅವರದಾದರೆ, ಸಾಹಿತ್ಯ ವಿಜಯನಾರಸಿಂಹ ಅವರದು.



ಹಾಗೆಯೇ "ಸಂಪಿಗೆ ಮರದ ಹಸಿರೆಲೆ ನಡುವೆ ... " ಈ ಹಾಡು, ರಾಗಮಾಲಿಕೆಯಲ್ಲಿದೆ. ಚಕ್ರವಾಕ, ಮಧ್ಯಮಾವತಿ ಮತ್ತು ದುರ್ಗಾ (ಶುದ್ಧಸಾವೇರಿ) ರಾಗಗಳನ್ನೊಳಗೊಂಡಿದೆ. 






ಸಿದ್ಧಲಿಂಗಯ್ಯನವರ ಹೇಮಾವತಿ ಚಿತ್ರದ 'ಶಿವ ಶಿವ ಎನ್ನದ ನಾಲಿಗೆ ಏಕೆ .... ' ಹಾಡು ಸೋಜಿಗ ಸೃಷ್ಟಿಸುವ ಹಾಡು. ಏಕೆಂದರೆ ಈ ಹಾಡಿನ ವೈಶಿಷ್ಟ್ಯವೇ ಹಾಗಿದೆ. ಈ ಹಾಡಿನ ಪರ್ಯಾಯ (alternate) ಸಾಲುಗಳು ಒಂದೊಂದು ರಾಗದಲ್ಲಿವೆ. ಮೊದಲ ಸಾಲು ಅಭೋಗಿ ರಾಗದಲ್ಲಿದ್ದರೆ, ಎರಡನೆಯ ಸಾಲು ಹನುಮತೋಡಿ. ಮತ್ತೆ ಮೂರನೆಯ ಸಾಲು ಅಭೋಗಿಯಾದರೆ, ನಾಲ್ಕನೆಯ ಸಾಲು ಹನುಮತೋಡಿ. ಇಡೀ ಗೀತೆ ಹೀಗೆಯೇ ಸಾಗುತ್ತದೆ. ಸ್ವರಾಲಾಪನೆಯೂ ಸಹ !! ಈ ಮಾಂತ್ರಿಕತೆ ಸೃಷ್ಟಿಸಿದ ಸಂಗೀತಜ್ಞ ಎಲ್. ವೈದ್ಯನಾಥನ್.  ಗೀತ ಸಾಹಿತ್ಯ ಚಿ. ಉದಯಶಂಕರ್ ಅವರದಾದರೆ, ಈ ಹಾಡನ್ನು ಅತ್ಯದ್ಭುತವಾಗಿ ಹಾಡಿರುವ ಶ್ರೇಯ ಎಸ್.ಜಾನಕಿ ಅವರದು. ಅನೇಕ ಸಂದರ್ಶನಗಳಲ್ಲಿ ಜಾನಕಿಯವರು ಈ ಹಾಡಿನ ಕಠಿಣತೆಯ ಬಗ್ಗೆ ಪ್ರಸ್ತಾಪ ಮಾಡಿರುವುದನ್ನು ನೀವೆಲ್ಲ ಕೇಳಿರಬಹುದು.



ಸನಾದಿ ಅಪ್ಪಣ್ಣ ಚಿತ್ರದ 'ಕರೆದರೂ ಕೇಳದೇ ...' ಹಾಡು ಬೇಹಾಗ್ ರಾಗದಲ್ಲಿ ಸಂಯೋಜನೆಗೊಂಡಿದೆ. ಈ ಹಾಡನ್ನು ಹಾಡಿರುವವರು ಎಸ್. ಜಾನಕಿ. ಈ ಗೀತೆಯ ಮುಖ್ಯ ಆಕರ್ಷಣೆ ಭಾರತರತ್ನ ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರ ಶಹನಾಯಿ ವಾದನ. ರಾಗ-ನೃತ್ಯ ಪ್ರಧಾನವಾದ ಈ ಗೀತೆಯ ಸಾಹಿತ್ಯ ಚಿ. ಉದಯಶಂಕರ್ ಅವರದಾದರೆ, ಸಂಗೀತ ಜಿ.ಕೆ. ವೆಂಕಟೇಶ್ ಅವರದು.






ಡಾ. ರಾಜ್ ಅವರ ಶ್ರಾವಣ ಬಂತು ಚಿತ್ರದ  ಗೀತೆ 'ಇದೇ ರಾಗದಲ್ಲಿ .. ಇದೇ ತಾಳದಲ್ಲಿ .. '   ಶುದ್ಧ ಸಾವೇರಿ ರಾಗದಲ್ಲಿದೆ. ಹಿಂದೂಸ್ಥಾನಿ ಪ್ರಕಾರದಲ್ಲಿ 'ದುರ್ಗಾ' ಎನ್ನುತ್ತಾರೆ. ತಿಳಿ ಹಾಸ್ಯ ಸಂದರ್ಭದಲ್ಲಿ ಚಿತ್ರೀಕರಣಗೊಂಡಿರುವ ಈ ಹಾಡನ್ನು ಡಾ.ರಾಜ್ ಹಾಗು ವಾಣಿ ಜಯರಾಮ್ ಹಾಡಿದ್ದಾರೆ. ಎಂ. ರಂಗರಾವ್ ಅವರ  ಸಂಗೀತ, ಚಿ. ಉದಯಶಂಕರ್ ಅವರ ಸಾಹಿತ್ಯ ಈ ಗೀತೆಗಿದೆ.




ಕೆ.ಎಸ್.ಎಲ್. ಸ್ವಾಮಿ (ರವೀ) ಅವರ ಮಲಯಮಾರುತ ಚಿತ್ರದ ಎಲ್ಲ ಗೀತೆಗಳೂ ಬಹಳ ಜನಪ್ರಿಯ. ಇದರಲ್ಲಿನ ಮಲಯಮಾರುತ ರಾಗದ  "ಶಾರದೆ ದಯೆ ತೋರಿದೆ .... " ಹಾಗೂ ಸಾರಮತಿ ರಾಗದ " ಎಲ್ಲೆಲ್ಲೂ ಸಂಗೀತವೇ ..." ಹಾಡು ನನಗೆ ತುಂಬಾ ಪ್ರಿಯವಾದವು. ಇದರ ಸಾಹಿತ್ಯ ಚಿ. ಉದಯಶಂಕರ್ ಅವರದು. ಕಣಗಾಲ್ ಪ್ರಭಾಕರ ಶಾಸ್ತ್ರೀ ಸಾಹಿತ್ಯ ಒದಗಿಸಿರುವ 'ನಟನ ವಿಶಾರದ ನಟಶೇಖರ... " ಹಾಡು ಹಿಂದೋಳ ರಾಗದಲ್ಲಿದ್ದು, ಇವೆಲ್ಲವನ್ನು ಕೆ.ಜೆ. ಏಸುದಾಸ್ ಸುಮಧುರವಾಗಿ ಹಾಡಿದ್ದಾರೆ. ವಲ್ಲಭಾಚಾರ್ಯರ ಮಧುರಾಷ್ಟಕವಂತೂ ಅಭೇರಿ ರಾಗದಲ್ಲಿ (ಭೀಮಪಲಾಸ್ ಎನ್ನುತ್ತಾರೆ ಹಿಂದೂಸ್ಥಾನಿ ಪ್ರಕಾರದಲ್ಲಿ)  ವಾಣಿ ಜಯರಾಮ್ ಅವರ ಧ್ವನಿಯಲ್ಲಿ ಜೇನಿನಂತೆ ಸ್ಫುರಿಸುತ್ತದೆ. ಎಸ.ಪಿ.ಬಿ. ಈ ಗೀತೆಗೆ ಸಹ ಗಾಯನ ಮಾಡಿದ್ದಾರೆ. ಈ ಅದ್ಭುತವಾದ ಸಂಗೀತಮಯ ಚಿತ್ರಕ್ಕೆ ವಿಜಯಭಾಸ್ಕರ್ ಅವರ ಸ್ವರ ಸಂಯೋಜನೆಯಿದೆ.



ಕವಿರತ್ನ ಕಾಳಿದಾಸ ಚಿತ್ರದ "ಸದಾ ಕಣ್ಣಲಿ ಪ್ರಣಯದ ಕವಿತೆ ..." ಹಾಡು, ಘಜಲ್ ಶೈಲಿಯದು; ಈ ಗೀತೆಯನ್ನು ಬೃಂದಾವನಿ ಸಾರಂಗ ರಾಗದಲ್ಲಿ ಎಂ. ರಂಗರಾವ್ ಅವರು ಸಂಯೋಜಿಸಿದ್ದಾರೆ. ಡಾ.ರಾಜ್ ಹಾಗು ವಾಣಿ ಜಯರಾಮ್ ಸುಮಧುರವಾಗಿ ಹಾಡಿರುವ ಈ ಗೀತೆಯ ಸಾಹಿತ್ಯ ಚಿ. ಉದಯಶಂಕರ್ ಅವರದು. ಇದೇ  ಚಿತ್ರದಲ್ಲಿ ಬರುವ ಶ್ಯಾಮಲಾದಂಡಕ 'ಮಾಣಿಕ್ಯ ವೀಣಾ...' ಗೀತೆಯು ರಾಗಮಾಲಿಕೆಯಲ್ಲಿದೆ. ನನಗೆ ತಿಳಿದಿರುವ ಹಾಗೆ, ಹಂಸಧ್ವನಿಯಲ್ಲಿ ಪ್ರಾರಂಭವಾಗಿ, ಕಾಪಿ, ಹಿಂದೋಳ,  ಕಲ್ಯಾಣಿ (ಯಮನ್), ಆರಭಿ, ಭೈರವಿ ರಾಗಗಳಲ್ಲಿ ಸಂಚರಿಸಿ, ಮೋಹನ  ರಾಗದಲ್ಲಿ ಅಂತ್ಯವಾಗುತ್ತದೆ (ಇಲ್ಲಿ ನಾನು ಯಾವುದಾದರೂ ರಾಗ ಬಿಟ್ಟಿದ್ದರೆ ಅಥವಾ ಬೇರೆ ರಾಗವಿದೆ ಅನಿಸಿದರೆ, ಓದುಗರಿಗೆ ತಿಳಿದಿದ್ದರೆ ದಯವಿಟ್ಟು ತಿಳಿಸಿ).



ಘಜಲ್ ಶೈಲಿಯ ಇನ್ನೊಂದು (ಶೋಕಭರಿತ) ಹಾಡು ಹೊಸಬೆಳಕು ಚಿತ್ರದ 'ಕಣ್ಣೀರ ಧಾರೆ... '. ಹಿಂದೂಸ್ಥಾನಿ ಪ್ರಕಾರದಲ್ಲಿ ಇದು ಲಲಿತ್ ರಾಗದ ಸಂಯೋಜನೆ. ಇದನ್ನೂ ಸಹ ಎಂ.ರಂಗರಾವ್ ಅವರೇ ಸಂಯೋಜಿಸಿ ಡಾ.ರಾಜ್ ಅವರು ಹಾಡಿದ್ದಾರೆ. ಸಾಹಿತ್ಯ ಮತ್ತೆ ಚಿ.ಉದಯಶಂಕರ್ ಅವರದು.



ಗಡಿಬಿಡಿ ಗಂಡ ಚಿತ್ರದ ಹಿಂದೋಳ ರಾಗಾಧಾರಿತ "ನೀನು ನೀನೇ  ಇಲ್ಲಿ ನಾನು ನಾನೇ ..." ಹಾಡು ಬಹಳ ಜನಮೆಚ್ಚುಗೆ ಗಳಿಸಿದ ಗೀತೆ. ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರೇ ರವಿಚಂದ್ರನ್ ಹಾಗು ತಾಯ್ ನಾಗೇಶ್ ಇಬ್ಬರಿಗೂ ಅದ್ಭುತವಾಗಿ ಹಿನ್ನಲೆ ಗಾಯನ ಒದಗಿಸಿದ್ದಾರೆ. ಈ ಚಿತ್ರಗೀತೆಯ ಸಾಹಿತ್ಯ -ಸಂಗೀತ ಹಂಸಲೇಖ ಅವರದು.



ಅಬ್ಬಾ!! ಎಷ್ಟೊಂದು ಗೀತೆಗಳು... ನಾನು ಈಗ ಒಂದು ಹಂತದಲ್ಲಿ ಅಲ್ಪವಿರಾಮ ಹಾಕುತ್ತೇನೆ. ಇನ್ನೂ ಹಲವಾರು ರಾಗಪ್ರಧಾನವಾದ  ನನ್ನ ಮೆಚ್ಚಿನ ಗೀತೆಗಳಿವೆ, ಅವುಗಳ ಬಗ್ಗೆ ಮುಂದಿನ ಭಾಗದಲ್ಲಿ ಬರೆಯುತ್ತೇನೆ. ನಾನು ತಿಳಿಸಿರುವ ಈ ಗೀತೆಗಳಲ್ಲಿ ನಿಮ್ಮ ಮೆಚ್ಚಿನ ಗೀತೆಗಳನ್ನು ತಿಳಿಸಲು ಮರೆಯದಿರಿ.


Wednesday, December 25, 2019

ಉಕ್ಕರಿಸಿದ ಅಕ್ಕಿ ರೊಟ್ಟಿ ಹಾಗೂ ಬಿಳಿ ಹೋಳಿಗೆ / ರೈಸ್ ಪರೋಟ - How to prepare delicious North Karnataka style Akki Rotti and Rice stuffed paranthas easily

ಉಕ್ಕರಿಸಿದ ಅಕ್ಕಿ ರೊಟ್ಟಿ ಎಂದರೆ ಸಾಕು, ಬಾಯಲ್ಲಿ ನೀರೂರುತ್ತದೆ.  ಆದರೆ ಅದನ್ನು ಮಾಡಲು ಹೊರಟಾಗ ಅಡುಗೆ ಮನೆಯಲ್ಲಿ ಆಗುವ ಪಜೀತಿಗಳನ್ನು (ಅಂಟು ಪಾತ್ರೆ, ರೊಟ್ಟಿ ಲಟ್ಟಿಸುವ ರಗಳೆ)  ನೆನೆಸಿಕೊಂಡರೆ, ಇದರ ಸಹವಾಸ ಬೇಡವೇ ಬೇಡ, ಅಂಗಡಿ/ಹೋಟೆಲ್ ನಿಂದ ತಂದು ತಿಂದರಾಯಿತು ಎನಿಸುತ್ತದೆ. ನಾನು ಇದನ್ನು ಸುಲಭವಾಗಿ ಮಾಡುವ ರೀತಿ ತಿಳಿಸುತ್ತೇನೆ. ಅಲ್ಲದೇ ಉಕ್ಕರಿಸಿದ ಹಿಟ್ಟಿನ ಹೂರಣ ಮಾಡಿ,  ಪರೋಟ ಸಹ ಮಾಡಬಹುದು!
ಬೇಕಾಗುವ ಸಾಮಗ್ರಿಗಳು :

ಉಕ್ಕರಿಸಿದ ಅಕ್ಕಿ ರೊಟ್ಟಿ :-
1. ಅಕ್ಕಿ ಹಿಟ್ಟು 1.5 cup
2. ತುಪ್ಪ / ಎಣ್ಣೆ - 2 Tea spoon
3. ನೀರು - 2 cup
4. ಉಪ್ಪು ರುಚಿಗೆ

ಪರೋಟ :-
1. ಗೋಧಿ ಹಿಟ್ಟು
2. ನೀರು
3. ಉಪ್ಪು ರುಚಿಗೆ

ಮಾಡುವ ವಿಧಾನ :

ಅಕ್ಕಿ ರೊಟ್ಟಿ :-
----------------

ಯಾವುದೇ ಅಡುಗೆ ಮಾಡುವ ಮೊದಲು, ಅದನ್ನು ತಯಾರಿಸುವ ಪಾತ್ರೆಯ ಆಯ್ಕೆ ತುಂಬಾ ಮುಖ್ಯ.
ಹಿಟ್ಟು ಉಕ್ಕರಿಸಲು ನಾನ್ ಸ್ಟಿಕ್ ಪ್ಯಾನ್ ಉಪಯೋಗಿಸುವುದರಿಂದ, ಅಂಟಿನ ಪಾತ್ರೆ ತೊಳೆಯುವುದು ತಪ್ಪುತ್ತದೆ.


ನೀರನ್ನು ಪ್ಯಾನ್ ಗೆ ಹಾಕಿ,  ಕುದಿ ಬಂದ ಮೇಲೆ, 1 ಟೀ ಚಮಚ ತುಪ್ಪ /ಎಣ್ಣೆ ಹಾಕಿ,  ರುಚಿಗೆ ತಕ್ಕಂತೆ ಉಪ್ಪು ಸೇರಿಸಿ. ನಂತರ,  ಸ್ವಲ್ಪ ಸ್ವಲ್ಪವಾಗಿ ಅಕ್ಕಿ ಹಿಟ್ಟು ಸೇರಿಸುತ್ತಾ, ಗಂಟಿಲ್ಲದಂತೆ ತೊಳೆಸಿಕೊಳ್ಳಿ.  ಈ ಮಿಶ್ರಣ ಆರಿದ ಮೇಲೆ ಕೈಯಲ್ಲಿ ಚೆನ್ನಾಗಿ ಹಿಟ್ಟು ನಾದಿಕೊಳ್ಳಿ.




ನಂತರ ಚಿಕ್ಕ ಚಿಕ್ಕ ಉಂಡೆ ಮಾಡಿ,  ರೊಟ್ಟಿ ಲಟ್ಟಿಸಬೇಕು.  ಇದು ಸ್ವಲ್ಪ ಕಷ್ಟ,  ತುಂಬಾ ನಿಧಾನವಾಗಿ, ಒತ್ತಡ ಬಿಡದೆ ಲಟ್ಟಿಸಬೇಕು. ಅಭ್ಯಾಸವಾದಂತೆ ಬೇಗ ಬೇಗ ಮಾಡಬಹುದು.

ಹೀಗೆ ಲಟ್ಟಿಸಿದ ರೊಟ್ಟಿಯನ್ನು ಹಂಚಿನ ಮೇಲೆ ಹಾಕಿ,  ಮೇಲಿನ ಭಾಗಕ್ಕೆ ನೀರು ಹಚ್ಚಿ ಚೆನ್ನಾಗಿ ಬೇಯಿಸಿದ,  ರುಚಿ ರುಚಿಯಾದ ಉಕ್ಕರಿಸಿದ ರೊಟ್ಟಿ ರೆಡಿ. ಈ ರೊಟ್ಟಿ, ತರಕಾರಿ ಗೊಜ್ಜು / ಪಲ್ಯ/ ಚಟ್ನಿ ಗಳೊಡನೆ ಸವಿಯಲು ಬಲು ರುಚಿ.
ನಾನು ಹೇಳಿರುವ ಅಳತೆಗೆ 6-8 ರೊಟ್ಟಿಗಳನ್ನ ತಯಾರಿಸಬಹುದು.


ಬಿಳಿ ಹೋಳಿಗೆ / ರೈಸ್ ಪರೋಟ :
-----------------------------------------

ನಿಮಗೆ ಉಕ್ಕರಿಸಿದ ಹಿಟ್ಟು ಲಟ್ಟಿಸಲು ಬರದಿದ್ದರೆ ಚಿಂತೆ ಬೇಡ. ಗೋಧಿ ಹಿಟ್ಟಿನಿಂದ ಚಪಾತಿ ಹಿಟ್ಟು ಮಾಡಿಕೊಳ್ಳಿ.
ಉಕ್ಕರಿಸಿದ ಅಕ್ಕಿ  ಹಿಟ್ಟಿನಿಂದ ತಯಾರಿಸಿದ ಉಂಡೆಗಳನ್ನು
ಚಪಾತಿ ಹಿಟ್ಟಿನೊಳಗೆ ಹೂರಣದಂತೆ ಇಟ್ಟು ಲಟ್ಟಿಸಿ ಬೇಯಿಸಿದರೆ ರುಚಿ ರುಚಿಯಾದ ರೈಸ್ ಪರೋಟ ರೆಡಿ.  ಇದನ್ನು ಲಟ್ಟಿಸಲು ಬಹಳ ಸುಲಭವಾಗಿದೆ,  ಹಾಗೂ ಹೊಸ ರುಚಿ ಬರುತ್ತದೆ! ಈ ಪರೋಟಗಳು, ತರಕಾರಿ ಗೊಜ್ಜು / ಪಲ್ಯ/ ಚಟ್ನಿ ಗಳೊಡನೆ ಸವಿಯಲು ಬಲು ರುಚಿ. ಮೊಸರು  ಹಾಗೂ ಉಪ್ಪಿನಕಾಯಿ ಇದ್ದರಂತೂ ಬಹಳ ಸೊಗಸು.


Ingredients -
Akki Rotti ( North Karnataka style)

1. Rice flour - 1.5 cup
2. Water - 2 cup
3. Salt to taste
4. Ghee/cooking oil - 2 Tea spoon

Rice stuffed paranthas:

1. Wheat flour
2. Water
3. Salt to taste


Akki Rotti
----------------
Use non-stick pan to prepare dough for akki rotti.

Boil the water, add salt to taste and oil/ghee while boiling.

Add rice floor little by little to boiling water and saute it to dough consistency.

Prepare small balls of dough and roll the rotti, and fry rotti in tawa.  Apply water on one side while frying rotti.

Delicious akki rottis are ready to serve. These taste good with any vegetable curry/ chutneys.
To above mentioned measurements, you can prepare 6-8 akki rottis.

Note- Rolling is little difficult, it can tear out if you put more pressure while rolling. If you find difficult in rolling, then prepare rice stuffed paranthas as per following.


Rice stuffed paranthas-
------------------------------------

Prepare chapathi dough

Stuff the balls of rice flour prepared earlier in to chapati dough and roll the paranthas.

Fry paranthas on tawa. Delicious paranthas are ready to serve. These taste good with any vegetable curry/ chutneys. These paranthas also go good with curd and pickles.


Tuesday, December 17, 2019

ಚಟ್ ಪಟ್ - ನಿಪ್ಪಟ್ - How to prepare delicious South Indian snack Nippattu

ಈ ಚಳಿಗಾಲದಲ್ಲಿ ಸಂಜೆಯ ಸಮಯದಲ್ಲಿ ನಾಲಿಗೆ ಏನಾದರೂ ಕುರುಕಲು ತಿಂಡಿ ಬಯಸುತ್ತದೆ.  ಆಗ ಚಟ್ ಪಟ್ ಅಂತ ನಿಪ್ಪಟ್ಟು ಮಾಡಿಕೊಳ್ಳಬಹುದು.  ಅಲ್ಲದೇ ಒಮ್ಮೆ ಮಾಡಿಕೊಂಡರೆ,  ತಿಂಗಳವರೆಗೂ ತಿನ್ನಬಹುದು.


ಬೇಕಾದ ಸಾಮಗ್ರಿಗಳು :
1. ಅಕ್ಕಿ ಹಿಟ್ಟು - 1 ಕಪ್
2. ಕಡಲೇಹಿಟ್ಟು - 1/4 ಕಪ್
3. ಕಡಲೇಬೀಜ - 2 ಟೇಬಲ್ ಸ್ಪೂನ್
4. ಹುರಿಗಡಲೆ - 1 ಟೇಬಲ್ ಸ್ಪೂನ್
5. ಕರಿಬೇವಿನ ಎಸಳುಗಳು
6. ಬಿಳಿ ಎಳ್ಳು (optional)  -  1 ಟೀ ಸ್ಪೂನ್
7. ಅಚ್ಚ ಖಾರದಪುಡಿ - 2 ಟೀ ಸ್ಪೂನ್
8. ಜೀರಿಗೆ - 1 ಟೀ ಸ್ಪೂನ್
9. ಉಪ್ಪು ರುಚಿಗೆ
10. ಕರಿಯಲು ಎಣ್ಣೆ

ಮಾಡುವ ವಿಧಾನ :

ಕಡಲೇಬೀಜವನ್ನು ಒಂದು ಬಾಣಲೆಯಲ್ಲಿ ಎಣ್ಣೆ ಇಲ್ಲದೇ ಹುರಿದುಕೊಳ್ಳಿ.

ಹುರಿದ ಕಡಲೇಬೀಜ,  ಹುರಿಗಡಲೆ,  ಕರಿಬೇವಿನ ಎಸಳುಗಳನ್ನ ಮಿಕ್ಸರ್ ನಲ್ಲಿ ಅರ್ಧ ಸುತ್ತು ತಿರುಗಿಸಿ.
ಈಗ,  ಈ ಮಿಶ್ರಣವನ್ನು ಅಕ್ಕಿ ಹಿಟ್ಟು, ಕಡಲೇ ಹಿಟ್ಟು,  ಅಚ್ಚ ಖಾರದಪುಡಿ, ಜೀರಿಗೆ, ಉಪ್ಪು  ಸೇರಿಸಿ ಎಲ್ಲಾ ಬೆರೆಸಿಕೊಳ್ಳಿ. (ನಿಮಗೆ ಬೇಕಾದರೆ ಬಿಳಿ ಎಳ್ಳು, 1 ಸಣ್ಣಗೆ ಹೆಚ್ಚಿದ ಹಸಿರುಮೆಣಸಿನಕಾಯಿ ಸೇರಿಸಿ)








ಹಿಟ್ಟು ಕಲಸುವ ಮುನ್ನ ಕಾದ ಎಣ್ಣೆ 1 ಟೀ ಸ್ಪೂನ್ ಹಾಕಿಕೊಳ್ಳಲು ಮರೆಯದಿರಿ.

ಸ್ವಲ್ಪ ಸ್ವಲ್ಪವಾಗಿ ನೀರು ಹಾಕಿ,  ಗಟ್ಟಿಯಾಗಿ (ನಿಪ್ಪಟ್ಟು ತಟ್ಟುವ ಹದ)  ಕಲಸಿಕೊಂಡು,  ಬಾಳೆ ಎಲೆಯಲ್ಲಿ ತಟ್ಟಿ,  ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೂ ಕರೆದರೆ,  ರುಚಿ ರುಚಿಯಾದ, ಗರಿ ಗರಿಯಾದ ನಿಪ್ಪಟ್ಟು ರೆಡಿ.





(ಬಾಳೆ ಎಲೆ ಇಲ್ಲದವರು, ತೆಳುವಾದ ಪ್ಲಾಸ್ಟಿಕ್ ಹಾಳೆಯನ್ನು ಬಳಸಬಹುದು). ನಾನು ಹೇಳಿರುವ ಅಳತೆಗೆ, 15-18 ನಿಪ್ಪಟ್ಟುಗಳನ್ನು ಮಾಡಬಹುದು.

Ingredients

1. Rice flour - 1 cup
2. Gram flour - 1/4 cup
3. Ground nuts - 2 table spoon
4. Fried bengal gram - 1 table spoon
5. Curry leaves
6. Red chilli powder - 2 tea spoon
7. Jeera - 1 tea spoon
8. Salt to taste
9. Oil for deep fry

Dry roast ground nuts,  grind it with fried Bengal gram(1/2 round in mixer) and curry leaves.

Add this powder with Rice flour, gram flour,  red chilly power, jeera,  salt and a tea spoon of boiled oil give a good mix.

Add water little by little and prepare the dough.  Pat the dough on banana leaf and deep fry the nippattu till it turns golden brown. (Use thin plastic cover /sheet if you don't have banana leaves)

Crispy delicious nippattu is ready to serve.

To the measurements mentioned above,  you can prepare 15-18 Nippattus

Friday, December 13, 2019

ಸಂಭ್ರಮ


ಧುಮ್ಮಿಕ್ಕಿ ಹರಿವ ಜಲಧಾರೆ ಜೋಗ
ಕನ್ನಡ ಜನತೆಗೆ ಇದುವೇ ಯೋಗಾಯೋಗ!

ಮಲೆನಾಡ ಹಚ್ಚ ಹಸುರಿನ ನಡುವೆ ಇದೆ ಸಾಗರ
ಇದೇ ಭೋರ್ಗರೆಯುವ ಶರಾವತಿಯ ಆಗರ
ಮುಂಜಾವಿನ ಮಂಜಿನಲ್ಲಿ ಬೆರೆತ ಹೊಂಬಣ್ಣ
ಇದಕದೇ ಕಾರಣವು ಪ್ರಥಮ ಉಷಾಕಿರಣ!



ಬಾನಂಗಳದಿ ಬರುವುದು ಮಳೆಬಿಲ್ಲ ಚಿತ್ತಾರ,
ಸೌಂದರ್ಯ ಸರಸ್ವತಿಯ ನಿಜದ ಅವತಾರ!
ಇದಕಿರುವ ಇನ್ನೊಂದು ಹೆಸರು  ಗೇರುಸೊಪ್ಪ
ಜಲಕಾಂತಿಯಬ್ಬರದಿ ಉರಿವುದು ವಿದ್ಯುದ್ದೀಪ!!

ರಾಜಗಾಂಭೀರ್ಯದಿ ಮೆರೆವ ಅವನೇ ರಾಜ,
ಅಂಕುಡೊಂಕಿನ ಬೆಡಗಿ ಅವಳದೋ ರಾಣಿ
ಬಂಡೆಗಳ ನಡುವೆ ಘರ್ಜಿಸುವ ರೋರರ್!
ಬಿರುಸಿನಾ ಬಾಣದೊಲು ಬರುವವನು ರಾಕೆಟ್.

ದೃಶ್ಯ ವೈಭವದ ಸುಗ್ಗಿ ಜೋಗ ಜಲಪಾತ
ಮೈ ಮರೆತೀರಿ ಜೋಕೆ!  ಕೆಳಗಿದೆ ಪ್ರಪಾತ!!
ಇನ್ನೂ ನೋಡಿಲ್ಲವೇ ಬೇಗ ಬನ್ನಿರಣ್ಣ,
ತಣಿಸುವುದು ನಿಮ್ಮ ಮೈ ಮನಸು ಕಣ್ಣ.
                                                          -ರಕ್ಷಾ







Thursday, December 12, 2019

ಸೋರೇಕಾಯಿ ತಿರುಳಿನ ದೋಸೆ - How to prepare Crispy Dosa with Bottlegourd pulp

ಮೊನ್ನೆ ಸೋರೇಕಾಯಿ  ಮಜ್ಜಿಗೆ ಹುಳಿ ಮಾಡಿದಾಗ ತಿರುಳನ್ನು ಫ್ರಿಜ್ ನಲ್ಲಿ ಇಡಿ ಎಂದು ತಿಳಿದಿದ್ದೆ.  ಅದರಿಂದ ದೋಸೆ ಮಾಡುವ ವಿಧಾನವನ್ನು ಇಂದು ಬರೆಯುತ್ತಿದ್ದೇನೆ.
ಸೋರೇಕಾಯಿ ಮಾತ್ರವಲ್ಲದೇ ಕುಂಬಳಕಾಯಿ,  ಬಣ್ಣದ ಸೌತೆಕಾಯಿ ತಿರಳಿನಿಂದಲೂ ಇದೇ ರೀತಿಯ ದೋಸೆ ತಯಾರಿಸಬಹುದು.


ಬೇಕಾದ ಸಾಮಗ್ರಿಗಳು :
 1. ದೋಸೆ / ಇಡ್ಲಿ ಅಕ್ಕಿ - 1.25 ಪಾವು
 2. ಉದ್ದಿನಬೇಳೆ - 1/2 ಪಾವು
 3. ಬಿಡಿಸಿಟ್ಟುಕೊಂಡ ಸೋರೇಕಾಯಿ ತಿರುಳು.
 4. ಕಡಲೇಬೇಳೆ - 1 ಟೇಬಲ್ ಸ್ಪೂನ್
 5. ಮೆಂತ್ಯ - 1 ಟೀ ಸ್ಪೂನ್
 6. ಸಬ್ಬಕ್ಕಿ - 1 ಟೀ ಸ್ಪೂನ್
 7. ಉಪ್ಪು - ರುಚಿಗೆ ತಕ್ಕಂತೆ

ಮಾಡುವ ವಿಧಾನ:

ಮೇಲೆ ಹೇಳಿದ ಮೊದಲ 6 ಪದಾರ್ಥಗಳನ್ನು ಚೆನ್ನಾಗಿ ತೊಳೆದು 4-5 ಗಂಟೆಗಳ ಕಾಲ ನೆನೆಸಿಡಿ.


ನಂತರ ನೆನೆಸಿದ ಈ ಪದಾರ್ಥಗಳನ್ನು ಮಿಕ್ಸರ್ /ಗ್ರೈಂಡರ್ ನಿಂದ ರುಬ್ಬಿಕೊಂಡು, ಉಪ್ಪು ಸೇರಿಸಿ ಹಿಟ್ಟು ಮಾಡಿಕೊಳ್ಳಿ.


ಈ ಹಿಟ್ಟನ್ನು 6-8 ಗಂಟೆಗಳ ಕಾಲ ಹುದುಗಲು ಬಿಡಿ.
ಹುದುಗು ಬಂದ ಮೇಲೆ ಈ ಹಿಟ್ಟಿನಿಂದ ಬಿಸಿ ಬಿಸಿಯಾದ, ರುಚಿ ರುಚಿಯಾದ, ಗರಿ ಗರಿಯಾದ ದೋಸೆಗಳನ್ನು ತಯಾರಿಸಬಹುದು.


ನಾನು ಹೇಳಿರುವ ಅಳತೆಗೆ 20-25 ದೋಸೆಗಳನ್ನು ಮಾಡಿಕೊಳ್ಳಬಹುದು.

Ingredients :

1. Idly/ dosa rice - 300 gms
2. Black gram - 100 gms
3. Chopped Pulp of 1 bottle gourd
4. Bengal gram - 1 table spoon
5. Fenu Greek seeds - 1 tea spoon
6. Sago - 1 tea spoon
7. Salt to taste

Soak first 6 ingredients for 4-5 hours.

Grind it to dosa batter consistency after 5 hours and add salt to taste.
Rest it to ferment for 6-8 hours.

After fermentation, prepare crispy and tasty dosas with this batter. To the above measurements, you can prepare 20-25 dosas.





Tuesday, December 10, 2019

ಹೀರೇಕಾಯಿ ಸಿಪ್ಪೆಯ ಚಟ್ನಿ - Ridge gourd husk chutney

ಹೀರೇಕಾಯಿ ಬಹು ಮುಖ್ಯವಾದ ತರಕಾರಿ. ತೊವೆಗಂತೂ ಇದಿಲ್ಲದಿದ್ದರೆ ರುಚಿಯೇ ಇಲ್ಲ. ಹುಳಿ,  ಕೂಟು, ಪಲ್ಯಗಳಿಗೂ ಬಲು ಪ್ರಸಿದ್ಧ. ಹೆಚ್ಚಿನವರು ಹೀರೇಕಾಯಿ ಹೆಚ್ಚಿಕೊಂಡು ಸಿಪ್ಪೆ ತೆಗೆದು ಬಿಸಾಡುತ್ತಾರೆ. ಇನ್ನು ಮುಂದೆ ಹೀಗೆ ಮಾಡಬೇಡಿ. ಏಕೆಂದರೆ ಅದರಲ್ಲೂ ಪೌಷ್ಟಿಕ ಸತ್ವ ಇರುತ್ತದೆ. ನಾರಿನಂಶ ಮತ್ತು ಕಬ್ಬಿಣದಂಶ ಹೆಚ್ಚಾಗಿರುವ ಈ ಹೀರೇಕಾಯಿ ಸಿಪ್ಪೆಯನ್ನು ಬಳಸಿ ಇಂದು ರುಚಿಯಾದ ಚಟ್ನಿ ತಯಾರಿಸಲು ತಿಳಿಸಿಕೊಡುತ್ತೇನೆ.


ಬೇಕಾಗುವ ಸಾಮಗ್ರಿಗಳು :
1. ಬಿಡಿಸಿದ ಹೀರೇಕಾಯಿಯ ಸಿಪ್ಪೆ
2. ತೆಂಗಿನ ಕಾಯಿಯ ತುರಿ - 1 ಬಟ್ಟಲು
3. ಉದ್ದಿನಬೇಳೆ - 1 ಟೀ ಸ್ಪೂನ್
4. ಕೊತ್ತಂಬರಿ ಬೀಜ - 1 ಟೀ ಸ್ಪೂನ್
5. ಸಾಸಿವೆ - 1 ಟೀ ಸ್ಪೂನ್
6. ಹಸಿರು ಮೆಣಸಿನಕಾಯಿ - 2-3 (ನಿಮ್ಮ ಖಾರದ ಅಪೇಕ್ಷೆಗೆ ತಕ್ಕಂತೆ)
7. ಬೆಲ್ಲ - ಒಂದು ಸಣ್ಣ ಚೂರು (ಪುಡಿ ಬೆಲ್ಲವಾದರೆ  ಟೀ ಸ್ಪೂನ್)
8. ಹುಣಸೆಹಣ್ಣು - ನೆಲ್ಲಿಕಾಯಿ ಗಾತ್ರದಷ್ಟು
9. ಎಣ್ಣೆ - ಒಗ್ಗರಣೆಗೆ 2 ಟೀ ಸ್ಪೂನ್
10. ಕರಿಬೇವಿನ ಎಸಳುಗಳು
11. ಚಿಟಿಕೆ ಇಂಗು
12. ಉಪ್ಪು - ರುಚಿಗೆ ತಕ್ಕಂತೆ

ಮಾಡುವ ವಿಧಾನ :

ಮೊದಲು ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ,  ಸಾಸಿವೆ, ಉದ್ದಿನಬೇಳೆ ಹಾಗು ಕೊತ್ತಂಬರಿ ಬೀಜಗಳನ್ನು ಸ್ವಲ್ಪ ಕೆಂಪಾಗುವಂತೆ ಹುರಿಯಿರಿ. ನಂತರ ಹಸಿರು ಮೆಣಸಿನಕಾಯಿ, ಕರಿಬೇವಿನ ಸೊಪ್ಪು, ಚಿಟಿಕೆ ಇಂಗು ಸೇರಿಸಿ ಹುರಿದುಕೊಳ್ಳಬೇಕು.

ಈ ಒಗ್ಗರಣೆಗೆ ಹೀರೇಕಾಯಿಯ ಸಿಪ್ಪೆ ಹಾಕಿ ಚೆನ್ನಾಗಿ ಬಾಡಿಸಿ.


ಈ ಒಗ್ಗರಣೆ ಆರಿದ ಮೇಲೆ, ತೆಂಗಿನ ಕಾಯಿ, ಹುಣಸೆ ಹಣ್ಣು,  ಉಪ್ಪು,  ಬೆಲ್ಲದ ಜೊತೆ ಸೇರಿಸಿಕೊಂಡು ತಿರುವಿದರೆ,  ಚಟ್ನಿ ರೆಡಿ.


ಈ ಚಟ್ನಿ ದೋಸೆ,  ಚಪಾತಿ,  ಬಿಸಿ ಬಿಸಿ ಅನ್ನ ತುಪ್ಪದ ಜೊತೆ ಸವಿಯಲು ರುಚಿಯಾಗಿರುತ್ತದೆ. ನಾನಿಲ್ಲಿ ಒಂದು ಹೀರೇಕಾಯಿಯ ಸಿಪ್ಪೆ ಬಳಸಿದ್ದೇನೆ,  ಮತ್ತೆ ಈ ಪ್ರಮಾಣದ ಅಳತೆಯ ಚಟ್ನಿ 3-4 ಜನರಿಗೆ ಸಾಕಾಗುವಷ್ಟು ಆಗುತ್ತದೆ.



Ingredients

1. Peeled husk of 1 Ridge gourd
2. Grated coconut - 1cup
3. Black gram - 1 tea spoon
4. Coriander seeds - 1 tea spoon
5. Mustard - 1 tea spoon
6. Green chillies - according to your spiciness requirement
7. Powdered Jaggery - 1 Tea spoon
8. Tamarind juice - 2 tea spoon
9. Curry leaves
10. Pinch of asafoetida / hing
11. Cooking oil - 2 tea spoon
12. Salt to taste

Prepare tadka/seasoning with mustard, black gram,  coriander seeds,  curry leaves,  green chilly,  pinch of asafoetida with your cooking oil

Add peeled husk of Ridge gourd and fry till it softens.

Grind this seasoning after cooled along with grated coconut, tamarind juice, Jaggery and salt. Your chutney is ready.

This chutney tastes good with dosas,  chapati and also with rice. To measurements mentioned above serves 3-4 people.



Monday, December 9, 2019

ಐಕ್ಯ




ಹೇಳಲಿಲ್ಲ ನನಗೆ ನೀನು, ಹೊರಟೆಯಲ್ಲವೇ
ಒಂದು ಸಾರಿ ಹೇಳಬೇಕು ಎನಿಸಲಿಲ್ಲವೇ!?
ನೀನು ಕೇಳಿದೆಲ್ಲವ ನಾ ಕಲಿಸಲಿಲ್ಲವೇ



ಹಸುವ ಹಾಲ ಕರೆಯ ಬರದ ನೀ ಅಳುತಿದ್ದೆಯಲ್ಲವೇ
ನಿನ್ನ ಪಾಲ ಹಾಲು ನಾನೇ ಕರೆಯಲಿಲ್ಲವೇ

ಗೋಪಿಯರ ಕಾಡಿ ನೀ ಓಡುತಿದ್ದೆಯಲ್ಲವೇ
ಎಲ್ಲ ಸೇರಿ ನಿನ್ನ ಹಿಡಿಯ ಬರಲು ನಾ ತಡೆಯಲಿಲ್ಲವೇ

ನಿದ್ದೆ ಬರದು ಎಂದು ನೀ ಕೊರಗುತಿದ್ದೆಯಲ್ಲವೇ
ಕಾರಿರುಳ ಎಣಿಸದೆ ನಾನೋಡಿ ಬರುತಿದ್ದೆನಲ್ಲವೇ

ನಮ್ಮೀ ಪ್ರೇಮ-ಗಂಗೆಯ ಸಾಕ್ಷಿ ಯಮುನೆಯಲ್ಲವೇ?
ಅವಳ ದಾಟಿ ನೀ ನನ್ನ ತೊರೆದೆ, ಮನಸು ಮರುಗಲಿಲ್ಲವೇ

ಆದರೂ ಒಮ್ಮೆ ಕೇಳಿಯೇ ಬಿಡುವೆ ಎಂದೂ ಎನಿಸಲಿಲ್ಲವೇ
ಮನದರಸಿಯೇ ಆಗಲಿತ್ತು ಪಟ್ಟದರಸಿಯಲ್ಲವೇ

ರಾಧೆ ಕಂಗಳ ಮಾತು ಕೃಷ್ಣಗೆ ಕೇಳಿತಲ್ಲವೇ
ಕಂಗಳಲೇ ಉತ್ತರಿಸಿದ ಅವ ಜಾಣನಲ್ಲವೇ

ಅಯ್ಯೋ! ಪೆದ್ದಿ ಇನ್ನೂ ನಿನಗೆ ತಿಳಿಯಲಿಲ್ಲವೇ
ಮದುವೆಯೊಂದು ನಡೆವುದೆಂದು ಇಬ್ಬರ ನಡುವೆಯಲ್ಲವೇ
ಒಂದೇ ನಾನು ನೀನು ಎಂದೂ ಬೇರೆಯಲ್ಲವೇ
ತನ್ನ ತಾನೇ ಯಾರು ಜಗದಿ ವರಿಸುವುದಿಲ್ಲವೇ!!!
                                                                       - ರಕ್ಷಾ



ಅಂಜನೀಪುತ್ರ

ಇಂದು ಮೊಬೈಲ್ ಮೇಲೆ ಕಣ್ಣಾಡಿಸುತ್ತಿದ್ದಾಗ ಹಲವಾರು  'Happy Hanuma Jayanthi' ಮೆಸೇಜುಗಳು ಹರಿದಾಡುತ್ತಿದ್ದವು. ಹನುಮ ಜಯಂತಿ ಚೈತ್ರ ಮಾಸದಲ್ಲಿ ಅಲ್ಲವೇ,  ಇವತ್ತು ಯಾವ ಹನುಮ ಜಯಂತಿ ಎಂದು ತಲೆ ಕೆರೆದುಕೊಳ್ಳುವಂತಾಯ್ತು.  ಆಮೇಲೆ ಕೇರಳ,  ತಮಿಳುನಾಡಿನ ಕಡೆ ಈ ದಿನ ಆಚರಿಸುತ್ತಾರೆ ಎಂದು ಯಾರೋ ಹೇಳಿದರು. ಹೋಗಲಿ ಬಿಡಿ, ಹನುಮನ ನೆನೆಯುಲು ದಿನದ ಹಂಗ್ಯಾಕೆ ಎಂದುಕೊಂಡು ಹನುಮನ ಬಗ್ಗೆ ನನಗೆ ತಿಳಿದಿರುವ ಕೌತುಕಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.


ಎಲ್ಲರಿಗೂ ಗೊತ್ತಿರುವ ಹಾಗೆ ಹನುಮನನ್ನು 'ಪವನಸುತ',  'ವಾಯುಪುತ್ರ', 'ಮಾರುತಿ' ಎನ್ನುತ್ತಾರೆ. ಅಂಜನಾದೇವಿ ಅವನ ತಾಯಿ. ಕೇಸರಿ ಮಹಾರಾಜನ ಪತ್ನಿ.  ಹಾಗಾದರೆ ಹನುಮ 'ವಾಯುಪುತ್ರ' ಹೇಗಾದ? ಕುತೂಹಲಕರ ಸಂಗತಿ ಹೇಳ್ತೀನಿ ಕೇಳಿ. ದಶರಥನು ಪುತ್ರ ಕಾಮೇಷ್ಟಿ ಯಾಗ ಮಾಡುತ್ತಿದ್ದ ಸಮಯದಲ್ಲಿ ಇತ್ತ ಕೇಸರಿ ಮತ್ತು ಅಂಜನಾದೇವಿಯರು ಪುತ್ರಾಪೇಕ್ಷೆಯಿಂದ ಶಿವನನ್ನು ಪ್ರಾರ್ಥಿಸುತ್ತಿದ್ದರಂತೆ.  ಅಗ್ನಿದೇವನು ದಶರಥನಿಗೆ ಪಾಯಸವನ್ನು ಪ್ರಸಾದಿಸಿದಾಗ,  ಅಲ್ಲಿಗೆ ಬಂದ ಗರುಡ ಪಕ್ಷಿಯೊಂದು ಸ್ವಲ್ಪ ಪಾಯಸವನ್ನು ಅಪಹರಿಸಿ ದೂರ ಹಾರಿ ಹೋಯಿತಂತೆ.  ಶಿವನ ಆದೇಶದ ಮೇರೆಗೆ ವಾಯುದೇವನು ತನ್ನ ಶಕ್ತಿಯಿಂದ ಆ ತೊಟ್ಟು ಪಾಯಸವನ್ನು ಅಂಜನಾದೇವಿಯ ಕೈ ಸೇರುವ ಹಾಗೆ ಮಾಡಿದನಂತೆ.  ಅದನ್ನು ಸ್ವೀಕರಿಸಿದ ಅಂಜನಾದೇವಿಯ ಗರ್ಭದಲ್ಲಿ ಆಂಜನೇಯನು ಜನಿಸಿದನು ಎಂಬ ಪ್ರತೀತಿಯಿದೆ. ವಾಯುವಿನ ಶಕ್ತಿಯಿಂದ ಜನಿಸಿದನಾದ್ದರಿಂದ  ಆಂಜನೇಯನು ವಾಯುಪುತ್ರನೆನಿಸಿದನು.
ಕೇಸರಿ - ಅಂಜನಾದೇವಿಯರೊಂದಿಗೆ ಹನುಮ
ಇನ್ನೊಂದು ಕುತೂಹಲದ ಸಂಗತಿಯೆಂದರೆ ಹನುಮಂತನಿಗೆ ಮಕರಧ್ವಜನೆಂಬ ಮಗನಿದ್ದಾನೆ ಎಂಬ ವಿಷಯ. ಆಜನ್ಮ ಬ್ರಹ್ಮಚಾರಿಯಾದ ಹನುಮಂತನಿಗೆ ಮಗನೆಲ್ಲಿಂದ ಬಂದ!!!??  ಹೌದು..  ತನ್ನ ಬಾಲದಿಂದ ಲಂಕಾದಹನ ಮಾಡಿದಮೇಲೆ,  ಸಮುದ್ರವೊಂದರಲ್ಲಿ ಉರಿಯಾರಿಸಿಕೊಳ್ಳಲು ಬಾಲವನ್ನು ಆಡಿಸುತ್ತಾ ಇದ್ದಾಗ ಅವನ ಬೆವರ ಹನಿಗಳನ್ನು ಸೇವಿಸಿದ ಮೀನಿನಲ್ಲಿ ಮಕರಧ್ವಜ ಜನಿಸಿದನಂತೆ!  ಏನು ಸೋಜಿಗವಲ್ಲವೇ.
ಮಕರಧ್ವಜ


ಕಿಷ್ಕಿಂಧಾ ಕಾಂಡದಿಂದ ಮುಂದೆ ರಾಮಾಯಣದ ತುಂಬಾ ಹನುಮನ ತರಲೆಗಳೇ ತುಂಬಿಕೊಂಡಿವೆ!
ನೀವು ಕೆಲವು ಚಿತ್ರಗಳಲ್ಲಿ  ಮೈ ತುಂಬಾ ಸಿಂಧೂರ ಬಳಿದುಕೊಂಡ ಹನುಮನನ್ನು ಗಮನಿಸಿರಬಹುದು, ಇದರ ಹಿಂದಿನ ಗುಟ್ಟೇನು ಗೊತ್ತೇ?  ಒಮ್ಮೆ ಸೀತಾದೇವಿಯು ಹಣೆಗೆ ಸಿಂಧೂರವಿಟ್ಟದ್ದನು ಗಮನಿಸಿ, ಹೀಗೇಕೆ ಮಾಡುವೆ ಎಂದು ಹನುಮನು ಕೇಳಿದನಂತೆ. ಆಗ ರಾಮನ ದೀರ್ಘಾಯಸ್ಸಿಗಾಗಿ ಎಂದು ಸೀತೆಯ ಹೇಳಿದ್ದನ್ನು ಕೇಳಿ ಹನುಮ ತನ್ನ ಮೈ ಮೇಲೆಲ್ಲಾ ಸಿಂಧೂರ ಬಳಿದುಕೊಂಡ, ತನ್ನ ಪ್ರಭುವಿನ ದೀರ್ಘಾಯಸ್ಸಿಗಾಗಿ!! ಇಂದಿಗೂ ನಾವು ಹನುಮನ ಗುಡಿಗಳಲ್ಲಿ ಸಿಂಧೂರ ಕೊಡುವುದನ್ನು ಕಾಣಬಹುದು.

ಸಿಂಧೂರ ಬಳಿದುಕೊಂಡಿರುವ ಹನುಮ

ರಾಮನ ಯುಗಾಂತ್ಯವಾಗುವ ಸಮಯದಲ್ಲಿ, ಹನುಮ ನನ್ನನ್ನು ತೆರಳಲು ಬಿಡುವುದಿಲ್ಲ ಎಂಬುದನ್ನರಿತಿದ್ದ ರಾಮ ಬೇಕಂತಲೇ 'ನನ್ನ ಉಂಗುರವೊಂದು ಕಳೆದುಹೋಗಿ ಪಾತಾಳಲೋಕ ಸೇರಿಕೊಂಡಿದೆ,  ಹುಡುಕಿ ತಾ' ಎಂದು ಕಳಿಸಿ,  ಅವನ ಅವತಾರ ಮುಗಿಸಿದನಂತೆ!!

ದ್ವಾಪರದಲ್ಲೂ ಹನುಮನ ಪಾತ್ರವಿದೆ. ಸೌಗಂಧಿಕಾ ಪುಷ್ಪ ಪ್ರಕರಣದಲ್ಲಿ ಭೀಮನನ್ನು ಎದುರಾದ ಕಥೆ ಎಲ್ಲರಿಗೂ ಗೊತ್ತಿರುವುದೇ. ಅಲ್ಲದೇ ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನನ ರಥದ ಧ್ವಜದ ಲಾಂಛನವಾಗಿದ್ದು ಅರ್ಜುನನ ಹೆಸರಿಗೆ ತಕ್ಕಂತೆ ವಿಜಯನನ್ನಾಗಿಸಿದ.  ಅದಕ್ಕೇ ಪಾರ್ಥನನ್ನು 'ಕಪಿಧ್ವಜ' ಎನ್ನುವುದು.

ಚಿರಂಜೀವಿಯಾದ ಹನುಮನೇ  ತುಳಸೀದಾಸರಿಗೆ ರಾಮಾಯಣದ ಕಥೆಯನ್ನು ತಿಳಿಸಿ ರಾಮಾಯಣ ಬರೆಯಲು ಪ್ರೇರಣೆ ನೀಡಿರುವುದು ಹೇಳುತ್ತಾರೆ.
ತುಳಸೀದಾಸರೊಂದಿಗೆ ಹನುಮ

ಹನುಮನ ಬಗೆಗಿನ ಕುತೂಹಲಕಾರೀ ಸಂಗತಿಗಳನ್ನು ಇಲ್ಲಿ ಕಲೆ ಹಾಕಿ ನಿಮಗೆ ತಿಳಿಸುವ ಸಣ್ಣ ಪ್ರಯತ್ನ ಮಾಡಿದ್ದೇನೆ ಅಷ್ಟೇ... ಹನುಮ ಸ್ಮರಣೆ ಮಾಡುತ್ತಾ ಅವರಂತೆ ನಾವೂ ಧೈರ್ಯಶಾಲಿಗಳಾಗುವ ಪ್ರಯತ್ನ ನಾವೆಲ್ಲಾ ಮಾಡುವಂತಾಗಲಿ ಎಂದು ಆಶಿಸುತ್ತಾ...

                                                     signing off

Sunday, December 8, 2019

ಮಜ್ಜಿಗೆ ಹುಳಿ - How to prepare delicious south Indian recipe 'Majjige HuLi' easily

ಮಜ್ಜಿಗೆ ಹುಳಿ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಇದು ದಕ್ಷಿಣ ಭಾರತದ ಪ್ರಸಿದ್ಧ ಅಡುಗೆ. ಬಹಳ ರುಚಿಕರವಾಗಿರುತ್ತದೆ. ಚಳಿಗಾಲದಲ್ಲಿ ಶುಂಠಿ, ಮೆಣಸು, ಜೀರಿಗೆ ಬೀಳುವುದರಿಂದ ಆರೋಗ್ಯಕರವೂ ಹೌದು.  ಇದನ್ನು ಕುಂಬಳಕಾಯಿ, ಸೀಮೆ ಬದನೆಕಾಯಿ, ಬಣ್ಣದ ಸೌತೆಕಾಯಿ (ಮಂಗಳೂರು ಸೌತೆಕಾಯಿ),  ಸೌತೆಕಾಯಿ,  ಸೋರೇಕಾಯಿ, ಬೆಂಡೆಕಾಯಿ ಈ ತರಹದ ತರಕಾರಿಗಳಿಂದ ತಯಾರಿಸಬಹುದು. ಪಾಲಕ್ ಸೊಪ್ಪನ್ನು ಬಳಸಿ ಸಹ ಮಾಡಬಹುದು.



ನಾನಿಲ್ಲಿ ಸೋರೇಕಾಯಿ ಮಜ್ಜಿಗೆ ಹುಳಿ ಮಾಡುವ ವಿಧಾನವನ್ನು ವಿಸ್ತಾರವಾಗಿ ತಿಳಿಸುತ್ತೇನೆ. ಇದನ್ನು ಯಾರಿಗೂ ಮಾಡಲು ಬರುವುದಿಲ್ಲ ಎಂದೇನಲ್ಲ, ಸುಲಭವಾಗಿ ಹಾಗು ತರಕಾರಿಗಳ ಸದ್ಬಳಕೆಯೊಂದಿಗೆ ಹೇಗೆ ಕಡಿಮೆ ಸಮಯದಲ್ಲಿ ಮಾಡಬಹುದೆಂದು ತಿಳಿಸುತ್ತೇನೆ.

ಬೇಕಾಗುವ ಸಾಮಗ್ರಿಗಳು :

1. ಹೆಚ್ಚಿದ ಸೋರೇಕಾಯಿ ಹೋಳುಗಳು
2. ತೆಂಗಿನಕಾಯಿ ತುರಿ - 1 ಬಟ್ಟಲು
3. ಹಸಿರು ಮೆಣಸಿನಕಾಯಿ 2-3(ನಿಮ್ಮ ಖಾರದ ಅಪೇಕ್ಷೆಗೆ ತಕ್ಕಂತೆ)
4. ಮೆಣಸಿನ ಕಾಳು - 6 ರಿಂದ 8
5. ಜೀರಿಗೆ - 1 ಟೀ ಸ್ಪೂನ್
6. ಶುಂಠಿ - ಒಂದು ಸಣ್ಣ ಚೂರು
7. ನೆನೆಸಿದ ಕಡಲೇಬೇಳೆ ಅಥವಾ ಹುರಿಗಡಲೆ - 1 ಟೇಬಲ್ ಸ್ಪೂನ್
8. ಕೊತ್ತಂಬರಿ ಬೀಜ 1 ಟೀ ಸ್ಪೂನ್ ಅಥವಾ ಕೊತ್ತಂಬರಿ  ಸೊಪ್ಪು
9. ಚಿಟಿಕೆ ಅರಿಶಿನ, ಕರಿಬೇವು
10. ಮೊಸರು - 200 ml
11. ಉಪ್ಪು - ರುಚಿಗೆ ತಕ್ಕಷ್ಟು
12. ಒಗ್ಗರಣೆಗೆ - ಸಾಸಿವೆ, ಜೀರಿಗೆ, ಕರಿಬೇವು, 1 ಒಣ ಮೆಣಸಿನಕಾಯಿ, ಚಿಟಿಕೆ ಇಂಗು


ಮಾಡುವ ವಿಧಾನ -

ಹೆಚ್ಚಿದ ಹೋಳುಗಳನ್ನು ಒಂದು ಬಾಣಲೆ / ಪಾತ್ರೆಯಲ್ಲಿ ಒಂದು ತೊಟ್ಟು ನೀರು, ಹಾಗು ಸ್ವಲ್ಪ ಉಪ್ಪು ಹಾಕಿ ಬೇಯಿಸಿಕೊಳ್ಳಬೇಕು. ಇಲ್ಲಿ ಗಮನಿಸಬೇಕಾದ ವಿಷಯವೇನೆಂದರೆ ತರಕಾರಿಯನ್ನು ಕುಕ್ಕರ್ ನಲ್ಲಿ ಬೇಯಿಸದೆ ಹೀಗೆ ತೆರೆದ ಪಾತ್ರೆಯಲ್ಲಿ ಬೇಯಿಸುವುದರಿಂದ ಹೋಳುಗಳು ಕರಗಿ ಹೋಗುವುದಿಲ್ಲ. ಅಲ್ಲದೇ ಈ ಸಮಯದಲ್ಲೇ ಸ್ವಲ್ಪ ಉಪ್ಪು ಹಾಕುವುದರಿಂದ ಹೋಳುಗಳಿಗೆ ಚೆನ್ನಾಗಿ ಉಪ್ಪು ಹತ್ತಿ ರುಚಿಕಟ್ಟಾಗುತ್ತದೆ.

ಇಲ್ಲಿ ಇನ್ನೊಂದು ಟಿಪ್. ಸೋರೇಕಾಯಿ ಹೆಚ್ಚಿದಾಗ ಅದರ ತಿರುಳನ್ನು ಬಿಸಾಡಬೇಡಿ. ಫ್ರಿಜ್ ನಲ್ಲಿ ತೆಗೆದಿಡಿ.  ಅದನ್ನು ಬಳಸಿ ದೋಸೆ ಮಾಡುವುದನ್ನು ಇನ್ನೊಂದು ಸಲ ಬರೆಯುತ್ತೇನೆ.  ಕುಂಬಳಕಾಯಿ ಹಾಗು ಬಣ್ಣದ ಸೌತೆಕಾಯಿ ತಿರುಳನ್ನು ಸಹ ಇದೇ ರೀತಿ ಬಳಸಬಹುದು.

ಕೆಳಗಿನ ಚಿತ್ರದಲ್ಲಿ ತೋರಿಸಿರುವ ಸಾಮಗ್ರಿಗಳನ್ನು  ಚಿಟಿಕೆ ಅರಿಶಿನ ಹಾಗೂ ಕರಿಬೇವಿನ ಎಸಳುಗಳನ್ನ ಸೇರಿಸಿ ರುಬ್ಬಿಕೊಳ್ಳಿ.
ರುಬ್ಬಲು ಬೇಕಾದ ಸಾಮಗ್ರಿಗಳು

ರುಬ್ಬಿದ ಈ ಮಿಶ್ರಣವನ್ನು ಬೆಂದ ಹೋಳುಗಳೊಂದಿಗೆ ಸೇರಿಸಿ ಕುದಿಸಿ. ಈ ಸಮಯದಲ್ಲಿ ರುಚಿಗೆ ಸ್ವಲ್ಪ ಉಪ್ಪು ಸೇರಿಸಿ. ಹೀಗೆ ಎರಡು ಹಂತಗಳಲ್ಲಿ ಉಪ್ಪು ಬೆರೆಸುವುದರಿಂದ ಹದವಾಗಿ ರುಚಿಕಟ್ಟಾಗುತ್ತದೆ.
ನಂತರ ಮೊಸರು ಬೆರೆಸಿ ಒಂದು ಕುದಿ ಕುದಿಸಿ. ಮೊಸರು ಹಾಕಿದ ಮೇಲೆ ಜಾಸ್ತಿ ಕುದಿಸಬಾರದು.


ಗ್ಯಾಸ್ ಆಫ್ ಮಾಡಿದ ನಂತರ ಒಗ್ಗರಣೆ ಕೊಡಿ. ಈಗ ಮಜ್ಜಿಗೆ ಹುಳಿಯನ್ನು ಬಿಸಿ ಬಿಸಿಯಾಗಿ ಅನ್ನದೊಂದಿಗೆ ಸವಿಯಿರಿ. ಈಗ ನಾನು ತೋರಿಸುವ ಅಳತೆಯಲ್ಲಿ 4-5 ಜನರಿಗೆ ಸಾಲುತ್ತದೆ.


Ingredients -

1. Bottlegaurd cut into pieces
2. Grated coconut - 1 cup
3. Green chillies 2-3 (according to your spiciness requirement)
4. Cumin seeds - 1 Tea spoon
5. Ginger - 1 small piece
6. Pepper - 6-8
7. Coriander seeds - 1 tea spoon/Dhaniya
8. Soaked Channa dal/ roasted Bengal gram
9. Pinch of turmeric powder
10. Curry leaves
11. Curd - 200 ml
12. For Seasoning - Mustard,  Cumin,  1 dry chilly,  curry leaves, pinch of asafoetida/hing
13. Salt to taste

Method of preparation -

Cook cut vegetables in open vessel. Don't pressure cook. Add salt to taste for vegetables.

Grind below ingredients in picture along with curry leaves and turmeric powder.



Add ground paste to cooked vegetables and allow to boil. Add salt to taste in this second stage.

Add curd and allow for boiling again for small time and switch off the gas.

Prepare tadka and add it.

Serve hot with rice. To shown measurements above will serve 4-5 people.