ಮೊನ್ನೆ ಕರ್ಣ, ಕೃಷ್ಣರ ಬಗ್ಗೆ ಬರೆಯುವಾಗ ಕೃಷ್ಣನ ಪಾತ್ರ ಅದೇಕೋ ಬಹಳ ಕಾಡಿತು. ಕೃಷ್ಣನನ್ನಂತೂ ಯಾರೂ ನೇರವಾಗಿ ಕಂಡಿಲ್ಲ. ಚಿತ್ರಪಟಗಳಲ್ಲಿ, ಚಲನಚಿತ್ರಗಳಲ್ಲಿ, ಧಾರಾವಾಹಿಗಳಲ್ಲಿ ನೋಡಿ ಬಲ್ಲೆವು ಅಷ್ಟೇ. ಆದರೆ ಕೆಲವು ಪಾತ್ರಧಾರಿಗಳು ಪಾತ್ರ ನಿರ್ವಹಿಸಿದ ರೀತಿ ನೋಡಿದರೆ ಕೃಷ್ಣ ಹೀಗೆಯೇ ಇದ್ದನೇನೋ ಎನ್ನುವಷ್ಟು ಕರಾರುವಾಕ್ ನಟನೆ, ಅಭಿನಯದ ಹಾವಭಾವದಿಂದ ಅವರ ಚಿತ್ರ ಅಚ್ಚಳಿಯದೇ ಮನಸ್ಸಿನಲ್ಲಿ ಉಳಿದುಬಿಡುತ್ತದೆ.
ಕೃಷ್ಣನ ಪಾತ್ರ ಮಾಡುವುದರಲ್ಲಿ ಎತ್ತಿದ ಕೈ ತೆಲುಗಿನ ಎನ್.ಟಿ.ರಾಮರಾವ್ ಅವರದು. ಕೃಷ್ಣನಾಗಿ ಅವರು ಸುಮಾರು ೧೭ ಚಿತ್ರಗಳಲ್ಲಿ ಅಭಿನಯಿಸಿರಬಹುದು. ಎಲ್ಲದರಲ್ಲೂ ಬಹಳ ಸೊಗಸಾಗಿಯೇ ಕಾಣಿಸಿಕೊಂಡಿದ್ದಾರೆ.
ಕನ್ನಡದಲ್ಲಿ ನಮ್ಮ ಅಣ್ಣಾವ್ರು 'ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮೆ', 'ಮೂರುವರೆ ವಜ್ರ' ಚಿತ್ರಗಳಲ್ಲಿ ಕೃಷ್ಣನಾಗಿ ಅಮೋಘ ಅಭಿನಯ ನೀಡಿದ್ದಾರೆ. ಮೂರೂವರೆ ವಜ್ರದಲ್ಲಿ ನಾರದನ ಪಾತ್ರವೂ ಅವರೇ.
ಎನ್.ಟಿ.ಆರ್. 'ದಾನ ವೀರ ಶೂರ ಕರ್ಣ' ಚಿತ್ರ ಮಾಡಿದಾಗ ಅವರೇ ಕರ್ಣ, ಅವರೇ ದುರ್ಯೋಧನ, ಅವರೇ ಶ್ರೀ ಕೃಷ್ಣ. ಆದರೆ ಡಾ.ರಾಜ್ ಬಭೃವಾಹನ ಚಿತ್ರ ಮಾಡಿದಾಗ ಅವರು ಕೃಷ್ಣನ ಪಾತ್ರ ಮಾಡಲಿಲ್ಲ, ಅದನ್ನು ಆಗಿನ ಕಾಲಕ್ಕೆ ನವನಟರಾಗಿದ್ದ ರಾಮಕೃಷ್ಣ ಅಚ್ಚುಕಟ್ಟಾಗಿ ನಿರ್ವಹಿಸಿದ್ದರು.
ತಮಿಳಿನಲ್ಲಿ ಶಿವಾಜಿ ಗಣೇಶನ್ ಅವರ 'ಕರ್ಣನ್' ಚಿತ್ರದಲ್ಲಿ ಮತ್ತೆ ಎನ್.ಟಿ.ಆರ್. ಅವರೇ ಕೃಷ್ಣ. ಸಾರ್ವಕಾಲಿಕ ಸದಭಿರುಚಿಯ ಚಿತ್ರ 'ಮಾಯಾಬಜಾರ್' ಅಲ್ಲಿಯೂ ಎನ್.ಟಿ.ಆರ್. ಅವರೇ ಕೃಷ್ಣ. ತೆಲುಗಿನ ಮೂಲದ ಈ ಚಿತ್ರ ತಮಿಳು, ಕನ್ನಡಕ್ಕೆ ಡಬ್ ಆಗಿತ್ತು. ಇತ್ತೀಚಿಗೆ ವರ್ಣಮಯವಾಗಿ ಬಿಡುಗಡೆಯಾದಾಗಲೂ ಭಾರೀ ಯಶಸ್ಸು ಕಂಡಿತ್ತು. ಇವರ ಕೃಷ್ಣನ ಚಿತ್ರಗಳು ಸಾಕಷ್ಟಿವೆ. 'ಕೃಷ್ಣ ಪಾಂಡವೀಯಂ' , 'ಕೃಷ್ಣ ತುಲಾಭಾರಂ', 'ದೀಪಾವಳಿ' (ಕನ್ನಡದಲ್ಲಿ ನರಕಾಸುರ ವಧೆ ಎಂದು ಡಬ್ ಆಗಿತ್ತು), 'ಕೃಷ್ಣಾರ್ಜುನ ಯುದ್ಧಮ್' ಇನ್ನೂ ಹಲವು. ತೆಲುಗಿನವರು ಇವರ ಕೃಷ್ಣನ ಪಾತ್ರಕ್ಕೆ ಎಷ್ಟು ಮಾರು ಹೋಗಿದ್ದರೆಂದರೆ, 'ಕುರುಕ್ಷೇತ್ರಂ' ಎಂಬ ತೆಲುಗು ಚಿತ್ರ ಇವರ 'ದಾನ ವೀರ ಶೂರ ಕರ್ಣ' ಚಿತ್ರದ ಸಮಯದಲ್ಲಿಯೇ ಬಿಡುಗಡೆಯಾಗಿತ್ತು. ಇದರಲ್ಲಿ ಶೋಭನ್ ಬಾಬು ಕೃಷ್ಣನ ಪಾತ್ರದಲ್ಲಿ ನಟಿಸಿದ್ದರು. ದಾನ ವೀರ ಶೂರ ಕರ್ಣ' ಅಮೋಘವಾದ ಯಶಸ್ಸು ಕಂಡರೆ, ಕುರುಕ್ಷೇತ್ರಂ ಚಿತ್ರ ಸೋತಿತ್ತು.
ಕನ್ನಡದ ಸಾಮಾಜಿಕ ಚಿತ್ರ 'ದೇವರ ದುಡ್ಡು' ಸಿನಿಮಾದಲ್ಲಿ ಪ್ರಣಯರಾಜ ಶ್ರೀನಾಥ್ ಕೃಷ್ಣನಾಗಿದ್ದರು.
ಇತ್ತೀಚೆಗೆ ಇದೇ ಮಾದರಿಯಲ್ಲಿ ಬಂದ 'ಓ ಮೈ ಗಾಡ್' ಹಿಂದೀ ಚಿತ್ರದಲ್ಲಿ ಅಕ್ಷಯ್ ಕುಮಾರ್ ಕೃಷ್ಣ. ಇದರ ಕನ್ನಡ ಅವತರಣಿಕೆ 'ಮುಕುಂದ ಮುರಾರಿ'ಯಲ್ಲಿ ಕಿಚ್ಚ ಸುದೀಪ ಕೃಷ್ಣ, ತೆಲುಗು ಅವತರಣಿಕೆ 'ಗೋವಿಂದ ಗೋಪಾಲ' ಚಿತ್ರದಲ್ಲಿ ಪವನ್ ಕಲ್ಯಾಣ್ ಕೃಷ್ಣ.

ಪ್ರಖ್ಯಾತ ನಟಿಯೊಬ್ಬರು ಕೃಷ್ಣನ ಪಾತ್ರದಲ್ಲಿ ಮಿಂಚಿ ಹೆಸರು ಗಳಿಸಿದ್ದರು. ಅವರ್ಯಾರು ಗುರುತಿಸಬಲ್ಲಿರಾ ??
ಹೌದು ನಿಮ್ಮ ಊಹೆ ನಿಜ, ತೆಲುಗಿನ 'ಯಶೋದಾ ಕೃಷ್ಣ' ಎಂಬ ಚಿತ್ರದಲ್ಲಿ ಶ್ರೀದೇವಿ ಕೃಷ್ಣನಾಗಿ (ಕಿಶೋರ ಕೃಷ್ಣ) ಮಿಂಚಿದ್ದರು.
ಇನ್ನು ಧಾರಾವಾಹಿಗಳ ವಿಷಯಕ್ಕೆ ಬಂದರೆ ದೂರದರ್ಶನದಲ್ಲಿ ಪ್ರಸಾರವಾದ ಬಿ.ಆರ್.ಚೋಪ್ರಾ ಅವರ 'ಮಹಭಾರತ' ಮತ್ತು ರಮಾನಂದ ಸಾಗರ್ ಅವರ 'ಶ್ರೀ ಕೃಷ್ಣ' ಯಶಸ್ವಿಯಾಗಿ ಪ್ರಸಾರವಾಗಿತ್ತು. 'ಮಹಾಭಾರತ'ದಲ್ಲಿ ನಿತೀಶ್ ಭಾರದ್ವಾಜ್, 'ಶ್ರೀ ಕೃಷ್ಣ'ದಲ್ಲಿ ಸರ್ವದಮನ್ ಬ್ಯಾನರ್ಜಿ ಮತ್ತು ಸ್ವಪ್ನಿಲ್ ಜೋಷಿ (ಕಿಶೋರ ಕೃಷ್ಣ) ಕೃಷ್ಣನಾಗಿ ಅಪಾರ ಜನಮನ್ನಣೆ ಗಳಿಸಿದ್ದರು.
೨೦೧೩ರಲ್ಲಿ ಸ್ಟಾರ್ ಪ್ಲಸ್ ನಲ್ಲಿ ಪ್ರಸಾರವಾದ ಹೊಸ ಮಹಾಭಾರತದಲ್ಲಿ ಸೌರಭ್ ರಾಜ್ ಕೃಷ್ಣ ನಾಗಿ ಮಿಂಚಿದರು.
ಇತ್ತೀಚಿಗೆ ಹೆಚ್ಚಿನ ಪೌರಾಣಿಕ ಚಿತ್ರಗಳನ್ನು ಯಾರೂ ತಯಾರಿಸುತ್ತಿಲ್ಲ. ಎನ್.ಟಿ.ಆರ್. ಪುತ್ರ ಬಾಲಕೃಷ್ಣ ಎನ್.ಟಿ.ಆರ್. ಅವರ ಜೀವನ ಚರಿತ್ರೆಯ ಚಿತ್ರದಲ್ಲಿ ಅವರ ತಂದೆಯ ಪಾತ್ರ ನಿರ್ವಹಿಸಿದಾಗ 'ಮಾಯಾಬಜಾರ್' ಚಿತ್ರದ ಝಲಕ್ ಮತ್ತೆ ತೋರಿಸಿದ್ದರು.
'ಪಾಂಡುರಂಗ ಮಹಾತ್ಮ್ಯಮ್' ಹಾಗೂ 'ಶ್ರೀ ರಾಮರಾಜ್ಯಮ್' ಚಿತ್ರಗಳಲ್ಲಿ ಪಾಂಡುರಂಗ ಹಾಗು ರಾಮನಾಗಿ ಬಾಲಕೃಷ್ಣ ಮಿಂಚಿದ್ದರು. ಕನ್ನಡದ ಇತ್ತೀಚಿನ ಮುನಿರತ್ನ 'ಕುರುಕ್ಷೇತ್ರ ' ಚಿತ್ರದಲ್ಲಿ ರವಿಚಂದ್ರನ್ ಕೃಷ್ಣ ನಾಗಿ ಕಾಣಿಸಿಕೊಂಡಿದ್ದರು.

ಈ ಎಲ್ಲಾ ನಟರಲ್ಲಿ ನನಗೆ ಇಷ್ಟವಾದವರು N.T.R , ಡಾ.ರಾಜ್, ನಿತೀಶ್ ಭರದ್ವಾಜ, ಸರ್ವದಮನ್ ಬ್ಯಾನರ್ಜಿ, ಹಾಗೂ ಕಿಶೋರ ಕೃಷ್ಣ ನಾಗಿ ಸ್ವಪ್ನಿಲ್ ಜೋಷಿ. ನಿಮಗ್ಯಾವ ಕೃಷ್ಣ ಇಷ್ಟವಾದ ? ತಿಳಿಸುವಿರಾ?
signing off

No comments:
Post a Comment