Tuesday, May 30, 2023

ತ್ಯಾಗರಾಜರ "ಎಂದರೋ ಮಹಾನುಭಾವುಲು" ಕನ್ನಡದಲ್ಲಿ !

 



ಮೂಲ ಸಾಹಿತ್ಯ - ತ್ಯಾಗರಾಜರ "ಎಂದರೋ ಮಹಾನುಭಾವುಲು"
ಕನ್ನಡ ಅನುವಾದ ಹಾಗು ಗಾಯನ - ರಕ್ಷಾ ಮಹೇಂದ್ರ
ಯೂಟ್ಯೂಬ್ ಲಿಂಕ್ - https://youtu.be/5dVfo-yKSXM




@@@@@@@@@@@@@@@@@@@@@


||ಪಲ್ಲವಿ||

ಎನಿತೋ ಮಹಾನುಭಾವರು
ಎಲ್ಲರಿಗೂ ವಂದನೆಗಳು...
ಸರ್ವರಿಗೂ ವಂದನೆಗಳು

||ಅನುಪಲ್ಲವಿ ||

ಚಂದ್ರನ ಕಾಂತಿಯ ಹೊಂದಿರುವ ರಾಮನ ಚಂದವನ್ನು ಹೃದಯಾರವಿಂದದಲ್ಲಿ ನೋಡಿ ಬ್ರಹ್ಮಾನಂದವನ್ನು ಅನುಭವಿಸಿದ || ಎನಿತೋ ||


||ಚರಣಗಳು||

ಸಾಮಗಾನಲೋಲ ಮದನನ ಲಾವಣ್ಯ ಕಂಡರು ಧನ್ಯರು

ಚಂಚಲ ಮನಸಿನ ವನಸಂಚಾರವ ನಿಲಿಸಿ ರಾಮ ಮೂರುತಿ ಕಂಡರು || ಎನಿತೋ ||

ಸಗುಣನ ಪಾದಗಳಿಗೆ ಮಾನಸ ಕಮಲವನ್ನೇ ಸಮರ್ಪಣೆಯ ಮಾಡಿದವರೆನಿತೋ

ಪತಿತ ಪಾವನನನು ಪರಾತ್ಪರನ ಕುರಿತು ಪರಮಾರ್ಥದಲಿ ನಿಜ ಮಾರ್ಗದಲಿ ಹಾಡುತಲಿ ಸಲ್ಲಾಪದಲಿ ಸ್ವರಲಯಾದಿ ರಾಗಗಳ ತಿಳಿದವರೆನಿತೋ

ಹರಿಗುಣ ಮಣಿಮಯ ಸರಗಳು ಕೊರಳಲಿ
ಶೋಭಿಸಲಿ ಭಕ್ತಕೋಟಿ ಇಳೆಯಲಿ
ಜ್ಞಾನದಿ ಸ್ನೇಹದಿ ಕರುಣೆಯಲ್ಲಿ ಜಗವೆಲ್ಲವ ಸುಧಾದೃಷ್ಟಿಯಲ್ಲಿ ಕಾಯುವರೆನಿತೋ

ಸೊಗವ ಮೀರಿ ನಡೆಯಬಲ್ಲ ರಾಮನ ಸದಾ ಕಣ್ಣಲಿ ನೋಡುತ ಪುಳಕವು
ನೋಡಿ ಆನಂದ ಸಾಗರದಲಿ ತೇಲಿದರು ಸಂತಸದಲಿ ಯಶವ ಪಡೆದವರೆನಿತೋ

ಪರಮ ಭಾಗವತ ಮೌನಿ ವರಶಶಿ ವಿಭಾಕರ ಸನಕ ಸನಂದನಾ ದಿಗೀಶ ಸುರ ಕಿಂಪುರುಷ ಕನಕ ಕಶಿಪು ಸುತ ನಾರದ ತುಂಬುರು
ಪವನಪುತ್ರ ಬಾಲಚಂದ್ರ ಧರ ಶುಕ ಸರೋಜಭವ ಭೂಸುರ ವರರು

ಪರಮ ಪಾವನರು ಘನರು ಶಾಶ್ವತರು
ಕಮಲಭವ ಸುಖದಿ ಸದಾನುಭವ ಪಡೆದವರೆನಿತೋ

ನಿನ್ನಾ ನಾಮಕೀರ್ತಿ ವೈಭವಗಳನ್ನು
ಪರಾಕ್ರಮ ಧೈರ್ಯಗಳ ಶಾಂತ ಮಾನಸದಿ ನಿನ್ನನ್ನು
ವಚನ ಸತ್ಯದಲಿ ರಘುವರ ನಿನ್ನನು
ಸದ್ಭಕ್ತಿಯಲಿ ನಿನ್ನನು ದುರ್ಮತವಿಲ್ಲದೆ
ಭಕ್ತರೆಲ್ಲ ಪಾಡಿ ನಿನ್ನ ಮನವನು
ಅರಿತು ಸಂತತವು ಗುಣಭಜನಾನಂದ ಕೀರ್ತನೆಯ ಮಾಡುವರೆನಿತೋ

ಪ್ರೇಮದಿ ಉಸಿರು ನಿಲುವ ಕಾಲದಿ ನಿನ್ನಾ
ನಾಮ ಮೊದಲು ನೆನೆಯುವರು
ರಾಮಭಕ್ತರು ತ್ಯಾಗರಾಜ ಹಾಡಿದ ನಿಜ ದಾಸರು
ಇವರೆನಿತೋ ಮಹಾನುಭಾವರು

Karnataka style Vegetable Pulao


 

ಕಪಿಕುಲೇಶ ಹನುಮ ವರದ ರಾಮಚಂದ್ರನಾ - Rama Bhajane

 


ಕಪಿಕುಲೇಶ ಹನುಮ ವರದ ರಾಮಚಂದ್ರನಾ 

ವಿಪುಲ ನಾಮವನ್ನು ಬಿಡದೆ ಜಪಿಸೋ ಮಾನವ ।। ಕಪಿಕುಲೇಶ ।।


ಬಾಲ್ಯದಲ್ಲಿ ಕೌಶಿಕ ಋಷಿಯ ಕ್ರತುವ ಸಲಹಿದ 

ಫಾಲನೇತ್ರ ಹರನ ಧನುವ ಮುರಿದು ಕೆಡುಹಿದ 

ಶೂರತನದಿ ಸೀತೆಯನು ಮದುವೆಯಾಗುತ 

ಧೀರ ಪರಶುರಾಮರನು ಭಂಗಗೊಳಿಸಿದ ।। ಕಪಿಕುಲೇಶ ।।


ಪಿತನ ನೇಮದಿಂದ ಹಿತದಿ ವನಕೆ ತೆರಳಿದ 

ಸತತ ದುಷ್ಟ ದನುಜರನು ಬಿಡದೆ ಸೀಳಿದ 

ಸೂರ್ಯ ಸುತಗೆ ಪಟ್ಟಕಟ್ಟಿ ಪರಮನೆನಿಸಿದ 

ಧೈರ್ಯ ಮುದ್ರಿಕೆ ಕಳುಹಿ ತನ್ನ ವಾರ್ತೆ ತಿಳುಹಿದ ।। ಕಪಿಕುಲೇಶ ।।


ಶರಧಿಗಿರದಿ ಸೇತುವೆಯ ಭರದಿ ಕಟ್ಟಿದ 

ದುರುಳ ರಾವಣನ ಕೊಂದು ಧರೆಯ ಸಲಹಿದ 

ತರುಣಿಯೊಡನೆ ಕೂಡಿ ತನ್ನ ಪುರಕೆ ತೆರಳಿದ 

ಭರತನನು ಪೊರೆದ ಬಳಿಕ ರಾಜ್ಯವಾಳಿದ ।। ಕಪಿಕುಲೇಶ ।।

 

ಪರಮ ವಿಭವದಿಂದ ಸಿಂಹ ಪೀಠವೇರುತ 

ಶರಣು ಜನರ ಬಿಡದೆ ಕಾಯ್ವ ಪರಮ ಪುರುಷನ 

ವಿಪುಲ ನಾಮವನ್ನು ಬಿಡದೆ ಜಪಿಸೋ ಮಾನವ 

ವಿಪುಲ ನಾಮವನ್ನು ಬಿಡದೆ ಜಪಿಸೋ ಮಾನವ 


ಸಂಕ್ಷಿಪ್ತ ದೇವೀ ಮಹಾತ್ಮೆ


ಕಡುಮುಳಿದು ದೇವಿಯೊಳು ಕಾದುವ ದಢಿಗ ದಾನವ ರಕ್ತಬೀಜನ
ಕಡಿದು ರಕುತವ ಪಾನಮಾಡಿದಳಲ್ಲೆ ಮಹಾಕಾಳಿ
ಘುಡು ಘುಡಿಸುತಾ ನಿಶುಂಭ ದೇವಿಯ ಕಡಿದು ಬಿಸುಟುವೆನೆನುತ
ಬರಲವನೊಡಲ ಸೀಳಿ ಮದಾಂಧ ದೈತ್ಯನ ಕೆಡಹಿದಳು ದೇವಿ

ಸುರರ ಬೆದರಿಪ ಶುಂಭನನು ನೆರೆ ತರಿದು ಸುರರನು ಪೊರೆದ
ಕಥೆಯನು ಸುರಥ ನೃಪಗೆಂದನು ಸುಮೇಧಸಮುನಿಪನೊಲವಿನಲಿ
ಇರಲು ನವಸಂಧಿಯಲಿ ರಚಿಸಿದ ಚರಿತವನು ಭಕ್ತಿಯಲಿ ಪೇಳುವ
ನಿರುತ ಪಾಡುವ ಮಾನವರ ಮಹಾದೇವಿ ರಕ್ಷಿಪಳು

'ದೇ' ಎನಲು ದೇಹವು ಪವಿತ್ರವು, 'ವಿ' ಎನಲು ವಿದ್ಯೆಗಳು ಸೇರ್ಪವು
'ಮ' ಎನಲು ಮಹಾಲಕುಮಿ ಕರುಣದಿ ಕಾಯ್ವಳನವರತ
'ಹಾ' ಎನಲು ಹರಿಹರ ಕಟಾಕ್ಷವು, 'ತ್ಮೆ' ಎನಲು ಪರಮಾತ್ಮ ದರುಶನ
'ಕಾಯೆ ದೇವೀಮಹಾತ್ಮೆ' ಎಂಬರ ಸಲಹುವಳು ದೇವೀ

ಹೇಳಿದವರಿಗೆ ಪಾಪ ನಾಶನ,  ಕೇಳಿದವರಿಗೆ ಪುಣ್ಯವರ್ಧನ
ಹೇಳಿ ಕೇಳಿದವರ್ಗೆ ಸ್ವರ್ಗದ ಭೋಗ ರೂಢಿಯಲಿ
ಕಾಲಕರ್ಮವು ಮುಟ್ಟಲಾ ಶ್ರೀಲೋಲನಡಿದಾವರೆಯ ಭಕುತಿಯ
ಪಾಲಿಸುವಳನವರತ ಪಂಪಾದೇವಿ ನಲಿವಿನಲಿ

ಒಂದು ಪದವನು ಹೇಳಿದರೆ ಸಾಕೊಂದು ಪದದಲಿ ಎರಡು
ವಾಕ್ಯವನಂದದಲಿ ಪೇಳಿದರೆ ತಾ ಸಾರೂಪ್ಯಸಮನಿಪುದು
ಕೇಳಿದವರಿಗೆ ಕುಂದದಿಹ ಭಾಗ್ಯವನು ಈವಳು ವೀರನಾರಾಯಣಿ

ನಾರಾಯಣೀ ಸ್ತೋತ್ರ:

ಸುರವರರು ತಾವ್ ತಮ್ಮ ಮನಸಿನ ಹರಕೆ ಕೈಗೂಡಲ್ಕೆ
ಹರ್ಷದಿ ಪರಿಪರಿಯಲಿ ಸ್ತುತಿಸಿದರು ನಾರಾಯಣಿಯನೊಲಿದು

ಸ್ತುತಿಸಿದರು ನಿರ್ಜರರು ದೇವಿಯನತಿ ಮಹಾಸಂತೋಷದಿಂದಲಿ 
ಹತವ ಮಾಡಿದೆ ಶುಂಭನನು ಶುಂಭಾನುಜನನೆಂದು
ಮಿತಿಯು  ಇಲ್ಲದೆ ಸ್ತುತಿಸಿದರು ತಾವತಿ ಭಕುತಿಯಿಂ ದೇವಿನಾಮವ
ಪತಿಪರಾತ್ಪರೆ  ಬ್ರಹ್ಮವೇ ಎಂದೆನುತ ಪೊಗಳಿದರು

ರುಂಡಮಾಲಿನಿ ಬ್ರಾಹ್ಮಿ ವೈಷ್ಣವಿ ಚಂಡಿಯುಮೆ ಹೈಮಾವತೀಶ್ವರಿ
ದಂಡಧಾರಿಣಿ ಗೌರಿ ದುರ್ಗಾನಂದ ಮಹಾದುರ್ಗಿ
ಚಂಡಿ ಖಡ್ಗಿನಿ ಚಕ್ರಿ ಶೂಲಿ ಮುಸುಂಡಿ ಮುದ್ಗರೆ ಶಕ್ತಿಧರೆ
ಕೋದಂಡಧರೆ ನಾರಾಯಣಿಯೆ ನಮೋ ಎಂದುದಮರಗಣ

ಭದ್ರಕಾಳಿ ಭವಾನಿ ಪಾರ್ವತಿ ಭದ್ರಮಂಗಳೆ ಅನ್ನಪೂರ್ಣೆ
ರೌದ್ರೆ ಶಾಕಾಂಬರಿ ಮಹೇಶ್ವರಿ ಅಂಬ ಜಗದಂಬಾ
ಕ್ಷುದ್ರ ಸಂಹರಿ ಷೋಡಶಿಯೆ ಸುಖನಿದ್ರೆ ಭುವನೇಶ್ವರಿ ಜಗನ್ಮಯೆ
ಮುದ್ರಖೇಚರಿ ನಾರಾಯಣಿಯೆ ನಮೋ ಎಂದುದಮರಗಣ

ಮೇನಕಾತ್ಮಜೆ ದಾನವಾಂತಕಿ ಧ್ಯಾನರೂಪೆ ಕರಾಳವದನೆಯೆ
ಮೌನಿಯೋಗಿನಿ ತಾಪಸಿಯೆ ಮಹಾಕಾಳಿ ಮಹಾಶಕ್ತಿ
ಜ್ಣಾನರೂಪಾಮೃತೆಯೆ ಅಚ್ಯುತೆ ಸ್ವಾನುಭವೆ ಭಸ್ಮಾಂಗಿ ಭಗವತಿ
ಪಾನಪಾತ್ರೆಯೆ ನಾರಾಯಣಿಯೆ ನಮೋ ಎಂದುದಮರಗಣ

ಪ್ರೇತದಾಸನೆ ಸರ್ಪಭೂಷಣೆ ತ್ರಾತೆ ಗಿರಿಸುತೆ ಸತ್ಯನಿತ್ಯಳೆ
ಭೂತನಾಥ ಭಯಂಕರಿಯೆ ಶಾಂತಾತ್ಮೆ ಶಂಕರಿಯೆ
ಪ್ರೀತೆ ಪುಣ್ಯೆ ತ್ರಿನೇತ್ರೆ ಈಶ್ವರಿ ಮಾತೆ ಧಾತ್ರಿಯೆ ಭೂತಗಣವರ
ಪೀತವಸನಿಯೆ ನಾರಾಯಣಿಯೆ ನಮೋ ಎಂದುದಮರಗಣ

ಸಿದ್ಧಖೇಚರಿ ದೈತ್ಯಶಮನಿಯೆ ಶುದ್ಧಚೈತನ್ಯಳೆ ವಿಧಾತ್ರಿಯೆ
ರುದ್ರಮಾಯಳೆ ರೌದ್ರಮುಖಿ ರಕ್ತಾಕ್ಷಿ ವಿಮಲಾಕ್ಷಿ
ಬುದ್ಧಿಸಾಕ್ಷಿ ಸುಶಾಂತೆ ಶಾಂಭವಿ ಮುಗ್ಧೆ ಮೂಢೆ ವಿವೇಕಿ ಬಹುಬಲ
ಪದ್ಮವಾಸಿನಿ ನಾರಾಯಣಿಯೆ ನಮೋ ಎಂದುದಮರಗಣ

ಕೋಮಲಾಂಗಿ ಸಹಸ್ರಲೋಚನೆ ಸೋಮಶೇಖರೆ ಮುಕ್ತಕೇಶಿನಿ
ನಿರಾಮಯೆ ನಿರಾಭರಣೆಯೆ ನಿಷ್ಕಳೆ ನಿಜಾನಂದೆ
ಕಾಮರೂಪಿಣಿ ಕಾಮಭಾಷಿಣಿ ಕಾಮುಕೆಯೆ ಕಲ್ಯಾಣಿ ಕರುಣೆಯೆ
ಭೀಮೆ ಭೈರವಿ ನಾರಾಯಣಿಯೆ ನಮೋ ಎಂದುದಮರಗಣ

ವೇದ ವಿನುತೆ ಪರಾಂಬೆ ವೇಣುವಿನೋದಿ ನಾರಾಯಣಿ ನೃಸಿಂಹೆಯೆ
ನಾದ ಬಿಂದು ಕಲಾತೀತೆಯೆ ವರ ಶಾರದಾದೇವಿ
ವಾದಿಮುಖ ಭಂಜಿನಿಯೆ ಸ್ತಂಭಿನಿ ಆದಿಮಧ್ಯಾಂತಂಗಳಿಲ್ಲದ
ವಾದಿದೂರಳೆ ನಾರಾಯಣಿಯೆ ನಮೋ ಎಂದುದಮರಗಣ

ಮಧುಹರೆಯೆ ಕೈಟಭವಿನಾಶಿನಿ ಮದಮಹಿಷ ಮರ್ದಿನಿ
ಮಹಾಸುರ ಕದನಿ ಶುಂಭಾಂತಕಿ ನಿಶುಂಭದ್ವೇಷಿ ಮಹಾಮಾರಿ
ಕದನಿ ಖಡ್ಗ ಕಠಾರಿ ತೋಮರೆ ಸುಧೆಯ ಪಾತ್ರೆ ಸುಶಾಂತೆ ಸುಂದರಿ
ವದನ ವಿಸ್ತರಿ ನಾರಾಯಣಿಯೆ ನಮೋ ಎಂದುದಮರಗಣ

ತಂತ್ರೆ ವಿಕಟಾಂಗಿಯೆ ವಿಮರ್ಶಿನಿ ಯಂತ್ರರೂಪೆ ಮಹೋದರಿಯೆ
ಸುನಿರಂತ್ರ ಪ್ರಣವ ಶ್ರೋತೃಉ ವರಸಾವಿತ್ರಿ ಗಾಯತ್ರಿ
ಮಂತ್ರ ಮಯೆ ಮೂರ್ತಿಯೆ ಜಟಾಧರಿ ಮಂತ್ರೆ ಮಂತ್ರಾಸನೆ ಮಹಾತ್ಮೆಯೆ
ಮಂತ್ರದೈವತೆ ನಾರಾಯಣಿಯೆ ನಮೋ ಎಂದುದಮರಗಣ

ನಮೋ ನಮೋ ಇಂದ್ರಾಣಿಯಾರ್ಯಳೆ ನಮೋ ನಮೋ ಶಿವಪದ್ಮಾವತಿ
ನಮೋ ನಮೋ ಕ್ಷೇತ್ರೇಶ್ವರಾನಂದೆಯೆ ಸುನಂದಿನಿಯೆ
ನಮೋ ನಮೋ ಹ್ರೀಂಕಾರಿ ಶಂಕರಿ ನಮೋ ನಮೋ ಖಟ್ವಾಂಗಿ ಹರಪ್ರಿಯೆ
ನಮೋ ನಮೋ ನಾರಾಯಣಿಯೇ ನಮೋ ಎಂದುದಮರಗಣ

ತ್ರಾಹಿ ಭೀಮೆಯೆ ನಾರಸಿಂಹೆಯೆ ತ್ರಾಹಿ ಚಾಮುಂಡಿಯೆ ಮಹೇಂದ್ರಿಯೆ
ತ್ರಾಹಿ ಭ್ರಮರಿಯೆ ರಕ್ತ ದಂತಿಕೆ ತ್ರಾಹಿ ಶಿವದೂತಿ
ತ್ರಾಹಿ ಮಾಹೇಶ್ವರಿ ವರಾಹಿಯೆ ತ್ರಾಹಿ ಬ್ರಾಹ್ಮಿಯೆ ದೇವದೈವೇ
ತ್ರಾಹಿ ವೈಷ್ಣವಿ ನಾರಾಯಣಿಯೇ ನಮೋ ಎಂದುದಮರಗಣ

ಇಂತು ಸ್ತುತಿಸಲಿಕಾಗ ದೇವಿಯು  ಅಂತು ನುಡಿದಳು
ವೈವಸ್ತ್ವತ ಮನ್ವಂತರವು ಬರುತಿರಲು ಇಪ್ಪತ್ತೆಂಟನೆಯ ಯುಗಕೆ
ಅಂತು ಬರೆ ಶುಂಭಾನಿಶುಂಭರು ಅಂತು ಹುಟ್ಟುವರವರ
ಕೊಲ್ಲಲಿಕ್ಕಂತು ಹುಟ್ಟುವೆ ಯಶೋದೆಯೊಳೆಂದಳಾ ದೇವೀ

ಹುಟ್ಟುವರು ಶುಂಭಾನಿಶುಂಭರು ದಿಟ್ಟ ವೈಪ್ರಾಚಿತ್ರ್ಯರೆನಿಸಿಯೆ
ಕಟ್ಟುವೆನು ನಾ ದುರ್ಗಿಯಾಗಿಯೆ ದ್ವಾಪರಾಂತ್ಯದಲಿ
ಇಷ್ಟು ಕೇಳಿರಿ ಬಹಳಾಭೀಷ್ಟವ ಕೊಟ್ಟು ಸಂತಸದಿಂದ
ಭಕುತರಿಗಿಷ್ಟು ನಿಮಗರಿವಿರಲಿ ಎಂದಳು ಶಾರದಾದೇವಿ

ಫಲಶ್ರುತಿ:
-------------
ಕೇಳಿ ನಿರ್ಜರರದವರು ನಾ ಹೇಳುವೆನು ಮಧುಕೈಟಭರ ನೆರೆ
ಕಾಳಗದಿ ಮಡುಹಿದುದ ಮಹಿಷಾಸುರನ ಕೆಡುಹಿದುದ
ಮೇಲೆ ಶುಂಭಾನಿಶುಂಭರೆಂಬರ ಕಾಲಮಾಡಿದ ಚರಿತವಿದು
ನಿಮ್ಮಾಲಯದಿ ಸ್ತುತಿಸುವುದು ಭಕ್ತಿಯೊಳೆಂದಳಾ ದೇವೀ

ಸ್ತುತಿಸುವುದು ಸೌಮ್ಯಾಷ್ಟಮಿಯೊಳಿದ ಸ್ತುತಿಸುವುದು ಚತುರ್ದಶಿಯು ತದಿಗೆಯು
ಸ್ತುತಿಸುವುದು ಪೌರ್ಣಮಿಯು ಮಂಗಳ ಶುಕ್ರವಾರದೊಳು
ಸ್ತುತಿಸುವುದು "ನವರಾತ್ರಿ ನವದಿನ" ಸ್ತುತಿಸುವುದು ಭಯ
ಭಕುತಿಯಿಂದ್ಲಿ ಸ್ತುತಿಸೆ ಪ್ರತಿದಿನ ಸಿದ್ಡಿಯಹುದೆಂದಳು ಮಹಾದೇವಿ

ಹರಿದುಹೋಹುದು ಸರ್ವ ದುಷ್ಕೃತ ಹರಿವುವುದು ದಾರಿದ್ರ್ಯ ಅರಿಭಯ
ಹರಿದುಹೋಹುದು ರಾಜ ಚೋರವ್ಯಾಳಗಳ ಭಯವು
ಹರಿದು ವೃಶ್ಚಿಕ ಸರ್ವವೃತ ಭಯ ಹರಿದು ಭೂತವ್ರಾತದಂಜಿಕೆ
ಹರಿದು ಸಂತಸಕರವಹುದು ದೇವಿಯ ಚರಿತೆ ಪೇಳಿದೆಡೆ

ರಾಜಸೇವಕನಹನ ರಾಜ್ಯದಿ ಪೂಜೆಗೊಂಬ ಸಮಸ್ತರೊಳು
ವರವ್ಯಾಜ್ಯದೊಳು ಜಯವಹುದು ದೇಶಕ್ಕಧಿಕ ತಾನಾಗಿ
ವಾಜಿ ಗಜಗಳನೇಕ ಕಟ್ಟುವ ಭೋಜನವು ಮೃಷ್ಟಾನ್ನವುಂಬುವ
ಸೋಜಿಗವು ತಾನೇನು ದೇವೀ ಮಹಾತ್ಮೆ ಪೇಳಿದೊಡೆ

ಮಾರಿ ದುರ್ಗಿ ಮಹಾದ್ಭುತದ ಭಯ ತೀರುವುದು ಉತ್ಪಾತ
ತ್ರಿವಿಧವು ಸೇರಿಫ಼ರುವ ಬಹು ಬ್ರಹ್ಮರಾಕ್ಷಸ ಅಡಗಿ ಹೋಗುವುದು
ಸೇರದಿರುತಿಹರವರೆ ಮಿತ್ರರು ದಾರೈಸಿ ಮನ್ನಿಪರು ದೂರದ
ದಾರಿಯವರೇ ಬಹರು ದೇವಿ ಮಹಾತ್ರ್ಮೆ ಪೇಳಿದೆಡೆ

ವಾದ ಮಾಳ್ಪನ ಜಿಹ್ವೆ ಹಿಂದಕೆ ಸೇದುತಿರುವುದಸಾಧ್ಯವೆಂಬುದ
ಸಾಧಿಸುವುದು ಸಿದ್ಧವಾಗದ ಕಾರ್ಯ ಸಿದ್ಧಿಪುದು
ಸೋದರರು ಪಿತೃಮಾತೃ ಸತಿ ಸುತರಾದವರು ಆನಂದ ಪಡುವರು
ಓದಿ ಕೇಳಿದರಾದವರಿಗಹುದೆಂದಳಾ ದೇವೀ

ನಸದಿಹುದು ದುಃಸ್ವಪ್ನವೆಂಬುದು ಸಸನಿಹುದು ಸು:ಸ್ವಪ್ನ ಗೃಹದೊಳೌ 
ಶಿಶುವು ಶಾಂತಿಯಲಿಹುದು ಬಾಲಗ್ರಹವು ದೂರಹುದು
ವಸುಧೆ ಸುದ್ದಿಯ ಕೇಳ್ವ ದೇಹದಿ ಹಸನಿಹುದು ಶುಭಶೋಭನಂಗಳು
ಮುಸುಕಿಹವು ಎನ್ನಯ ಚರಿತ್ರೆಯೊಳೆಂದಳಾ ದೇವೀ

ದಿನಕರುವು ಹೆಚ್ಚುವುವು ಮನೆಯೊಳು ಜಿನಿಸು ಜಿನಿಸಿನ ಧಾನ್ಯ ತುಂಬುತ
ತನಗೆ ಆಗುವ ಫಲವು ನೆನೆಸದೆ ಮುನ್ನ ಕಾರ್ಯಗಳು
ಜನರು ತನ್ನಯ ಹಿಂದೆ ಬರುವರು ಧನವು ಕೊಠಡಿ ಕೊಠಡಿಯಲಿಹುದು
ಇನಿತು ಭಾಗ್ಯವು ಅಹುದು ದೇವಿಯ ಚರಿತೆ ಪೇಳಿದೆಡೆ

ವಿದ್ಯೆ ಶಾಸ್ತ್ರ ವಿವೇಕ ಬರುವುದು ಬುದ್ಡಿ ಚೊಕ್ಕಟವಾಗುವುದು
ಬಹುವಾಕ್ಸಿದ್ಡಿಗಳು ದೊರಕುವುದು ಸಂತಾನಗಳು ಹೆಚ್ಚುವುವು
ಸಿದ್ಡನೆನಿಪನ ಶತೃನಾಶನ ಇದ್ದ ರೋಗವು ಹಾರುವುದು
ದೀನೋದ್ಧರಣವಹುದೆನ್ನ ಚರಿತೆಯೊಳೆಂದಳಾ ದೇವಿ

ಒಂದೆ ಮನದಾಲಿ ಸ್ಮರಿಪ ಮನುಜರಿಗಂದು ತೋರುವೆ
ಸರ್ವಭೇದಾಭೇದ ಖಂಡಿಸಿ ಸರ್ವ ಬ್ರಹ್ಮಮಯವೆಂಬ ಲಕ್ಷ್ಯವನು
ಸಾದರದಿ ನಿಶ್ತೈತ ಸ್ವಾತ್ಮಾ ಬೋಧದಲಿ ಕೂಡಿಸುತಲವನನು
ಸೇದಿಕೊಳ್ಳುವೆನವನ ಎನ್ನೊಳಗೆಂದಳಾ ದೇವೀ

ಉದಕ ಮಧ್ಯದಿ ಕಾಯ್ವೆ ನಾನಾವಿಧವಿಧದ ಸಂಕಟಹರಿಸುವೆ
ಒದಗಿ ಬರೆ ಕಾಡ್ಗಿಚ್ಚು ಕರಿಕೋಣಗಳಿಂದ ರಕ್ಷಿಪೆನು
ಪುದದಿರುವ ಕತ್ತಲೊಳು ಶಸ್ತ್ರದಿ ಬೆದರಿ ಕಡಿಯುವ ವೇಳೆಯಲಿ
ನಾನೊದಗಿ ಕಾಯೆವೆನು ಎನ್ನ ಭಕ್ತರನೆಂದಳಾ ದೇವಿ

ಗಾಳಿ ಪರಿಹರ ಮಾಳ್ಪೆ ಸಿಕ್ಕರೆ ಬಾಳಮಳೆ ನಿಲ್ಲಿಸುವೆ
ಸಿಡಿಲನು ಮೇಲೆ ಹಾಯಲು ತಪ್ಪಿ ಹೋಗುವ ತೆರದಿ ಮಾಡುವೆನು
ಸೋಲಿಸುವೆನು ಮಾಂತ್ರಿಕನ ಧರಣಿಯ ಪಾಲನವ ಮಾಡುವೆನು
ಪರಬಲ ದಾಳಿ ನಿಲ್ಲಿಪೆನೆನ್ನ ಭಕ್ತರಿಗೆಂದಳಾ ದೇವಿ

ಇಂತು ನುಡಿಯಲು ದೇವಿ ನುಡಿಗಳನಾಂತು ಕೇಳುತ
ಸುರವರರು ತಾವಂತು ಚರಿತವ ಸ್ತುತಿಸುತಿದ್ದರು ಮರ್ತ್ಯಲೋಕದೊಳು
ಸಂತಸದಿ ಪಠಿಸೆಂದು ಪೇಳ್ವರು ಚಿಂತಿಸುತ ದೇವಿಯನು
ದೇವಿಯದೆಂತು ಕಳುಹಿಸು ಕೊಂಡರೈ ನಿರ್ಜರರು ತಾವೆಂದಾ

ಶಾಂತಿ ಹೊಂದಿಯೆ ಕಾಳಿ ತನ್ನೊಳಗಂತಡಗಿಸುತ ಮಾತೃಗಣಗಳ
ನಿಂತಳೈ ತಾನೊಬ್ಬಳೇ ಪಾರ್ವತಿಯಾಗಿ ಹಿಮನಗದಿ ಎಂತು ಪೇಳ್ವೆನು
ಸರ್ವಚರಿತೆಯದಂತು ಪಾರ್ವತಿಯಳ ಚರಿತ್ರೆಯ
ಸಂತಸದಿ ಪಠಿಸುವನು ಧನ್ಯನು ಎಂದ ಸಾಂಬಶಿವ

ಸುರವರರು ತಾವ್ ತಮ್ಮ ತಮ್ಮದಿ ಕರವ ಹೊಂದುತ ದಿವಿಜಲೋಕಕೆ
ಅರಸುಗಳು ತಾವಾಗೆ ಸ್ವರ್ಗದ ಸುಖವ ಭೋಗಿಸುತ
ದುರುಳ ಶುಂಭನಿಶುಂಭರಳಿಯಲು ಹರುಷದಲಿ ದೇವಿಯನು
ಮನದೊಳು ನಿರುತ ಧ್ಯಾನಿಸಿದರು ಚಿದಾನಂದಾತ್ಮ ಗುರುವರನಾ

ಮಂಗಳಂ ಬ್ರಹ್ಮಾಣಿಗೆ ಜಯ ಮಂಗಳಂ ಮಾಹೇಶ್ವರಿಗೆ
ಶುಭಮಂಗಳಂ ಕೌಮಾರಿಗೆ ಜಗದಾದಿ ವೈಷ್ಣವಿಗೆ
ಮಂಗಳಂ ವಾರಾಹಿಗೆ ಜಯಮಂಗಳಮ್ ಇಂದ್ರಾಣಿಗೆ
ಶುಭಮಂಗಳಂ ಚಾಮುಂಡಿಸುರನುತೆ ಮಾಯೆ ಪರಶಿವೆಗೆ

 

Monday, May 29, 2023

Notations of "Mandara Pushpavu Neenu" -

 

https://youtu.be/kAVbuWkFoWU

Notations of "Mandara Pushpavu Neenu" -






ಪಾಮಗರಿ ಸ  'ನಿ ರೀ....      ಮಾ ಗರಿಸನಿಪ ಸಾ .... 


 ಹ್ಮೂ.....  ಹ್ಮೂ..      ಹ್ಮೂ..ಹ್ಮು....... 


ರೀರಿಮರಿ ಸಾ ಸ ಸ ಸಾ ಸ       ರೀರಿಮರಿ ಸಾ ಸ ಸ ಸರಿಸ 'ನೀ 


ಮಂದಾರ ಪುಷ್ಪವು ನೀನು     ಸಿಂಧೂರ ಪ್ರತಿಮೆಯು ನೀನು


'ನೀ ರೀ ಮ  ಪಾನಿ ಸ' ನಿ ಪಮಗ.... 


ಗಂಧರ್ವ      ಗಾ..ನ        ವಾ... ಣಿ


ರಿ ಸ   ಗ ಸ   ರಿ ಸ   ಗ ಸ   ರಿ ಸ ....  ಸರಿರಿಮಾ ರಿಮರಿ ಸಾ ಸಾ 


ರಾಣಿ ರಾಣಿ  ರಾಣಿ ರಾ ಣಿ   ರಾಣಿ....  ಎಂದೋ ಮೆಚ್ಚಿದೆ ನಾನು


ಸ ಸ ಸರಿರಿಮಾ ರಿಮರಿ ಸಾ ಸಾ 


ನಿನ್ನ ಎಂದೋ ಮೆಚ್ಚಿದೆ ನಾನು


ಪಾಮಗರಿಸ 'ನೀ ಸ .... 


ಆಹಾ... ಹಾಹಾ..... 




ಪಾಮಾಪಮ ರೀ ಸ ಸ ಸ ಸ ರೀ  ಗ ರಿ ರಿ ಸಸ ಸಾಸ ಸರಿ 'ನೀದಾ 


ಮುಂಜಾನೆ ಹೊನ್ನಿನ ಕಿರಣ...      ಮುತ್ತಿಟ್ಟ ತಾವರೆ ವದನ..... 


'ದ ಸ ಮಾ  ದ ಸ' ದ ಪ ಮಾ  'ದ ಸ ಮಾ  ದ ಸ' ದ ಸ'ದ ಪ ಮಾ  


ರಾ... ಣೀ..   ಆ ಹಾ.. ಹಾ...       ರಾ... ಣೀ..   ಆ ಹಾ.. ಹಾ... ಹಾ... 


ಸ ಸ ರೀ ರೀ ರೀ ರೀ ರಿಗಪಮಗಮರೀ  ಸ ಸ ರೀ ರೀ ರೀ ರೀ ರಿಗಪಮಗಮರೀ  


ನಿನ್ನ ಜಿಂಕೆ ಕಣ್ಣ     ಜಿಗಿದಾ..ಟದಲಿ... ನಿನ್ನ ಚಿಂಕೆ ಕಣ್ಣ     ಜಿಗಿದಾ..ಟದಲಿ... 


'ನೀ ರೀ ಮ  ಪಾನಿ ಸ' ನಿ ಪಮಗ.... 


ತೂ... ರಾಡಿ ತೂ..ಗಿ ಹೋದೆ..... 


ರಿ ಸ   ಗ ಸ   ರಿ ಸ   ಗ ಸ   ರಿ ಸ ....  ಸರಿರಿಮಾ ರಿಮರಿ ಸಾ ಸಾ 


ರಾಣಿ ರಾಣಿ  ರಾಣಿ ರಾ ಣಿ   ರಾಣಿ....  ಎಂದೋ ಮೆಚ್ಚಿದೆ ನಾನು


ಸ ಸ ಸರಿರಿಮಾ ರಿಮರಿ ಸಾ ಸಾ   ಪಾಮಗರಿಸ 'ನೀ ಸ .... 


ನಿನ್ನ ಎಂದೋ ಮೆಚ್ಚಿದೆ ನಾನು...  ಆಹಾ... ಹಾಹಾ.....