ಹೀರೇಕಾಯಿ ಬಹು ಮುಖ್ಯವಾದ ತರಕಾರಿ. ತೊವೆಗಂತೂ ಇದಿಲ್ಲದಿದ್ದರೆ ರುಚಿಯೇ ಇಲ್ಲ. ಹುಳಿ, ಕೂಟು, ಪಲ್ಯಗಳಿಗೂ ಬಲು ಪ್ರಸಿದ್ಧ. ಹೆಚ್ಚಿನವರು ಹೀರೇಕಾಯಿ ಹೆಚ್ಚಿಕೊಂಡು ಸಿಪ್ಪೆ ತೆಗೆದು ಬಿಸಾಡುತ್ತಾರೆ. ಇನ್ನು ಮುಂದೆ ಹೀಗೆ ಮಾಡಬೇಡಿ. ಏಕೆಂದರೆ ಅದರಲ್ಲೂ ಪೌಷ್ಟಿಕ ಸತ್ವ ಇರುತ್ತದೆ. ನಾರಿನಂಶ ಮತ್ತು ಕಬ್ಬಿಣದಂಶ ಹೆಚ್ಚಾಗಿರುವ ಈ ಹೀರೇಕಾಯಿ ಸಿಪ್ಪೆಯನ್ನು ಬಳಸಿ ಇಂದು ರುಚಿಯಾದ ಚಟ್ನಿ ತಯಾರಿಸಲು ತಿಳಿಸಿಕೊಡುತ್ತೇನೆ.
ಬೇಕಾಗುವ ಸಾಮಗ್ರಿಗಳು :
1. ಬಿಡಿಸಿದ ಹೀರೇಕಾಯಿಯ ಸಿಪ್ಪೆ
2. ತೆಂಗಿನ ಕಾಯಿಯ ತುರಿ - 1 ಬಟ್ಟಲು
3. ಉದ್ದಿನಬೇಳೆ - 1 ಟೀ ಸ್ಪೂನ್
4. ಕೊತ್ತಂಬರಿ ಬೀಜ - 1 ಟೀ ಸ್ಪೂನ್
5. ಸಾಸಿವೆ - 1 ಟೀ ಸ್ಪೂನ್
6. ಹಸಿರು ಮೆಣಸಿನಕಾಯಿ - 2-3 (ನಿಮ್ಮ ಖಾರದ ಅಪೇಕ್ಷೆಗೆ ತಕ್ಕಂತೆ)
7. ಬೆಲ್ಲ - ಒಂದು ಸಣ್ಣ ಚೂರು (ಪುಡಿ ಬೆಲ್ಲವಾದರೆ ಟೀ ಸ್ಪೂನ್)
8. ಹುಣಸೆಹಣ್ಣು - ನೆಲ್ಲಿಕಾಯಿ ಗಾತ್ರದಷ್ಟು
9. ಎಣ್ಣೆ - ಒಗ್ಗರಣೆಗೆ 2 ಟೀ ಸ್ಪೂನ್
10. ಕರಿಬೇವಿನ ಎಸಳುಗಳು
11. ಚಿಟಿಕೆ ಇಂಗು
12. ಉಪ್ಪು - ರುಚಿಗೆ ತಕ್ಕಂತೆ
ಮಾಡುವ ವಿಧಾನ :
ಮೊದಲು ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ, ಸಾಸಿವೆ, ಉದ್ದಿನಬೇಳೆ ಹಾಗು ಕೊತ್ತಂಬರಿ ಬೀಜಗಳನ್ನು ಸ್ವಲ್ಪ ಕೆಂಪಾಗುವಂತೆ ಹುರಿಯಿರಿ. ನಂತರ ಹಸಿರು ಮೆಣಸಿನಕಾಯಿ, ಕರಿಬೇವಿನ ಸೊಪ್ಪು, ಚಿಟಿಕೆ ಇಂಗು ಸೇರಿಸಿ ಹುರಿದುಕೊಳ್ಳಬೇಕು.
ಈ ಒಗ್ಗರಣೆಗೆ ಹೀರೇಕಾಯಿಯ ಸಿಪ್ಪೆ ಹಾಕಿ ಚೆನ್ನಾಗಿ ಬಾಡಿಸಿ.
ಈ ಒಗ್ಗರಣೆ ಆರಿದ ಮೇಲೆ, ತೆಂಗಿನ ಕಾಯಿ, ಹುಣಸೆ ಹಣ್ಣು, ಉಪ್ಪು, ಬೆಲ್ಲದ ಜೊತೆ ಸೇರಿಸಿಕೊಂಡು ತಿರುವಿದರೆ, ಚಟ್ನಿ ರೆಡಿ.
ಈ ಚಟ್ನಿ ದೋಸೆ, ಚಪಾತಿ, ಬಿಸಿ ಬಿಸಿ ಅನ್ನ ತುಪ್ಪದ ಜೊತೆ ಸವಿಯಲು ರುಚಿಯಾಗಿರುತ್ತದೆ. ನಾನಿಲ್ಲಿ ಒಂದು ಹೀರೇಕಾಯಿಯ ಸಿಪ್ಪೆ ಬಳಸಿದ್ದೇನೆ, ಮತ್ತೆ ಈ ಪ್ರಮಾಣದ ಅಳತೆಯ ಚಟ್ನಿ 3-4 ಜನರಿಗೆ ಸಾಕಾಗುವಷ್ಟು ಆಗುತ್ತದೆ.
Ingredients
1. Peeled husk of 1 Ridge gourd
2. Grated coconut - 1cup
3. Black gram - 1 tea spoon
4. Coriander seeds - 1 tea spoon
5. Mustard - 1 tea spoon
6. Green chillies - according to your spiciness requirement
7. Powdered Jaggery - 1 Tea spoon
8. Tamarind juice - 2 tea spoon
9. Curry leaves
10. Pinch of asafoetida / hing
11. Cooking oil - 2 tea spoon
12. Salt to taste
Prepare tadka/seasoning with mustard, black gram, coriander seeds, curry leaves, green chilly, pinch of asafoetida with your cooking oil
Add peeled husk of Ridge gourd and fry till it softens.
Grind this seasoning after cooled along with grated coconut, tamarind juice, Jaggery and salt. Your chutney is ready.
This chutney tastes good with dosas, chapati and also with rice. To measurements mentioned above serves 3-4 people.
1. ಬಿಡಿಸಿದ ಹೀರೇಕಾಯಿಯ ಸಿಪ್ಪೆ
2. ತೆಂಗಿನ ಕಾಯಿಯ ತುರಿ - 1 ಬಟ್ಟಲು
3. ಉದ್ದಿನಬೇಳೆ - 1 ಟೀ ಸ್ಪೂನ್
4. ಕೊತ್ತಂಬರಿ ಬೀಜ - 1 ಟೀ ಸ್ಪೂನ್
5. ಸಾಸಿವೆ - 1 ಟೀ ಸ್ಪೂನ್
6. ಹಸಿರು ಮೆಣಸಿನಕಾಯಿ - 2-3 (ನಿಮ್ಮ ಖಾರದ ಅಪೇಕ್ಷೆಗೆ ತಕ್ಕಂತೆ)
7. ಬೆಲ್ಲ - ಒಂದು ಸಣ್ಣ ಚೂರು (ಪುಡಿ ಬೆಲ್ಲವಾದರೆ ಟೀ ಸ್ಪೂನ್)
8. ಹುಣಸೆಹಣ್ಣು - ನೆಲ್ಲಿಕಾಯಿ ಗಾತ್ರದಷ್ಟು
9. ಎಣ್ಣೆ - ಒಗ್ಗರಣೆಗೆ 2 ಟೀ ಸ್ಪೂನ್
10. ಕರಿಬೇವಿನ ಎಸಳುಗಳು
11. ಚಿಟಿಕೆ ಇಂಗು
12. ಉಪ್ಪು - ರುಚಿಗೆ ತಕ್ಕಂತೆ
ಮಾಡುವ ವಿಧಾನ :
ಮೊದಲು ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ, ಸಾಸಿವೆ, ಉದ್ದಿನಬೇಳೆ ಹಾಗು ಕೊತ್ತಂಬರಿ ಬೀಜಗಳನ್ನು ಸ್ವಲ್ಪ ಕೆಂಪಾಗುವಂತೆ ಹುರಿಯಿರಿ. ನಂತರ ಹಸಿರು ಮೆಣಸಿನಕಾಯಿ, ಕರಿಬೇವಿನ ಸೊಪ್ಪು, ಚಿಟಿಕೆ ಇಂಗು ಸೇರಿಸಿ ಹುರಿದುಕೊಳ್ಳಬೇಕು.
ಈ ಒಗ್ಗರಣೆಗೆ ಹೀರೇಕಾಯಿಯ ಸಿಪ್ಪೆ ಹಾಕಿ ಚೆನ್ನಾಗಿ ಬಾಡಿಸಿ.
ಈ ಒಗ್ಗರಣೆ ಆರಿದ ಮೇಲೆ, ತೆಂಗಿನ ಕಾಯಿ, ಹುಣಸೆ ಹಣ್ಣು, ಉಪ್ಪು, ಬೆಲ್ಲದ ಜೊತೆ ಸೇರಿಸಿಕೊಂಡು ತಿರುವಿದರೆ, ಚಟ್ನಿ ರೆಡಿ.
Ingredients
1. Peeled husk of 1 Ridge gourd
2. Grated coconut - 1cup
3. Black gram - 1 tea spoon
4. Coriander seeds - 1 tea spoon
5. Mustard - 1 tea spoon
6. Green chillies - according to your spiciness requirement
7. Powdered Jaggery - 1 Tea spoon
8. Tamarind juice - 2 tea spoon
9. Curry leaves
10. Pinch of asafoetida / hing
11. Cooking oil - 2 tea spoon
12. Salt to taste
Prepare tadka/seasoning with mustard, black gram, coriander seeds, curry leaves, green chilly, pinch of asafoetida with your cooking oil
Add peeled husk of Ridge gourd and fry till it softens.
Grind this seasoning after cooled along with grated coconut, tamarind juice, Jaggery and salt. Your chutney is ready.
This chutney tastes good with dosas, chapati and also with rice. To measurements mentioned above serves 3-4 people.

ಕಸವನ್ನು ರಸ ಮಾಡುವ ನಿಮ್ಮ ರೆಸಿಪಿ ಸೂಪರ್
ReplyDeleteರಮೇಶ್ ಕೃಷ್ಣ
Prepared raksha... Tasting yummy😋
ReplyDeleteThank you 😀
Delete