ನನ್ನ ಮೂರು ವರ್ಷದ ಮಗ ಅಗಸ್ತ್ಯನಿಗೆ ಒಂದು ಹೊಸ ಕ್ರೇಜ್ ಶುರುವಾಗಿದೆ. ಏನಂತೀರಾ.. ಎಲ್ಲದಕ್ಕೂ ಒಂದೇ ಪ್ರಶ್ನೆ ಕೇಳುತ್ತಾನೆ.. 'ಅದಕ್ಕೆ ಇಂಗ್ಲಿಷಲ್ಲೇನಂತಾರೆ??!' ನಾವು ಮನೆಯಲ್ಲಿ ಇಂಗ್ಲಿಷ್ ಮಾತಾಡುವುದು ಬಹಳ ಕಡಿಮೆ. ಕನ್ನಡವೇ ಮಾತೃಭಾಷೆ, ಹೊರಗಡೆಯೂ ಕನ್ನಡದವರೊಂದಿಗೆ ನಾನು ನನ್ನ ಗಂಡ ಕನ್ನಡದಲ್ಲೇ ವ್ಯವಹರಿಸುವುದು. ಭಾಷೆ ಬರೋಲ್ಲ ಅನ್ನೋ ಕೆಲವರೊಂದಿಗೆ ಕೂಡ ಕನ್ನಡದಲ್ಲೇ ವ್ಯವಹರಿಸಿ ಅವರಿಗೆ ಕಲಿಸಲು ಪ್ರಯತ್ನಿಸುತ್ತೇವೆ. ತೀರಾ ಅನಿವಾರ್ಯವಾದಾಗ ಮಾತ್ರ ಇಂಗ್ಲಿಷ್ ಬಳಸುವುದು. ನಾವೇನು ಇಂಗ್ಲಿಷ್ ಭಾಷೆಯ ವಿರೋಧಿಗಳಲ್ಲ. ಖಂಡಿತಾ ಅಂತರರಾಷ್ಟ್ರೀಯ ಭಾಷೆಯಾದ ಇಂಗ್ಲಿಷ್ ಒಂದು ಉತ್ತಮ ಸಂವಹನ ಮಾಧ್ಯಮ. ಆದರೆ ಹಾಗಂತ ನಮ್ಮ ಭಾಷೆಯನ್ನ ಬಳಸದೇ ಇರುವುದು ತಪ್ಪು. ಕನ್ನಡ ಬಲ್ಲವರೊಂದಿಗೆ ಕನ್ನಡದಲ್ಲಿ ಮಾತಾಡುವುದು ನನಗೆ ಇಷ್ಟ, ಇಲ್ಲಿ ಇಂಗ್ಲೀಷ್ಗೆಏನು ಕೆಲಸ ??!!
ನಾನೇನು ಹೇಳುತ್ತಿದ್ದೆ ಎಂದರೆ, ನನ್ನ ಮಗ ಸ್ಕೂಲಿಗೆ ಹೋಗೋಕೆ ಶುರು ಮಾಡಿದ ಮೇಲೆ ಇಂಗ್ಲಿಷ್ ಪ್ರಭಾವ ಸ್ವಲ್ಪ ಜಾಸ್ತಿಯಾಗಿದೆ. ಇತ್ತೀಚಿಗಂತೂ ಹಿಂದೀ ಬೇರೆ ಶುರು ಮಾಡಿದ್ದಾನೆ. ಮೊದಮೊದಲು ನನಗೂ ಇದು ಚೆನ್ನಾಗಿತ್ತು. ಅಕ್ಷರಮಾಲೆ ಕಲಿಸಿದ್ದೇ ಹಾಗೆ. ಸಿಂಹ ಅಂದ್ರೆ Lion, ಅರಸ ಅಂದ್ರೆ King, ಆನೆ ಅಂದ್ರೆ elephant, ಹುಲಿ ಅಂದ್ರೆ tiger, ಇಲಿ ಅಂದ್ರೆ mouse ಅಂತ ಹೇಳಿಕೊಂಡು ಆರಾಮವಾಗಿ ನನಗೇ ಇಂಗ್ಲಿಷ್ ಗೊತ್ತಿರೋದು ಅಂತ ಜಂಭ ಪಡ್ತಾ ಇದ್ದೆ. ಎಲ್ಲದಕ್ಕೂ ಇಂಗ್ಲಿಷ್ನಲ್ಲಿ ಅದಕ್ಕೇನಂತಾರೆ ? ಇದಕ್ಕೇನಂತಾರೆ ಅಂತ ಕೇಳುತ್ತಿದ್ದ ಮಗ ಇದ್ದಕ್ಕಿದ್ದಂತೆ ಸರಾಗವಾಗಿ ಇಂಗ್ಲಿಷ್ನಲ್ಲೇ ಮಾತಾಡಲು ಶುರು ಮಾಡಿಬಿಟ್ಟ. ಉದ್ದುದ್ದ ವಾಕ್ಯಗಳು. 'ಅಮ್ಮ, ಪ್ಲೀಸ್ ಕಮ್', 'ಈ ಡೋಂಟ್ ವಾಂಟ್', 'ಐ ವಾಂಟ್ ಪಡ್ಡು ಟುಡೇ ... 'ಹೀಗೆ ಹಲವಾರು ವಾಕ್ಯಗಳು. ಇವನ ಇಂಗ್ಲಿಷ್ ಸಾಮರ್ಥ್ಯದ ಬಗ್ಗೆ ಬೆರಗಾಗಿ ನಾನು ಅವರ ಟೀಚರ್ ಗೆ ಕೇಳಿದೆ, ನೀವು ಅವನೊಂದಿಗೆ ಯಾವ ಭಾಷೆಯಲ್ಲಿ ಮಾತಾಡುತ್ತೀರಾ ಅಂತ, ನನಗೆ ಅಚ್ಚರಿ ಕಾದಿತ್ತು! 'ಅವರು ಕನ್ನಡದಲ್ಲೇ , ಯಾಕೆ ಮೇಡಂ?' ಅಂತ ಅಂದ್ರು!!! ನಾನು ಇವನ ಇಂಗ್ಲಿಷ್ ವ್ಯಾಮೋಹದ ಬಗ್ಗೆ ಅವರಿಗೆ ವಿವರಿಸಿದೆ. ಆವಾಗ ತಿಳಿಸಿದರು, ಮಕ್ಕಳೆಲ್ಲ ಪರಸ್ಪರ ಇಂಗ್ಲಿಷ್, ಕೆಲವು ನಾರ್ತ್ ಇಂಡಿಯನ್ ಮಕ್ಕಳು ಇದ್ದಾರಲ್ಲ, ಅವರ ಜೊತೆ ಹಿಂದೀ ಮಾತಾಡುತ್ತಾರೆ ಅಂತ ಹೇಳಿದ್ರು. ಪರವಾಗಿಲ್ಲವೇ ಈ ಚಿಕ್ಕ ಮಕ್ಕಳು ಅಂತ ಅಂದುಕೊಂಡೆ.
ಮೊದಲು ಬರೀ ವಸ್ತುಗಳು, ಪ್ರಾಣಿಗಳು ಇವಕ್ಕೆಲ್ಲಾ ಇಂಗ್ಲಿಷ್ ಅಲ್ಲಿ ಏನಂತಾರೆ ಅಂತ ಕೇಳ್ತಿದ್ದ ಮಗನಿಗೆ, ಎಲ್ಲವೂ ಗೊತ್ತಾಗಿ ಬಿಟ್ಟಿದೆ. ಮತ್ತೆ ನನ್ನ ಕೇಳುವುದೇನಿದೆ. ಆದರೆ ಈಗ ಹೊಸದಾಗಿ ನನ್ನ ಇಂಗ್ಲಿಷ್ ಭಾಷಾ ಪ್ರೌಢಿಮೆಯ ಸತ್ವ ಪರೀಕ್ಷೆ ಮಾಡಲು ಶುರು ಮಾಡಿದ್ದಾನೆ. ಹೇಗೆ ಅಂತೀರಾ... ಹೇಳ್ತೀನಿ ಕೇಳಿ....
ಒಮ್ಮೆ ಹೀಗೆ, 'ಶಂಕರ್ ಗುರು' ಸಿನಿಮಾ ಟಿ.ವಿ. ಯಲ್ಲಿ ನೋಡುತ್ತಿದ್ದೆವು. ರಾಜಕುಮಾರ್ ಮತ್ತು ವಜ್ರಮುನಿ ದೃಶ್ಯ ಬರುತ್ತಿತ್ತು. ರಾಜಕುಮಾರ್ ಇವನಿಗೆ ಗೊತ್ತು. ವಜ್ರಮುನಿಯನ್ನು ಮೊದಲ ಬಾರಿ ನೋಡಿದ್ದು. 'ಅವನ್ಯಾರು ?' ಅಂತ ಕೇಳಿದ. ನಾನು 'ವಜ್ರಮುನಿ' ಅಂದೆ. 'ಅದಕ್ಕೆ ಇಂಗ್ಲಿಷಲ್ಲೇನಂತಾರೆ ?' ಅಂದ. ನಾನೇನು ಹೇಳುವುದು ಅಂತ ತಿಳಿಯದೆ ತಡಬಡಾಯಿಸಿದೆ. ನನ್ನ ಗಂಡ ಸ್ವಲ್ಪ ತಲೆ ಓಡಿಸಿ ' Diamond Sage ' (ವಜ್ರ + ಮುನಿ ) ಅಂದರು. 'ಓಹ್. ... ರಾಜ್ಕುಮಾರ್ಗೆ ಏನಂತಾರೆ ??' ಅಂದ. ನಾನು ತಕ್ಷಣ 'Prince' ಅಂದೆ. 'Diamond Sage ' ಅಂತ ಎರಡು ಶಬ್ದ ಕೇಳಿದ್ದ ಅವನಿಗೆ ರಾಜ್ಕುಮಾರ್ಗೆ ಬರೀ 'Prince' ಅಂದಿದ್ದು ಇಷ್ಟ ಆಗಲಿಲ್ಲ. ಅದನ್ನು ಗಮನಿಸಿದ ನನ್ನ ಗಂಡ 'King's son' ಅಂದ್ರು.
ಅವನಿಗೆ ಇಷ್ಟ ಆಯ್ತು. ಅವನಿಗೆ ಈ ಆಟದ ರುಚಿ ಹತ್ತಿಬಿಡ್ತು.ಟಿ.ವಿ.ಯಲ್ಲಿ ಕಂಡ ಕಂಡವರನ್ನೆಲ್ಲ ತೋರಿಸಿ 'ಇಂಗ್ಲಿಷಲ್ಲೇನಂತಾರೆ?' ಅಂತ ಕೇಳಲು ಶುರು ಮಾಡಿಬಿಟ್ಟ. 'ಅಂಬರೀಶ್' ಗೆ 'Sky King', (ಅಂಬರ + ಈಶ), ವಿಷ್ಣುವರ್ಧನ್ ಗೆ 'Adventurous Lion' (ಸಾಹಸ ಸಿಂಹ), ರವಿಚಂದ್ರನ್ ಗೆ 'Sun Moonನ್ ', ಅನಂತ್ ನಾಗ್ ಗೆ 'Infinite Snake', ಹೀಗೆ ಶುರು ಆಯಿತು ಇವನ 'ಇಂಗ್ಲಿಷಲ್ಲೇನಂತಾರೆ?' ಪರ್ವ.
ನನ್ನ ಗಂಡ ' Diamond Sage ', ಮತ್ತು 'King's son' ಪರಿಚಯಿಸಿ ಕೈ ತೊಳೆದುಕೊಂಡಿದ್ದಾರೆ. ಉಳಿದವರಿಗೆಲ್ಲಾ 'ಇಂಗ್ಲಿಷಲ್ಲೇನಂತಾರೆ?' ಅಂತ ಕಂಡು ಹಿಡಿಯುವ ಕಾಯಕ ನನ್ನ ತಲೆಗೆ ಬಿದ್ದಿದೆ. ಒಮ್ಮೆ ಶಿವರಾಜ್ಕುಮಾರ್ ನೋಡಿ ಅವನ ಮಾಮೂಲಿ ಪ್ರಶ್ನೆ ಕೇಳಿದ. ನಾನು ತುಂಬಾ ಯೋಚಿಸಬೇಕಾಗಿ ಬಂದು ಬಿಡ್ತು. ಜೀವನದಲ್ಲಿ ಯಾವಾಗಲೂ ಇಂಥದ್ದೊಂದು ಪ್ರಶ್ನೆ ಇದೆ ಅಂತ ಇಷ್ಟೊಂದು ಯೋಚಿಸಿರಲಿಲ್ಲ. ನಾನು ತುಂಬಾ ಯೋಚಿಸಿ ಕೊನೆಗೆ ಶಿವ ಅಂದರೆ ಮಂಗಳಕರ ಅಲ್ಲವೇ, ಅದಕ್ಕೆ, 'Auspicious King's son' ಅಂತ ಹೇಳಿದೆ. ತಕ್ಷಣ ಮತ್ತೆ ಕೇಳಿದ ಹಾಗಾದರೆ ಪುನೀತ್ ರಾಜಕುಮಾರ್ ಗೆ ಏನಂತಾರೆ? (ಪುನೀತ್ ಅವನಿಗೆ ತುಂಬಾ ಇಷ್ಟ). ನಾನು 'Pure King's son' ಅಂತಾ ಹೇಳಿದೆ. ಮೂರು ಶಬ್ದ ಕೇಳಿದ ಇವನಿಗೆ ಈ ಆಟ ಇನ್ನೂ ರುಚಿಸಿಬಿಟ್ಟಿದೆ.
ಮೊನ್ನೆ KBC ಸುಧಾಮೂರ್ತಿ ಎಪಿಸೋಡ್ ನೋಡಿ ಅವರಿಬ್ಬರಿಗೂ ಏನನ್ನುತ್ತಾರೆ ಅಂತ ಕೇಳಿಬಿಟ್ಟ. ನಾನು 'Boundless Child Like ' ಮತ್ತು 'Nector Idol' ಅಂತ ಹೇಳಿದ್ದೇನೆ.
ಅವನಿನ್ನೂ ಶಾರುಖ್ ಖಾನ್, ಸಲ್ಮಾನ್ ಖಾನ್ ಇವರನ್ನೆಲ್ಲಾ ನೋಡಿಲ್ಲ. ನನಗೆ ತೋರಿಸುವ ಮುಂಚೆ ಅದಕ್ಕೆಲ್ಲಾ ಏನಂತಾರೆ ಇಂಗ್ಲೀಷಲ್ಲಿ ಅಂತ ತಿಳಿಯಬೇಕಿದೆ. ನೀವು ಯೋಚಿಸಿ ತಿಳಿಸಿ ಪ್ಲೀಸ್.
ಮುಗಿಸುವ ಮುನ್ನ: ಮೊನ್ನೆ ಮಗಳು ಜಾನಕಿ ನೋಡಿ 'ಇಂಗ್ಲೀಶಲ್ಲೆನಾಂತರೇ...??' ಅಂತ ಕೇಳಿದ. ನಾನು 'Daughter Daughter of father ' (ಜನಕನ ಮಗಳು ಜಾನಕೀ) ಅಂತ ಹೇಳಿದ್ದೇನೆ. ಸರಿಯಾಗಿದೆ
ಅಲ್ವೇ?
signing off

It's amazing... please publish it in a kannada daily...worth a read..had a good laugh raksha.. talented you are 🤗
ReplyDeleteThank you so much
Deleteಖಡ್ಗಕಿಂತ ಲೇಖನಿಯೆ ಮೇಲು ತುಂಬಾ ಚೆನ್ನಾಗಿದೆ ಲೆಖನ.
ReplyDeleteಮಾತೃಭಾಷೆ ಕಲಿತರೆ ಮಾತ್ರ ಬೇರೆ ಭಾಷೆ ಕಲಿಯಲು ಸಾದ್ಯ. ಆದ್ದರಿಂದ ಕನ್ನಡ ಮೊದಲು ನಂತರವೆ ಇತರ ಭಾಷೆ .ಅತ್ಯ್ತಮ ಲೇಖನ ದಿನ ಪತ್ರಿಕೆಯಲ್ಲಿ ಪ್ರಕಟವಾದರೆ ಜನಸಾಮಾನ್ಯರಿಗೆ ಉಪಯೋಗ ವಾಗುತ್ತದೆ.
ರಮೇಶ್ ಕೃಷ್ಣ
ನಿಮ್ಮ ಅಮೂಲ್ಯವಾದ ಸಲಹೆಗೆ ಧನ್ಯವಾದಗಳು
Deleteನಿನ್ನ ಬರಹದಲ್ಲಿ ನಿನ್ನ ಮಗುವಿಗಿಂತ 'ನಿನ್ನಲ್ಲಿರುವ ಮಗು'ವೇ ಹೆಚ್ಚು ಕಂಡುಬರುತ್ತೆ. ತಾಯ್ತನದ ಆರಂಭಿಕ ವರ್ಷಗಳಲ್ಲಿ ಈ ರೀತಿಯ ಅನುಭವಗಳು ಸಹಜ. ಅದನ್ನೇ ಸ್ವಾರಸ್ಯಕರವಾಗಿ ಬರೆದಿದ್ದೀಯ.
ReplyDeleteವ್ಯಕ್ತಿವಾಚಕ ನಾಮಪದಗಳು ಎಲ್ಲಾ ಭಾಷೆಗಳಲ್ಲೂ ಒಂದೇ ಎಂದು ನಿನ್ನ ಮಗನಿಗೆ ಯಾವಾಗ ತಿಳಿಸುವೆ?
ಅಂದ ಹಾಗೆ ನಿನ್ನ ಮಗ 'ಅಗಸ್ತ್ಯ' ಎನ್ನುವುದಕ್ಕೆ ಇಂಗ್ಲಿಷ್ನಲ್ಲಿ ಏನನ್ನುತ್ತಾರೆ ಎಂದು ಈವರಗೆ ಕೇಳಿಲ್ಲವೆ?
ಮತ್ತೊಂದು ವಿಷಯ. ಬರಹಗಾರರಿಗೆ ಬಿಡುವಿರಬಹುದು. ಓದುಗರಿಗೂ ಬಿಡುವು ನೀಡುವುದು ಅವಶ್ಯಕವಲ್ಲವೆ? ಬರಹಗಾರರೂ ಓದುವ ಮತ್ತು ಪ್ರತಿಕ್ರಿಯಿಸುವ ಪ್ರವೃತ್ತಿಯನ್ನು ಬೆಳಸಿಕೊಳ್ಳಬೇಕು. ಹವ್ಯಾಸಿ ಬರಹಗಾರಿಕೆ ಏಕಮುಖ ಸಂಚಾರಿ ಮಾರ್ಗವಾಗಿ ಸಾಗದು.
ನಿಮ್ಮ ಪ್ರತಿಕ್ರಿಯೆಗೆ, ಸಲಹೆಗೆ ಧನ್ಯವಾದಗಳು. ನನ್ನ ಮಗನಿಗೆ ಇನ್ನೂ ಭಾಷಾ ವ್ಯಾಕರಣ ತಿಳಿಯದು.ಆಗಲೇ 2 ಭಾಷೆಗಳ ಬಹುತೇಕ ಶಬ್ದಗಳನ್ನು ಬಲ್ಲ. ಹಿಂದೀ,ಸಂಸ್ಕೃಭಾಷೆಗಳ ಪರಿಚಯವೂ ಇದೆ. ಅವನ ಶಬ್ದ ಗ್ರಹಿಸುವ ಸಾಮರ್ಥ್ಯ,ಕುತೂಹಲವನ್ನು ಈ ರೀತಿಯಲ್ಲಿ ತಣಿಸುವ ಸಣ್ಣ ಪ್ರಯತ್ನ ನಮ್ಮದು.
Deleteಇನ್ನು ಬರಹಗಾರಿಕೆ/ಓದುಗಾರಿಕೆ ನಿರಂತರವಾಗಿಸುವುದು ಕಷ್ಟವೇ ಸರಿ. ನನ್ನ ಅನುಭವ ಹಾಗು ಯೋಚನಾಲಹರಿಗಳನ್ನ ಅಕ್ಷರ ರೂಪಕ್ಕೆ ಇಳಿಸುವ ಸಣ್ಣ ಪ್ರಯತ್ನ ಅಷ್ಟೇ. ಬಿಡುವಿನ ಸಮಯದಲ್ಲಿ ಲಘು ಬರಹಗಳನ್ನು ಓದಿದಾಗ ಮನಸ್ಸು ಹಗುರವಾಗಿ ಉಲ್ಲಾಸ ಮೂಡುತ್ತದೆ... ಇದು ಸ್ವಾನುಭವ.
Nice hilarious write up Raksha. Liked it very much..keep it up.
ReplyDelete