ಉತ್ತರ ಭೂತ
ಏನಿದು? ಯಾರಿದು ಉತ್ತರ ಭೂತ ಅಂತೆಲ್ಲಾ ಸೀರಿಯಸ್ಸಾಗಿ ಯೋಚನೆ ಮಾಡ್ಬೇಡಿ… .
ಈ ಉತ್ತರ ಭೂತ ನಮ್ಮೆಲ್ಲರಲ್ಲೂ ಅಗೋಚರವಾಗಿ ಅಡಗಿರುತ್ತಾನೆ.. ಪರೀಕ್ಷೆಯ ಸಮಯದಲ್ಲಿ ಹೊರ ಬರುತ್ತಾನೆ… ಇನ್ನೇನು 3 ತಿಂಗಳಲ್ಲಿ ಎಲ್ಲರಿಗೂ ವಾರ್ಷಿಕ ಪರೀಕ್ಷೆಗಳು ಶುರುವಾಗುತ್ತೆ… ಎಸ್. ಎಸ್. ಎಲ್. ಸಿ., ಪಿ. ಯು. ಸಿ. ವಿದ್ಯಾರ್ಥಿಗಳಂತೂ ಮೇ ತಿಂಗಳನಿಂದಲೇ ಬಾಣಲೆಯಲ್ಲಿ ಬೇಯುತ್ತಿರುತ್ತಾರೆ….ಮಾರ್ಚ್ ಬರುವಷ್ಟರಲ್ಲಿ ಬೆಂಕಿಗೇ ಬಿದ್ದಂತೆ ಆಗುತ್ತದೆ…. ನಮಗೋಸ್ಕರವಲ್ಲದಿದ್ದರೂ ತಂದೆ-ತಾಯಿಯರ, ನಂಟರಿಷ್ಟರ, ಕಡೆಯ ಪಕ್ಷ ಪಕ್ಕದ ಮನೆಯವರ ಸಂತೋಷಕ್ಕಾದರೂ 90% ತೆಗೆಯಲೇಬೇಕು. (ಈಗಂತೂ ಬಿಡಿ 90% ಗೆ ಬೆಲೆಯೇ ಇಲ್ಲ… 99 ತೆಗೆದುಕೊಂಡರೂ 1 ಅಂಕ ಏಕೆ ಕಡಿಮೆ ಅಂತ ಕೇಳ್ತಾರೆ… ). ಚೆನ್ನಾಗಿ ಓದಿದ ಮಾತ್ರಕ್ಕೆ ಉತ್ತಮ ಅಂಕ ಬರುತ್ತೆ ಅಂತೇನಲ್ಲ. ಬೇಕಾದರೆ ಕೆಳಗಿನ ಚಿತ್ರದ ಸಾಬೀತಾದ ಸಮೀಕರಣ ಗಮನಿಸಿ!
ಹೂಂ. ... ನಾನೇನು ಹೇಳ ಹೊರಟೆನೆಂದರೆ ಪರೀಕ್ಷೆಯಲ್ಲಿ ನಾವು ಉತ್ತರ ಗೊತ್ತಿರದ ಪ್ರಶ್ನೆಗಳಿಗೆ ಜಾಗ ಖಾಲಿ ಬಿಡಲಾಗದೆ ತುಂಬಿಸುವ ತರಾವರಿ ಉತ್ತರಗಳ ಬಗ್ಗೆ.. ವಿದ್ಯಾರ್ಥಿ ದೆಸೆಯಲ್ಲಿ ಎಲ್ರೂ ಮಾಡುವ ಅಡ್ವೆಂಚರ್ ಅಲ್ವೇ!! ಅಡ್ಡೇಟ್ ಮೇಲ್ ಗುಡ್ಡೇಟು ಅನ್ನೋ ಹಾಗೆ ಒಂದೆರಡು ಮಾರ್ಕು ಹೆಚ್ಚು ಬರಬಹುದೇನೋ ಎಂಬ ಆಸೆ! (ದುರಾಸೆ??)
ನನಗೇ ನೆನಪಿರುವ ಹಾಗ ನಾನು 5ನೇ ತರಗತಿಯಲ್ಲಿದ್ದಾಗ ಒಮ್ಮೆ ಹಿಂದೀ ಪರೀಕ್ಷೆಯಲ್ಲಿ ನಿಮ್ಮ ವಾಕ್ಯದಲ್ಲಿ ಬಳಸಿ ಎಂದು ‘जगह’ ಎಂಬ ಶಬ್ದ ಕೊಟ್ಟಿದ್ದರು. ನಾನೂ ವಾಕ್ಯ ರಚನೆ ಮಾಡಲು ಯೋಚಿಸಿದೆ. ಏನೂ ಹೊಳೆಯಲಿಲ್ಲ. ಜಾಗ ಖಾಲಿ ಬಿಡುವುದೇಕೆ ಎಂದು ನಿಸ್ಸಂಕೋಚವಾಗಿ ಮುಂದಿನ ಮುಖ್ಯ ಪ್ರಶ್ನೆಯ heading ಅನ್ನೇ ಬರೆದಿಟ್ಟೆ.
ಅದೇನು ಎಂದಿರಾ… ‘खाली जगह भरो’!!! ಹಿಂದೀ ಮಿಸ್ ಅದಕ್ಕೆ ಮಾರ್ಕು ಕೊಟ್ಟಿದ್ದಲ್ಲದೇ ಕ್ಲಾಸಿನಲ್ಲಿ ನನ್ನ ಸಮಯಪ್ರಜ್ಞೆಯನ್ನು ಕೊಂಡಾಡಿದ್ದರು. ನಿಜವಾಗಿಯೂ ವಾಕ್ಯ ರಚನೆ ಮಾಡಲು ಪ್ರಯತ್ನ ಪಟ್ಟಿದ್ದ ನನ್ನ ಗೆಳೆಯರು ವ್ಯಾಕರಣ ಸರೀ ಇಲ್ಲದೇ ಮಾರ್ಕು ಕಳೆದುಕೊಂಡಿದ್ದರು!!!
ಇದನ್ನು ಕಂಡ ನನ್ನ ಗೆಳತಿಯೊಬ್ಬಳು ನಿನಗೆ ಇಂಥವೆಲ್ಲಾ ಹೇಗೆ ಗೊತ್ತಾಗುತ್ತೆ ಅಂತ ಕೇಳಿದಳು. ನಾನು ಆಗ ನಮ್ಮ ಸುತ್ತಮುತ್ತ ಏನಿದೆ, ಏನಾಗುತ್ತಿದೆ ಅಂತಾ ಗಮನಿಸುತ್ತಾ ಇರಬೇಕು, ಸಮಯ ಸಂದರ್ಭ ಬಂದಾಗ ಬಳಸಬೇಕು ಅಂತೆಲ್ಲಾ ದೊಡ್ಡದಾಗಿ ಭಾಷಣ ಬಿಗಿದಿದ್ದೆ. ಹೀಗೆ ಮುಂದಿನ ಕನ್ನಡ ಪರೀಕ್ಷೆಗೆ ‘ಶೃಂಗಾರ' ಎಂಬ ಪದವನ್ನು ‘ನಿಮ್ಮ ವಾಕ್ಯದಲ್ಲಿ ಬಳಸಿ’ ಅಂತ ಕೊಟ್ಟಿದ್ದರು. ಆ ವರ್ಷ ಗುಜರಾತಿನಲ್ಲಿ ಭಾರೀ ಭೂಕಂಪ ಸಂಭವಿಸಿತ್ತು. ‘ನಮ್ಮ ಸುತ್ತಮುತ್ತ ಏನಿದೆ, ಏನಾಗುತ್ತಿದೆ ಅಂತಾ ಗಮನಿಸುತ್ತಾ ಇರಬೇಕು, ಸಮಯ ಸಂದರ್ಭ ಬಂದಾಗ ಬಳಸಬೇಕು’ ಅನ್ನುವ ನನ್ನ ಮಾತನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದ ನನ್ನ ಗೆಳತಿ ‘ಗುಜರಾತಿನಲ್ಲಿ ಭೂಕಂಪವಾದಾಗ ನನಗೆ ಶೃಂಗಾರವಾಯಿತು’ ಎಂಬ ವಾಕ್ಯವನ್ನು ರಚಿಸಿ ಮಾರ್ಕು ಕಳೆದುಕೊಳ್ಳುವ ಜೊತೆಗೆ ‘ಗುಜರಾತಲ್ಲಿ ಭೂಕಂಪ ಆದ್ರೆ ನಿಂಗ್ಯಾಕಮ್ಮ ಶೃಂಗಾರ ಆಯ್ತು??!! ‘ ಅಂತ ಮೇಷ್ಟ್ರ ಹತ್ತಿರ ಬೈಸಿಕೊಂಡಿದ್ದಳು.
ಯಾವಾಗಲೂ ನನ್ನ ಟ್ರಿಕ್ಕುಗಳು ಗೆಲ್ಲುತ್ತವೆ ಎಂದೇನಿಲ್ಲ. ‘एक’ ಶಬ್ದದ ವಿರುದ್ಧ ಪದ ಬರೆಯಿರಿ ಎಂದರೆ ‘दो’ ಎಂದು ಬರೆದು ಅದೇ ಹಿಂದೀ ಮಿಸ್ ಕೈಲಿ ಮಂಗಳಾರತಿ ಮಾಡಿಸಿಕೊಂಡಿದ್ದೆ!
ನನ್ನ ಸ್ನೇಹಿತನೊಬ್ಬ ಇದ್ದ. ಅವನದ್ಯಾವಾಗಲೂ ಒಂದೇ ವರಾತ.. ಪೂರ್ತಿ ಉತ್ತರಿಸದಿದ್ದರೆ ಬರೆದಷ್ಟಕ್ಕಾದರೂ ಒಂದಷ್ಟು ಮಾರ್ಕು ಕೊಡಬೇಕಲ್ವೇ ಅನ್ನೋದು ಅವನ ವಾದ. ಹಾಗೆಯೇ ಎಲ್ಲಾ ಮೇಷ್ಟ್ರ ಹತ್ತಿರವೂ ವಾದಿಸುತ್ತಾ ಇದ್ದ. ಒಮ್ಮೆ ಸೈನ್ಸ್ ಮಿಸ್ ಅವನಿಗೆ ಚೆನ್ನಾಗಿ ಬೈದು ಎಲ್ಲರ ಎದುರಿಗೆ ಛೀಮಾರಿ ಹಾಕಿದರು. ಏಕೆ ಗೊತ್ತಾ… ‘Give Reasons' ನಲ್ಲಿ ಒಂದು ಪ್ರಶ್ನೆ… ‘Ice when heated it melts, state the reason’ ಎಂದು… ಅವನು ಬರೆದಿದ್ದ ಉತ್ತರ ‘Ice when heated it melts because… ‘ ಒಂದು ಲೈನ್ ಉತ್ತರ ಬರೆದಿದ್ದೇನೆ ಅರ್ಧ ಮಾರ್ಕ್ ಆದರೂ ಕೊಡಿ ಎಂದು ಕೇಳಲು ಹೋಗಿದ್ದ ಭೂಪ!!!
5ನೇ ತರಗತಿಯಿಂದ 7ನೇ ತರಗತಿಯವರೆಗೆ ವಿಜ್ಞಾನ ವಿಷಯದಲ್ಲಿ ಖಾಯಂ ಪ್ರಶ್ನೆಯೊಂದಿತ್ತು. ಅದ್ಯಾವುದೆಂದರೆ ಮೀನಿನ ಚಿತ್ರ ಬರೆದು ಅದರ ಭಾಗಗಳನ್ನು ಗುರುತಿಸುವುದು. ಅದರಿಂದ ಎಲ್ಲಾ ಶಿಕ್ಷಕರು ವಿಜ್ಞಾನ ಪರೀಕ್ಷೆಗೆ invigilator ಆಗಿ ಬರಲು ಭಯ ಪಡುತ್ತಿದ್ದರು. ಏಕೆಂದು ಹೇಳ್ತೀನಿ ತಾಳಿ, ಮೀನಿನ ಚಿತ್ರ ಬರೆದು ಅದರ ಅಲಂಕಾರ ಮಾಡಲು ಎಲ್ಲಾ ವಿದ್ಯಾರ್ಥಿಗಳು ಒಂದೇ ಸಮಯಕ್ಕೆ ಪೆನ್ಸಿಲ್ ನಿಂದ 'ಟಕ ಟಕ' ಕಟ್ಟುತ್ತಾ ಇದ್ದರು. ಕಾರ್ಡ್ಬೋರ್ಡ್ ಮೇಲೆ ಹೀಗೆ ಕುಟ್ಟಿದಾಗ ಕರ್ಕಶವಾದ ಶಬ್ದ ಪ್ರಕಟವಾಗಿ invigilatorಗೆ ತಲೆನೋವು ಬರುವುದು ನಿಶ್ಚಿತವಾಗಿತ್ತು. ಇದೇ ಶಬ್ದ ಪ್ರಳಯ ಹೈ ಸ್ಕೂಲ್ನಲ್ಲಿಯೂ ಮುಂದುವರೆಯಿತು, ಏಕೆಂದರೆ ಆವಾಗ ಕಪ್ಪೆ ಮತ್ತು ಅಮೀಬಾ ಚಿತ್ರ ಬರೆಯುವುದಿತ್ತು !!!
ಹೀಗೆ ನಾನು 9ನೇ ತರಗತಿಯಲ್ಲಿ ಇದ್ದಾಗ ಕನ್ನಡ ಭಾಷೆಯಲ್ಲಿ ‘ಕಲೆಯ ಆಗರ ಪ್ಯಾರಿಸ್‘ ಎಂಬ ಪಠ್ಯವಿತ್ತು . ಸಂದರ್ಭ ಸಹಿತ ವಿವರಿಸಿ ಎಂದು ಆ ಪಠ್ಯದ ವಾಕ್ಯವೊಂದನ್ನು ಕೊಟ್ಟಿದ್ದರು. ಅದೇ ಸಮಯದಲ್ಲಿ ‘ಪ್ಯಾರಿಸ್ ಪ್ರಣಯ’ ಅಂತಾ ಒಂದು ಚಲನಚಿತ್ರ ಬಂದಿತ್ತು. ನಾನು ಅದೇ ಸಿನಿಮಾ ಗುಂಗಿನಲ್ಲಿ ‘ಈ ವಾಕ್ಯವನ್ನು ‘ಪ್ಯಾರಿಸ್ ಪ್ರಣಯ’ ಎಂಬ ಪಠ್ಯದಿಂದ ಆಯ್ಕೆ ಮಾಡಲಾಗಿದೆ ಎಂದು ಆರಾಮವಾಗಿ ಬರೆದಿದ್ದೆ. ಮೇಷ್ಟ್ರು ಅದನ್ನು ಸುತ್ತು ಹಾಕಿ 1 ಮಾರ್ಕು ಕಳೆದಿದ್ದರು. ಅದನ್ನು ನೋಡಿದಾಗಲೂ ನನಗೆ ಗೊತ್ತಾಗಿಲ್ಲ ಯಾಕಿವರು ಅನ್ಯಾಯವಾಗಿ 1 ಮಾರ್ಕು ಕಳೆದಿದ್ದಾರೆ ಅಂತ ಮನಸ್ಸಿನಲ್ಲೇ ಬೈದುಕೊಂಡಿದ್ದೆ. ಅದು ‘ಕಲೆಯ ಆಗರ ಪ್ಯಾರಿಸ್‘ ಕಣೇ ಅಂತಾ ಗೆಳತಿ ತಲೆಗೊಂದು ಮೊಟಕಿದಾಗಲೇ ಜ್ಞಾನೋದಯವಾಗಿದ್ದು. ಆ ಒಂದು ಮಾರ್ಕು ಬಂದಿದ್ದರೆ ನನಗೆ ಅವತ್ತು 125/125
ಅಂಕ ಬರುತ್ತಿತ್ತು ಕನ್ನಡ ಭಾಷೆಯಲ್ಲಿ, ಅದಕ್ಕೇ ಆ ಪಠ್ಯ, ಆ ವಾಕ್ಯ ಇನ್ನೂ ಮರೆತಿಲ್ಲ.
ಇಂಜಿನಿಯರಿಂಗ್ ಸೇರಿದ ಮೇಲಂತೂ ಭಯಾನಕ ಉತ್ತರ ಭೂತಗಳನ್ನು ನಮ್ಮೊಳಗೆ ಹುದುಗಿಸಿಕೊಂಡಿರುತ್ತಿದ್ದೆವು. ಇಂಜಿನಿಯರಿಂಗೇ ಹಾಗೆ. ಬೃಹತ್ತಾದ ಸಿಲಬಸ್, ಸೆಮಿಸ್ಟರ್ ಪರೀಕ್ಷೆಯ ಸಮಯಕ್ಕೆ ಖಂಡಿತಾ ಮುಗಿಯುವುದಿಲ್ಲ. ಮಾಡಿದ್ದ ಪಾಠವೂ ಅಪ್ಪನಾಣೆ ಅರ್ಥವಾಗಿರುವುದಿಲ್ಲ, ಅದು ಬೇರೆ ವಿಷಯ. ನನ್ನ ವಿಷಯ ಇಲೆಕ್ಟ್ರಾನಿಕ್ಸ್. ಪಾಸಾಗುವುದೇ ತುಂಬಾ ಕಷ್ಟ ಎಂದು ಸೀನಿಯರ್ಸ್ ಮೊದಲೇ ಹೆದರಿಸಿರುತ್ತಿದ್ದರು. 3ನೇ ಸೆಮಿಸ್ಟರ್ನಲ್ಲಿ ಫೀಲ್ಡ್ ಥಿಯರಿ ಅಂತಾ ಒಂದು ಸಬ್ಜೆಕ್ಟ್ ಇತ್ತು. ಇದುವರೆಗೂ ಯಾವ ಇಂಜಿನಿಯರ್ರಿಗೂ ಈ ವಿಷಯ ಸರಿಯಾಗಿ ಅರ್ಥವಾಗಿಲ್ಲ. ಅಂಥವರ್ಯಾರಾದರೂ ಇದ್ದರೆ ಇಲ್ಲಿಂದಲೇ ದೀರ್ಘ ದಂಡ ನಮಸ್ಕಾರ. ಈ ವಿಷಯಕ್ಕೆ ನಮಗೆ ಬರುತ್ತಿದ್ದ ಲೆಕ್ಚರರ್ ಏನೇ ಬರೆದರೂ ಕೊಡುತ್ತಿದ್ದದ್ದು ಪೇಜಿಗೆರಡೇ ನಂಬರ್! ನಿಮಗೆ ಇಂಟರ್ನಲ್ಸ್ ನಲ್ಲಿ 25 ನಂಬರ್ ಬೇಕೆಂದರೆ ಖಂಡಿತ 50 ಪೇಜ್ ಬರೆಯಲೇ ಬೇಕು. 5 ಪೇಜು ಬರೆಯುವಷ್ಟು ಅರ್ಥವಾಗದೇ ಇರೋದನ್ನು 50 ಪೇಜಿನಷ್ಟೇನು ಬರೆಯುವುದು??!! ಇಲ್ಲಿ ಎಂಥೆಂಥ ಉತ್ತರ ಭೂತಗಳೂ ಫೇಲಾಗುತ್ತಿದ್ದವು.!!!
ಇಂಜಿನಿಯರಿಂಗ್ ಅಲ್ಲಿನ ಒಬ್ಬ ಭೂಪ ನೋಡಿ... Integrated circuit ಒಂದನ್ನು ವಿವರಿಸಲು DDLJ ಕಥೆ ಬರೆದಿದ್ದಾನೆ. ಕೆಳಗಿನ ಚಿತ್ರದಲ್ಲಿರುವ ಉತ್ತರ ಪೂರ್ಣವಾಗಿ ಓದಿ.
ಈ ಉತ್ತರ ಭೂತಗಳ ಕಥೆ ನಿರಂತರ. ಪರೀಕ್ಷೆಗಳಿರುವ ತನಕ ಇವುಗಳಿಗೆ ಸಾವಿಲ್ಲ. ಪರೀಕ್ಷಾ ಸಮಯದಲ್ಲಿ ಎಲ್ಲ ವಿದ್ಯಾರ್ಥಿಗಳಿಗೂ ಒಳ್ಳೆಯ ಅಂಕಗಳು ಬರಲಿ ಎಂದು ಆಶಿಸುತ್ತಾ ನನ್ನ ಈ ಲಘು ಬರಹವನ್ನು ಮುಗಿಸುತ್ತಿದ್ದೇನೆ …..
ಮರೆತಿದ್ದೆ… .ಕೆಲವು ಮಹಾನ್ ಉತ್ತರ ಭೂತಗಳ ಸ್ಯಾಂಪಲ್ಲುಗಳನ್ನು ನೋಡಿ:

ಒಮ್ಮೆ ಸ್ಕೂಲ್ ಡೇಸ್ ಗೆ ಹೋಗಿ ಬಂದೆ.. ಚೆನ್ನಾಗಿ ಬರ್ದಿದಿಯ ರಕ್ಷಾ.. ನಾನು ಮಾಡಿದ್ದ ಕಿತಾಪತಿಗಳ ನೆನಪಾಯಿತು.
ReplyDeleteThank you 😀
DeleteOohh..neevu ide kitaapatine maadidra😁😁😁
DeleteSchools Days Memories are Ever Remembering ಕಾಲೆಜ್ನಲ್ಲಿ ಓದೊವರೆವಿಗು ಒಳ್ಳೆ Happy Life ಕಾಲೇಜ್ ಬಿಟ್ಟು ಬಂದ ಮೇಲೆ ಮತ್ತೀಬರದು Life .
ReplyDeleteHowdu khandita.. Pratikriyege dhanyavaada...
Deleteuttara bhoota nijakkoo adbhutavagide
ReplyDeleteDhanyavaadagaLu
Delete