Wednesday, September 6, 2023

Pogadirelo Ranga - Sri Purandara Dasa Raga - Shankarabharana


ಪೋಗದಿರೆಲೋ... ರಂಗ  
***************************

ಕಾಲ ಮೇಲೆ ಮಲಗಿ ಸಿಂಪಿಯಲಿ 
ಹಾಲ ಕುಡಿದು ಬೆಳೆದೇ ..... 
ಮೂರುಲೋಕವು ನಿನ್ನ ಉದರದಲ್ಲಿರಲು 
ಈರೇಳು ಲೋಕವನು ಈರಡಿ ಮಾಡಲು 
ಮೂರುಲೋಕದೊಡೆಯ ಶ್ರೀ ಪುರಂದರ ವಿಠಲ 
ನಿನ್ನ ಬಾಲಕತನದ ಲೀಲೆಗೆ ನಮೋ ನಮೋ

ಪೋಗದಿರೆಲೋ ರಂಗ
ಬಾಗಿಲಿಂದಾಚೆ
ಪೋಗದಿರೆಲೋ ರಂಗ
ಭಾಗವತರು ಕಂಡು
ಭಾಗವತರು ಕಂಡು
ಎತ್ತಿ ಕೊಂಡೊಯ್ವರು
ಪೋಗದಿರೆಲೋ ರಂಗ

ಸುರಮುನಿಗಳು ತಮ್ಮ
ಹೃದಯ ಕಮಲದಲ್ಲಿ
ಸುರಮುನಿಗಳು ತಮ್ಮ
ಹೃದಯ ಕಮಲದಲ್ಲಿ
ಪರಮಾತ್ಮನ ಕಾಣದೆ
ಅರಸುವರು
ದೊರಕದ ವಸ್ತುವು
ದೊರಕಿತು ತಮಗೆಂದು
ದೊರಕದ ವಸ್ತುವು
ದೊರಕಿತು ತಮಗೆಂದು
ಹರುಷದಿಂದಲಿ ನಿನ್ನ
ಕರೆದೆತ್ತಿಕೊಂಬುವರು
ಪೋಗದಿರೆಲೋ ರಂಗ


ಅಗಣಿತ ಗುಣ ನಿನ್ನ
ಜಗದ ನಾರಿಯರೆಲ್ಲ
ಅಗಣಿತ ಗುಣ ನಿನ್ನ
ಜಗದ ನಾರಿಯರೆಲ್ಲ
ಹಗೆಯಾಗಿ ನೋಳ್ವರೋ  ಗೋಪಾಲನೇ
ಮಗುಗಳ ಮಾಣಿಕ್ಯ
ತಗಲಿತು ಕರಕೆಂದು
ವೇಗದಿಂದಲಿ ಬಂದು
ಬಿಗಿದಪ್ಪಿಕೊಂಬುವರು
ಪೋಗದಿರೆಲೋ ರಂಗ


ದಿಟ್ಟ ನಾರಿಯರೆಲ್ಲ
ಇಷ್ಟವ ಸಲಿಸೆಂದು
ದಿಟ್ಟ ನಾರಿಯರೆಲ್ಲ
ಇಷ್ಟವ ಸಲಿಸೆಂದು
ಅಟ್ಟಟ್ಟಿ ಬೆನ್ನಟ್ಟಿ
ತಿರುಗುವರೋ...... (sndrsndp )
ಅಟ್ಟಟ್ಟಿ ಬೆನ್ನಟ್ಟಿ
ತಿರುಗುವರೋ
ಸೃಷ್ಟೀಶ ಪುರಂದರ
ವಿಠಲ ರಾಯನೇ
ಸೃಷ್ಟೀಶ ಪುರಂದರ
ವಿಠಲ ರಾಯನೇ
ಇಷ್ಟಿಷ್ಟು ಬೆಣ್ಣೆಯ
ಕೊಟ್ಟೇನೋ ರಂಗಯ್ಯ
ಪೋಗದಿರೆಲೋ ರಂಗ
ಬಾಗಿಲಿಂದಾಚೆ

ಪೋಗದಿರೆಲೋ ರಂಗ