ನಮ್ಮೆಲ್ಲರ identity ಇರುವುದು, ಮುಂದುವರೆಯುವುದು ನಮ್ಮ ಹೆಸರಿನೊಂದಿಗೆ. ಹೆಸರೇ ಅಲ್ಲವೇ ವ್ಯಕ್ತಿಗಳನ್ನು ಗುರುತಿಸುವ ಸಾಧನ. ಪೂರ್ತಿ ಹೆಸರು ಹೇಳಿ ಎಂದರೆ ನಮ್ಮ initials (ಮುಂದಕ್ಷರಗಳು) ಅನ್ನು ಸೇರಿಸಿ ಹೇಳುತ್ತೇವೆ. ಸಾಮಾನ್ಯವಾಗಿ ದಕ್ಷಿಣ ಭಾರತೀಯರಲ್ಲಿ 2 ಮುಂದಕ್ಷರಗಳನ್ನು ಕೊಡುತ್ತಾರೆ.
ನಮ್ಮ ಪೌರಾಣಿಕ ಪಾತ್ರಗಳಿಗೆ ಇದೇ ರೀತಿ initials ಇದ್ದಿದ್ದರೆ ಹೇಗಿರುತ್ತೆ..? ನೋಡೋಣ ಬನ್ನಿ. ರಾಮನ ಹೆಸರು initialsನೊಂದಿಗೆ A.D. ಶ್ರೀ ರಾಮಚಂದ್ರ (Ayodhya Dasharatha Shriramachandra), ಕೃಷ್ಣ ನಿಗೆ M. V. ಕೃಷ್ಣ (Mathura Vasudeva Krishna). ಪಾಂಡವರ initials H. P (Hastinaavathi Pandu) ಎಂದಾಗುತ್ತಿತ್ತು. ಕೌರವರದ್ದು H. D.ದುರ್ಯೋಧನ, H.D.ದುಶ್ಯಾಸನ (Hastinaavathi Drutharashtra Duryodhana, ಇವರ initials ಗಮನಿಸಿ ನೀವು ಇನ್ಯಾರರನ್ನೋ ನೆನಪಿಸಿಕೊಂಡರೆ ಅದು ನನ್ನ ತಪ್ಪಲ್ಲ!) ಎಂದಾಗುತ್ತಿತ್ತು. ಕೆಲವರನ್ನು initials ಜೊತೆಗೆ ಕರೆಯಲು ಬಹಳ ಮಜಾ ಇರುತ್ತದೆ. ನನ್ನ ಸ್ನೇಹಿತೆಯೊಬ್ಬಳ initials K. D ಅಂತಿತ್ತು. (ಕಡೂರು ದಯಾನಂದ್) ಅವಳನ್ನ ನಾವೆಲ್ಲಾ K. D ಅಂತ ರೇಗಿಸುತ್ತಿದ್ದೆವು. ಅವಳು ಹೇಳುವವರೆಗೂ ಎಲ್ಲರಿಗೂ ಹೇಳಿದಳು, ಹಾಗೆ ಕರೆಯಬೇಡಿ ಎಂದು. ಜೋರು ಮಾಡಿದಳು, ಕೊನೆಗೆ ಗೋಗರೆದಳು. ಆದರೂ ಯಾರೂ K. D. ಅನ್ನುವುದನ್ನು ಮಾತ್ರ ನಿಲ್ಲಿಸಲಿಲ್ಲ. ಹಾಗಾಗಿ ಅವಳು D. K. ಎಂದು initials ಬದಲಾಯಿಸಿಕೊಂಡಳು. ನನ್ನ ಇನ್ನೊಬ್ಬ ಗೆಳೆತಿಯ initials T. K. ಅಂತ. (ತರೀಕೆರೆ ಕುಮಾರಸ್ವಾಮಿ). ಅವಳ initials ಪ್ರಭಾವವೋ ಏನೋ, ಅವಳು ಎಲ್ಲರನ್ನೂ ಟೀಕಿಸುತ್ತಲೇ ಇರುತ್ತಾಳೆ!!
M. Y. ಕವನ ಎನ್ನುವವಳನ್ನು ಎಲ್ಲಾ ಹುಡುಗರೂ My Kavana ಎಂದು ರೇಗಿಸುತ್ತಿದ್ದರು. ನಮ್ಮ ಶಿವಮೊಗ್ಗ ಜಿಲ್ಲೆಯ ಸಂಸದರಾದ ರಾಘವೇಂದ್ರ ಅವರ initials B. Y(ಬೂಕನಕೆರೆ ಯಡಿಯೂರಪ್ಪ) ಹಾಗಾಗಿ ಅವರಿಗೆ ನಾವು ಅವರ ಹೆಸರಿನ ಜೊತೆ ಯಾವಾಗಲೂ ಟಾಟಾ (By) ಹೇಳಬಹುದು. ಅನಂತಮೂರ್ತಿಯವರಿಗೆ ನೀವೇ ಅನಂತಮೂರ್ತಿ ಅಂತ ಜ್ಞಾಪಿಸುತ್ತಾ ಇರಬಹುದು. (You Are, U. R. Ananthamurthy). ಮುಖ್ಯಮಂತ್ರಿ ಚಂದ್ರು ಖಾಯಂ ಮುಖ್ಯಮಂತ್ರಿ ಆದಂತೆ ಕೆಲವರು initials ದಯೆಯಿಂದ ಆರಾಮವಾಗಿ ಬೃಹತ್ ಹುದ್ದೆಗೆಳನ್ನು ಅಲಂಕರಿಸಿರುವ ಉದಾಹರಣೆಗಳಿವೆ. (S. P, D.C ). ಕೆಲವರು ಪುಕ್ಕಟೆಯಾಗಿ ಸ್ನಾತಕೋತ್ತರ ಪದವಿಗಳನ್ನು ಪಡೆದ ನಿದರ್ಶನಗಳೂ ಇವೆ.(M. A, M. S, M.D, C. A). ನನ್ನ initials displayನಲ್ಲಿ ನೋಡಿ ನಾನು HR departmentನವಳು ಎಂದೂ ಅನೇಕರು ಭಾವಿಸಿದ್ದಾರೆ.
initials ಬಳಸುವಾಗ ಕೆಲವೊಮ್ಮೆ ಜಾಗರೂಕರಾಗಿರದಿದ್ದರೆ ಅಪಾರ್ಥವಾಗಿ, ಅಭಾಸವಾಗುವ ಸಾಧ್ಯತೆಗಳಿವೆ. ಉದಾಹರಣೆಗೆ ಸತ್ಯಮೂರ್ತಿ ಎನ್ನುವವರ initial 'A' ಆಗಿದ್ದು ಅವರು A SATHYAMURTHY ಎಂದು ಈ ರೀತಿಯಾಗಿ ಬರೆದುಕೊಂಡರೆ ಅಸತ್ಯಮೂರ್ತಿ ಎಂದು ಅಪಾರ್ಥವಾಗುವುದಿಲ್ಲವೇ? ಹಾಗೆಯೇ ರಾಮಾರಾವ್ ಎನ್ನುವ ಹೆಸರಿನವರ initial 'D' ಆಗಿದ್ದು ಅವರು D RAMA RAO ಎಂದು ಬರೆದುಕೊಂಡರೆ ಡ್ರಾಮಾರಾವ್ ಎಂದು ಅಭಾಸವಾಗುತ್ತದೆ.
ಆದರೂ ಇವುಗಳನ್ನು ಬಿಟ್ಟು ನಮ್ಮ identity ಪೂರ್ಣವಾಗುವುದಿಲ್ಲ..ಅಲ್ವೇ… ಅಂದ ಹಾಗೆ ನಿಮ್ಮ initials ಏನು? Comments ಮೂಲಕ ತಿಳಿಸಿ!!
Signing off



ನಿಮ್ಮಿಇನಿಷಿಉಲ್ ಬ್ಲಗ್ ತುಂಬಾ ಚೆನ್ನಾಗಿ ಇದೆ. ಇನಿಷಿಯಲ್ಗಳು ವ್ಯಕ್ತಿಯ ಬಯೊಡೇಟಾ ಇದಂತೆ. ಶಾಲಾ ಕಾಲೇಜುಗಳಲ್ಲಿ ಬರಿಇನಿಷಿಉಲ್ ಮೂಲಕವೆ ಸಂಬೂದಿಸಿವುದು. ವಿದ್ಯಾರ್ಥಿಗಳು ಶಿಕಷಕರ ಹೆಸರೆ ಗೊತ್ತಿರುವುದಿಲ್ಲ. Time table ನಲ್ಲಿಇನಿಷಿಯಲ್ ನಮೋದಿಸಲು ಮಾತ್ರ ಜಾಗ ಇರುತ್ತದೆ . ಆದ್ದರಿಂದ ಇನಿಷಿಯಲ್ಸ್ ಜೀವನದಲ್ಲಿ ಹಾಸುಹೊಕ್ಕಾಗಿ ಬೆಸೆದಿದೆ
ReplyDeleteರಮೇಶ್ ಕೃಷ್ಣ ಹಾಸನ್
ಪ್ರತಿಕ್ರಿಯೆಗೆ ಧನ್ಯವಾದಗಳು
Delete