ಈ ಚಳಿಗಾಲದಲ್ಲಿ ಸಂಜೆಯ ಸಮಯದಲ್ಲಿ ನಾಲಿಗೆ ಏನಾದರೂ ಕುರುಕಲು ತಿಂಡಿ ಬಯಸುತ್ತದೆ. ಆಗ ಚಟ್ ಪಟ್ ಅಂತ ನಿಪ್ಪಟ್ಟು ಮಾಡಿಕೊಳ್ಳಬಹುದು. ಅಲ್ಲದೇ ಒಮ್ಮೆ ಮಾಡಿಕೊಂಡರೆ, ತಿಂಗಳವರೆಗೂ ತಿನ್ನಬಹುದು.
ಬೇಕಾದ ಸಾಮಗ್ರಿಗಳು :
1. ಅಕ್ಕಿ ಹಿಟ್ಟು - 1 ಕಪ್
2. ಕಡಲೇಹಿಟ್ಟು - 1/4 ಕಪ್
3. ಕಡಲೇಬೀಜ - 2 ಟೇಬಲ್ ಸ್ಪೂನ್
4. ಹುರಿಗಡಲೆ - 1 ಟೇಬಲ್ ಸ್ಪೂನ್
5. ಕರಿಬೇವಿನ ಎಸಳುಗಳು
6. ಬಿಳಿ ಎಳ್ಳು (optional) - 1 ಟೀ ಸ್ಪೂನ್
7. ಅಚ್ಚ ಖಾರದಪುಡಿ - 2 ಟೀ ಸ್ಪೂನ್
8. ಜೀರಿಗೆ - 1 ಟೀ ಸ್ಪೂನ್
9. ಉಪ್ಪು ರುಚಿಗೆ
10. ಕರಿಯಲು ಎಣ್ಣೆ
ಮಾಡುವ ವಿಧಾನ :
ಕಡಲೇಬೀಜವನ್ನು ಒಂದು ಬಾಣಲೆಯಲ್ಲಿ ಎಣ್ಣೆ ಇಲ್ಲದೇ ಹುರಿದುಕೊಳ್ಳಿ.
ಹುರಿದ ಕಡಲೇಬೀಜ, ಹುರಿಗಡಲೆ, ಕರಿಬೇವಿನ ಎಸಳುಗಳನ್ನ ಮಿಕ್ಸರ್ ನಲ್ಲಿ ಅರ್ಧ ಸುತ್ತು ತಿರುಗಿಸಿ.
ಈಗ, ಈ ಮಿಶ್ರಣವನ್ನು ಅಕ್ಕಿ ಹಿಟ್ಟು, ಕಡಲೇ ಹಿಟ್ಟು, ಅಚ್ಚ ಖಾರದಪುಡಿ, ಜೀರಿಗೆ, ಉಪ್ಪು ಸೇರಿಸಿ ಎಲ್ಲಾ ಬೆರೆಸಿಕೊಳ್ಳಿ. (ನಿಮಗೆ ಬೇಕಾದರೆ ಬಿಳಿ ಎಳ್ಳು, 1 ಸಣ್ಣಗೆ ಹೆಚ್ಚಿದ ಹಸಿರುಮೆಣಸಿನಕಾಯಿ ಸೇರಿಸಿ)
ಹಿಟ್ಟು ಕಲಸುವ ಮುನ್ನ ಕಾದ ಎಣ್ಣೆ 1 ಟೀ ಸ್ಪೂನ್ ಹಾಕಿಕೊಳ್ಳಲು ಮರೆಯದಿರಿ.
ಸ್ವಲ್ಪ ಸ್ವಲ್ಪವಾಗಿ ನೀರು ಹಾಕಿ, ಗಟ್ಟಿಯಾಗಿ (ನಿಪ್ಪಟ್ಟು ತಟ್ಟುವ ಹದ) ಕಲಸಿಕೊಂಡು, ಬಾಳೆ ಎಲೆಯಲ್ಲಿ ತಟ್ಟಿ, ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೂ ಕರೆದರೆ, ರುಚಿ ರುಚಿಯಾದ, ಗರಿ ಗರಿಯಾದ ನಿಪ್ಪಟ್ಟು ರೆಡಿ.
(ಬಾಳೆ ಎಲೆ ಇಲ್ಲದವರು, ತೆಳುವಾದ ಪ್ಲಾಸ್ಟಿಕ್ ಹಾಳೆಯನ್ನು ಬಳಸಬಹುದು). ನಾನು ಹೇಳಿರುವ ಅಳತೆಗೆ, 15-18 ನಿಪ್ಪಟ್ಟುಗಳನ್ನು ಮಾಡಬಹುದು.
Ingredients
1. Rice flour - 1 cup
2. Gram flour - 1/4 cup
3. Ground nuts - 2 table spoon
4. Fried bengal gram - 1 table spoon
5. Curry leaves
6. Red chilli powder - 2 tea spoon
7. Jeera - 1 tea spoon
8. Salt to taste
9. Oil for deep fry
Dry roast ground nuts, grind it with fried Bengal gram(1/2 round in mixer) and curry leaves.
Add this powder with Rice flour, gram flour, red chilly power, jeera, salt and a tea spoon of boiled oil give a good mix.
Add water little by little and prepare the dough. Pat the dough on banana leaf and deep fry the nippattu till it turns golden brown. (Use thin plastic cover /sheet if you don't have banana leaves)
Crispy delicious nippattu is ready to serve.
To the measurements mentioned above, you can prepare 15-18 Nippattus

ಚಟ್ ಪಟ್ ನಿಪ್ಪಟ್ ಸೂಪರ್
ReplyDeleteರಮೇಶ್ ಕೃಷ್ಣ
Thank you
ReplyDelete