ಇಂದು ಮೊಬೈಲ್ ಮೇಲೆ ಕಣ್ಣಾಡಿಸುತ್ತಿದ್ದಾಗ ಹಲವಾರು 'Happy Hanuma Jayanthi' ಮೆಸೇಜುಗಳು ಹರಿದಾಡುತ್ತಿದ್ದವು. ಹನುಮ ಜಯಂತಿ ಚೈತ್ರ ಮಾಸದಲ್ಲಿ ಅಲ್ಲವೇ, ಇವತ್ತು ಯಾವ ಹನುಮ ಜಯಂತಿ ಎಂದು ತಲೆ ಕೆರೆದುಕೊಳ್ಳುವಂತಾಯ್ತು. ಆಮೇಲೆ ಕೇರಳ, ತಮಿಳುನಾಡಿನ ಕಡೆ ಈ ದಿನ ಆಚರಿಸುತ್ತಾರೆ ಎಂದು ಯಾರೋ ಹೇಳಿದರು. ಹೋಗಲಿ ಬಿಡಿ, ಹನುಮನ ನೆನೆಯುಲು ದಿನದ ಹಂಗ್ಯಾಕೆ ಎಂದುಕೊಂಡು ಹನುಮನ ಬಗ್ಗೆ ನನಗೆ ತಿಳಿದಿರುವ ಕೌತುಕಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.
ಎಲ್ಲರಿಗೂ ಗೊತ್ತಿರುವ ಹಾಗೆ ಹನುಮನನ್ನು 'ಪವನಸುತ', 'ವಾಯುಪುತ್ರ', 'ಮಾರುತಿ' ಎನ್ನುತ್ತಾರೆ. ಅಂಜನಾದೇವಿ ಅವನ ತಾಯಿ. ಕೇಸರಿ ಮಹಾರಾಜನ ಪತ್ನಿ. ಹಾಗಾದರೆ ಹನುಮ 'ವಾಯುಪುತ್ರ' ಹೇಗಾದ? ಕುತೂಹಲಕರ ಸಂಗತಿ ಹೇಳ್ತೀನಿ ಕೇಳಿ. ದಶರಥನು ಪುತ್ರ ಕಾಮೇಷ್ಟಿ ಯಾಗ ಮಾಡುತ್ತಿದ್ದ ಸಮಯದಲ್ಲಿ ಇತ್ತ ಕೇಸರಿ ಮತ್ತು ಅಂಜನಾದೇವಿಯರು ಪುತ್ರಾಪೇಕ್ಷೆಯಿಂದ ಶಿವನನ್ನು ಪ್ರಾರ್ಥಿಸುತ್ತಿದ್ದರಂತೆ. ಅಗ್ನಿದೇವನು ದಶರಥನಿಗೆ ಪಾಯಸವನ್ನು ಪ್ರಸಾದಿಸಿದಾಗ, ಅಲ್ಲಿಗೆ ಬಂದ ಗರುಡ ಪಕ್ಷಿಯೊಂದು ಸ್ವಲ್ಪ ಪಾಯಸವನ್ನು ಅಪಹರಿಸಿ ದೂರ ಹಾರಿ ಹೋಯಿತಂತೆ. ಶಿವನ ಆದೇಶದ ಮೇರೆಗೆ ವಾಯುದೇವನು ತನ್ನ ಶಕ್ತಿಯಿಂದ ಆ ತೊಟ್ಟು ಪಾಯಸವನ್ನು ಅಂಜನಾದೇವಿಯ ಕೈ ಸೇರುವ ಹಾಗೆ ಮಾಡಿದನಂತೆ. ಅದನ್ನು ಸ್ವೀಕರಿಸಿದ ಅಂಜನಾದೇವಿಯ ಗರ್ಭದಲ್ಲಿ ಆಂಜನೇಯನು ಜನಿಸಿದನು ಎಂಬ ಪ್ರತೀತಿಯಿದೆ. ವಾಯುವಿನ ಶಕ್ತಿಯಿಂದ ಜನಿಸಿದನಾದ್ದರಿಂದ ಆಂಜನೇಯನು ವಾಯುಪುತ್ರನೆನಿಸಿದನು.
ಇನ್ನೊಂದು ಕುತೂಹಲದ ಸಂಗತಿಯೆಂದರೆ ಹನುಮಂತನಿಗೆ ಮಕರಧ್ವಜನೆಂಬ ಮಗನಿದ್ದಾನೆ ಎಂಬ ವಿಷಯ. ಆಜನ್ಮ ಬ್ರಹ್ಮಚಾರಿಯಾದ ಹನುಮಂತನಿಗೆ ಮಗನೆಲ್ಲಿಂದ ಬಂದ!!!?? ಹೌದು.. ತನ್ನ ಬಾಲದಿಂದ ಲಂಕಾದಹನ ಮಾಡಿದಮೇಲೆ, ಸಮುದ್ರವೊಂದರಲ್ಲಿ ಉರಿಯಾರಿಸಿಕೊಳ್ಳಲು ಬಾಲವನ್ನು ಆಡಿಸುತ್ತಾ ಇದ್ದಾಗ ಅವನ ಬೆವರ ಹನಿಗಳನ್ನು ಸೇವಿಸಿದ ಮೀನಿನಲ್ಲಿ ಮಕರಧ್ವಜ ಜನಿಸಿದನಂತೆ! ಏನು ಸೋಜಿಗವಲ್ಲವೇ.
ಕಿಷ್ಕಿಂಧಾ ಕಾಂಡದಿಂದ ಮುಂದೆ ರಾಮಾಯಣದ ತುಂಬಾ ಹನುಮನ ತರಲೆಗಳೇ ತುಂಬಿಕೊಂಡಿವೆ!
ನೀವು ಕೆಲವು ಚಿತ್ರಗಳಲ್ಲಿ ಮೈ ತುಂಬಾ ಸಿಂಧೂರ ಬಳಿದುಕೊಂಡ ಹನುಮನನ್ನು ಗಮನಿಸಿರಬಹುದು, ಇದರ ಹಿಂದಿನ ಗುಟ್ಟೇನು ಗೊತ್ತೇ? ಒಮ್ಮೆ ಸೀತಾದೇವಿಯು ಹಣೆಗೆ ಸಿಂಧೂರವಿಟ್ಟದ್ದನು ಗಮನಿಸಿ, ಹೀಗೇಕೆ ಮಾಡುವೆ ಎಂದು ಹನುಮನು ಕೇಳಿದನಂತೆ. ಆಗ ರಾಮನ ದೀರ್ಘಾಯಸ್ಸಿಗಾಗಿ ಎಂದು ಸೀತೆಯ ಹೇಳಿದ್ದನ್ನು ಕೇಳಿ ಹನುಮ ತನ್ನ ಮೈ ಮೇಲೆಲ್ಲಾ ಸಿಂಧೂರ ಬಳಿದುಕೊಂಡ, ತನ್ನ ಪ್ರಭುವಿನ ದೀರ್ಘಾಯಸ್ಸಿಗಾಗಿ!! ಇಂದಿಗೂ ನಾವು ಹನುಮನ ಗುಡಿಗಳಲ್ಲಿ ಸಿಂಧೂರ ಕೊಡುವುದನ್ನು ಕಾಣಬಹುದು.
ರಾಮನ ಯುಗಾಂತ್ಯವಾಗುವ ಸಮಯದಲ್ಲಿ, ಹನುಮ ನನ್ನನ್ನು ತೆರಳಲು ಬಿಡುವುದಿಲ್ಲ ಎಂಬುದನ್ನರಿತಿದ್ದ ರಾಮ ಬೇಕಂತಲೇ 'ನನ್ನ ಉಂಗುರವೊಂದು ಕಳೆದುಹೋಗಿ ಪಾತಾಳಲೋಕ ಸೇರಿಕೊಂಡಿದೆ, ಹುಡುಕಿ ತಾ' ಎಂದು ಕಳಿಸಿ, ಅವನ ಅವತಾರ ಮುಗಿಸಿದನಂತೆ!!
ದ್ವಾಪರದಲ್ಲೂ ಹನುಮನ ಪಾತ್ರವಿದೆ. ಸೌಗಂಧಿಕಾ ಪುಷ್ಪ ಪ್ರಕರಣದಲ್ಲಿ ಭೀಮನನ್ನು ಎದುರಾದ ಕಥೆ ಎಲ್ಲರಿಗೂ ಗೊತ್ತಿರುವುದೇ. ಅಲ್ಲದೇ ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನನ ರಥದ ಧ್ವಜದ ಲಾಂಛನವಾಗಿದ್ದು ಅರ್ಜುನನ ಹೆಸರಿಗೆ ತಕ್ಕಂತೆ ವಿಜಯನನ್ನಾಗಿಸಿದ. ಅದಕ್ಕೇ ಪಾರ್ಥನನ್ನು 'ಕಪಿಧ್ವಜ' ಎನ್ನುವುದು.
ಚಿರಂಜೀವಿಯಾದ ಹನುಮನೇ ತುಳಸೀದಾಸರಿಗೆ ರಾಮಾಯಣದ ಕಥೆಯನ್ನು ತಿಳಿಸಿ ರಾಮಾಯಣ ಬರೆಯಲು ಪ್ರೇರಣೆ ನೀಡಿರುವುದು ಹೇಳುತ್ತಾರೆ.
ಹನುಮನ ಬಗೆಗಿನ ಕುತೂಹಲಕಾರೀ ಸಂಗತಿಗಳನ್ನು ಇಲ್ಲಿ ಕಲೆ ಹಾಕಿ ನಿಮಗೆ ತಿಳಿಸುವ ಸಣ್ಣ ಪ್ರಯತ್ನ ಮಾಡಿದ್ದೇನೆ ಅಷ್ಟೇ... ಹನುಮ ಸ್ಮರಣೆ ಮಾಡುತ್ತಾ ಅವರಂತೆ ನಾವೂ ಧೈರ್ಯಶಾಲಿಗಳಾಗುವ ಪ್ರಯತ್ನ ನಾವೆಲ್ಲಾ ಮಾಡುವಂತಾಗಲಿ ಎಂದು ಆಶಿಸುತ್ತಾ...
signing off
ಎಲ್ಲರಿಗೂ ಗೊತ್ತಿರುವ ಹಾಗೆ ಹನುಮನನ್ನು 'ಪವನಸುತ', 'ವಾಯುಪುತ್ರ', 'ಮಾರುತಿ' ಎನ್ನುತ್ತಾರೆ. ಅಂಜನಾದೇವಿ ಅವನ ತಾಯಿ. ಕೇಸರಿ ಮಹಾರಾಜನ ಪತ್ನಿ. ಹಾಗಾದರೆ ಹನುಮ 'ವಾಯುಪುತ್ರ' ಹೇಗಾದ? ಕುತೂಹಲಕರ ಸಂಗತಿ ಹೇಳ್ತೀನಿ ಕೇಳಿ. ದಶರಥನು ಪುತ್ರ ಕಾಮೇಷ್ಟಿ ಯಾಗ ಮಾಡುತ್ತಿದ್ದ ಸಮಯದಲ್ಲಿ ಇತ್ತ ಕೇಸರಿ ಮತ್ತು ಅಂಜನಾದೇವಿಯರು ಪುತ್ರಾಪೇಕ್ಷೆಯಿಂದ ಶಿವನನ್ನು ಪ್ರಾರ್ಥಿಸುತ್ತಿದ್ದರಂತೆ. ಅಗ್ನಿದೇವನು ದಶರಥನಿಗೆ ಪಾಯಸವನ್ನು ಪ್ರಸಾದಿಸಿದಾಗ, ಅಲ್ಲಿಗೆ ಬಂದ ಗರುಡ ಪಕ್ಷಿಯೊಂದು ಸ್ವಲ್ಪ ಪಾಯಸವನ್ನು ಅಪಹರಿಸಿ ದೂರ ಹಾರಿ ಹೋಯಿತಂತೆ. ಶಿವನ ಆದೇಶದ ಮೇರೆಗೆ ವಾಯುದೇವನು ತನ್ನ ಶಕ್ತಿಯಿಂದ ಆ ತೊಟ್ಟು ಪಾಯಸವನ್ನು ಅಂಜನಾದೇವಿಯ ಕೈ ಸೇರುವ ಹಾಗೆ ಮಾಡಿದನಂತೆ. ಅದನ್ನು ಸ್ವೀಕರಿಸಿದ ಅಂಜನಾದೇವಿಯ ಗರ್ಭದಲ್ಲಿ ಆಂಜನೇಯನು ಜನಿಸಿದನು ಎಂಬ ಪ್ರತೀತಿಯಿದೆ. ವಾಯುವಿನ ಶಕ್ತಿಯಿಂದ ಜನಿಸಿದನಾದ್ದರಿಂದ ಆಂಜನೇಯನು ವಾಯುಪುತ್ರನೆನಿಸಿದನು.
![]() |
| ಕೇಸರಿ - ಅಂಜನಾದೇವಿಯರೊಂದಿಗೆ ಹನುಮ |
| ಮಕರಧ್ವಜ |
ಕಿಷ್ಕಿಂಧಾ ಕಾಂಡದಿಂದ ಮುಂದೆ ರಾಮಾಯಣದ ತುಂಬಾ ಹನುಮನ ತರಲೆಗಳೇ ತುಂಬಿಕೊಂಡಿವೆ!
ನೀವು ಕೆಲವು ಚಿತ್ರಗಳಲ್ಲಿ ಮೈ ತುಂಬಾ ಸಿಂಧೂರ ಬಳಿದುಕೊಂಡ ಹನುಮನನ್ನು ಗಮನಿಸಿರಬಹುದು, ಇದರ ಹಿಂದಿನ ಗುಟ್ಟೇನು ಗೊತ್ತೇ? ಒಮ್ಮೆ ಸೀತಾದೇವಿಯು ಹಣೆಗೆ ಸಿಂಧೂರವಿಟ್ಟದ್ದನು ಗಮನಿಸಿ, ಹೀಗೇಕೆ ಮಾಡುವೆ ಎಂದು ಹನುಮನು ಕೇಳಿದನಂತೆ. ಆಗ ರಾಮನ ದೀರ್ಘಾಯಸ್ಸಿಗಾಗಿ ಎಂದು ಸೀತೆಯ ಹೇಳಿದ್ದನ್ನು ಕೇಳಿ ಹನುಮ ತನ್ನ ಮೈ ಮೇಲೆಲ್ಲಾ ಸಿಂಧೂರ ಬಳಿದುಕೊಂಡ, ತನ್ನ ಪ್ರಭುವಿನ ದೀರ್ಘಾಯಸ್ಸಿಗಾಗಿ!! ಇಂದಿಗೂ ನಾವು ಹನುಮನ ಗುಡಿಗಳಲ್ಲಿ ಸಿಂಧೂರ ಕೊಡುವುದನ್ನು ಕಾಣಬಹುದು.
| ಸಿಂಧೂರ ಬಳಿದುಕೊಂಡಿರುವ ಹನುಮ |
ರಾಮನ ಯುಗಾಂತ್ಯವಾಗುವ ಸಮಯದಲ್ಲಿ, ಹನುಮ ನನ್ನನ್ನು ತೆರಳಲು ಬಿಡುವುದಿಲ್ಲ ಎಂಬುದನ್ನರಿತಿದ್ದ ರಾಮ ಬೇಕಂತಲೇ 'ನನ್ನ ಉಂಗುರವೊಂದು ಕಳೆದುಹೋಗಿ ಪಾತಾಳಲೋಕ ಸೇರಿಕೊಂಡಿದೆ, ಹುಡುಕಿ ತಾ' ಎಂದು ಕಳಿಸಿ, ಅವನ ಅವತಾರ ಮುಗಿಸಿದನಂತೆ!!
ದ್ವಾಪರದಲ್ಲೂ ಹನುಮನ ಪಾತ್ರವಿದೆ. ಸೌಗಂಧಿಕಾ ಪುಷ್ಪ ಪ್ರಕರಣದಲ್ಲಿ ಭೀಮನನ್ನು ಎದುರಾದ ಕಥೆ ಎಲ್ಲರಿಗೂ ಗೊತ್ತಿರುವುದೇ. ಅಲ್ಲದೇ ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನನ ರಥದ ಧ್ವಜದ ಲಾಂಛನವಾಗಿದ್ದು ಅರ್ಜುನನ ಹೆಸರಿಗೆ ತಕ್ಕಂತೆ ವಿಜಯನನ್ನಾಗಿಸಿದ. ಅದಕ್ಕೇ ಪಾರ್ಥನನ್ನು 'ಕಪಿಧ್ವಜ' ಎನ್ನುವುದು.
ಚಿರಂಜೀವಿಯಾದ ಹನುಮನೇ ತುಳಸೀದಾಸರಿಗೆ ರಾಮಾಯಣದ ಕಥೆಯನ್ನು ತಿಳಿಸಿ ರಾಮಾಯಣ ಬರೆಯಲು ಪ್ರೇರಣೆ ನೀಡಿರುವುದು ಹೇಳುತ್ತಾರೆ.
![]() |
| ತುಳಸೀದಾಸರೊಂದಿಗೆ ಹನುಮ |
ಹನುಮನ ಬಗೆಗಿನ ಕುತೂಹಲಕಾರೀ ಸಂಗತಿಗಳನ್ನು ಇಲ್ಲಿ ಕಲೆ ಹಾಕಿ ನಿಮಗೆ ತಿಳಿಸುವ ಸಣ್ಣ ಪ್ರಯತ್ನ ಮಾಡಿದ್ದೇನೆ ಅಷ್ಟೇ... ಹನುಮ ಸ್ಮರಣೆ ಮಾಡುತ್ತಾ ಅವರಂತೆ ನಾವೂ ಧೈರ್ಯಶಾಲಿಗಳಾಗುವ ಪ್ರಯತ್ನ ನಾವೆಲ್ಲಾ ಮಾಡುವಂತಾಗಲಿ ಎಂದು ಆಶಿಸುತ್ತಾ...
signing off

ಜೈ ಜೈ ಜೈ ಹನುಮಂತ ವೀರ ಶಿರೋಮಣಿ ವೀರಾಗ್ರಣಿ ನಿ ಮಹಾನ್ ಶಕ್ತಿ ವಂತ
ReplyDeleteರಮೇಶ್ ಕೃಷ್ಣ
ಹೌದು
ReplyDeleteGood selection of the topic on the occasion of Hanuma Jayanthi.
ReplyDeleteIn my previous blog I had asked the question who is the shreshta kannadiga of all times? The correct answer is 'Hanuma'. In fact his birthplace, Anjanadri hill can be seen during your visit to Hampi.
After losing Seeta at Nasik, Rama proceeded towards south as per Jatayu's direction. Towards south of Nasik is Hampi, which was called Kishkinda during those days.
Noted Kannada poet Vijaya Narasimha who does intensive research while writing poems has described Hanuma as 'Kannada Pungava kula Hanuman' in his immortal poem 'Ramana Avataara'!
You also could have included....
1) Hanuma is the first ever super hero for our Kids, who has inspired characters like He-man, spider man etc.
2) Hanuma was a great communicator. His dialogues with strangers Ram-Laxman on his first meeting is considered a 'communication master-piece' as described saint Valmiki.
3) Hanuma although was all capable, had put-up the image of modesty and even low esteem for himself. He wanted somebody to coax him to realize his strengths. During 'samudra langhana' time, elderly Jambavanta had to coax him to make him realize his abilities in crossing the mighty sea. Perhaps Hanuma wanted people to realize the importance of modesty and the need for motivating 'gurus'. Also Hanuma wanted to convey the message of the power of motivation to young children and parents.
Hanuma was also a great singer. 'Hanuma Thodi' was his pet raga.
Had you taken some more time to glean such thoughts, you could have come out with a more worthy blog to our mighty Hanuma.
Thank you so much for the value added comment on my blog
ReplyDeleteಶರಣು ಶರಣು ಹೇ ಭಾಗವತೋತ್ತಮ ಕನ್ನಡ ಕುಲಪುಂಗವ ಹನುಮ