Monday, December 9, 2019

ಐಕ್ಯ




ಹೇಳಲಿಲ್ಲ ನನಗೆ ನೀನು, ಹೊರಟೆಯಲ್ಲವೇ
ಒಂದು ಸಾರಿ ಹೇಳಬೇಕು ಎನಿಸಲಿಲ್ಲವೇ!?
ನೀನು ಕೇಳಿದೆಲ್ಲವ ನಾ ಕಲಿಸಲಿಲ್ಲವೇ



ಹಸುವ ಹಾಲ ಕರೆಯ ಬರದ ನೀ ಅಳುತಿದ್ದೆಯಲ್ಲವೇ
ನಿನ್ನ ಪಾಲ ಹಾಲು ನಾನೇ ಕರೆಯಲಿಲ್ಲವೇ

ಗೋಪಿಯರ ಕಾಡಿ ನೀ ಓಡುತಿದ್ದೆಯಲ್ಲವೇ
ಎಲ್ಲ ಸೇರಿ ನಿನ್ನ ಹಿಡಿಯ ಬರಲು ನಾ ತಡೆಯಲಿಲ್ಲವೇ

ನಿದ್ದೆ ಬರದು ಎಂದು ನೀ ಕೊರಗುತಿದ್ದೆಯಲ್ಲವೇ
ಕಾರಿರುಳ ಎಣಿಸದೆ ನಾನೋಡಿ ಬರುತಿದ್ದೆನಲ್ಲವೇ

ನಮ್ಮೀ ಪ್ರೇಮ-ಗಂಗೆಯ ಸಾಕ್ಷಿ ಯಮುನೆಯಲ್ಲವೇ?
ಅವಳ ದಾಟಿ ನೀ ನನ್ನ ತೊರೆದೆ, ಮನಸು ಮರುಗಲಿಲ್ಲವೇ

ಆದರೂ ಒಮ್ಮೆ ಕೇಳಿಯೇ ಬಿಡುವೆ ಎಂದೂ ಎನಿಸಲಿಲ್ಲವೇ
ಮನದರಸಿಯೇ ಆಗಲಿತ್ತು ಪಟ್ಟದರಸಿಯಲ್ಲವೇ

ರಾಧೆ ಕಂಗಳ ಮಾತು ಕೃಷ್ಣಗೆ ಕೇಳಿತಲ್ಲವೇ
ಕಂಗಳಲೇ ಉತ್ತರಿಸಿದ ಅವ ಜಾಣನಲ್ಲವೇ

ಅಯ್ಯೋ! ಪೆದ್ದಿ ಇನ್ನೂ ನಿನಗೆ ತಿಳಿಯಲಿಲ್ಲವೇ
ಮದುವೆಯೊಂದು ನಡೆವುದೆಂದು ಇಬ್ಬರ ನಡುವೆಯಲ್ಲವೇ
ಒಂದೇ ನಾನು ನೀನು ಎಂದೂ ಬೇರೆಯಲ್ಲವೇ
ತನ್ನ ತಾನೇ ಯಾರು ಜಗದಿ ವರಿಸುವುದಿಲ್ಲವೇ!!!
                                                                       - ರಕ್ಷಾ



17 comments:

  1. Wow, these lines are just amazing. Are those paintings by you as well?

    ReplyDelete
    Replies
    1. I updated post with my picture only now :-)
      Thank you

      Delete
  2. ತುಂಬಾ ಚೆನ್ನಾಗಿದೆ ರಕ್ಷಾ 👌

    ReplyDelete
  3. ರಾದ ರಮಣರ ಪ್ರೇಮ ಪ್ರಸಂಗ ರಸಭರಿತವಾಗಿ ನೇಯ್ದ ರಕ್ಷಾ ಮೇಡಂಗೆ ವಂದನೆ ಗಳು.
    ರಮೇಶ್ ಕೃಷ್ಣ ಹಾಸನ್

    ReplyDelete
  4. Replies
    1. Nanu enaadaro swalpa sahitya odiddare adara 90% nimmaneyalliye... You know better than me :-)

      Delete
  5. ಬರೆದ ಕವನ ಮುಟ್ಟಿ ಮನವ, ನಗುವ ತಂದಿವೆ
    ಹರಸಿ ಕೂಗಿವೆ , ನಗುತಿರು ಎನುವ ಮನವಿವೆ

    ReplyDelete
  6. ಅತ್ಯಂತ ಮನೋಜ್ಞವಾಗಿ ಪದಗಳನ್ನು ಹೆಣೆದಿದ್ದೀರ. ರಾಧಾಕೃಷ್ಣರ ನಡುವಿನ ವಕ್ಸ್ವಾತಂತ್ರ್ಯವನ್ನು , ಲೀನವಾಗುವ ಭಾವವನ್ನು ಸುಲಲಿತವಾಗಿ ಚಿತ್ರಿಸಸಿದ್ದೀರಿ.ಹೀಗೆಯೇ ನಿಮ್ಮ ಲೇಖನಿಯಿಂದ ಸುಂದರ ಸಾಹಿತ್ಯ ಹೊರಹೊಮ್ಮುತ್ತಿರಲಿ.

    ReplyDelete
  7. You have sketched Radha-Krishna's sublime love in nice poetry. Congratulations.

    I don't know where you might have read. You have given the 'ikya' twist to cover up the first ever love tragedy. Thereby you have subsumed the Radha's pain, sufferings and sacrifices. Imagine what happens if every boy/girl walks away with such excuses?

    Coincidentally I too have discussed Radha-Krishna love story in one of my blogs, and major part of the story runs on same lines. But I have given a different end. Please read on......
    https://blogbuster-lakshminarayana-k.blogspot.com/2018/02/valentines-day-2018.html

    ReplyDelete
  8. Thank you
    In my opinion, every boy/girl can't have such intense love(rather here it is a divine love)and can't get this excuse.
    I will check out your blog post

    ReplyDelete
  9. Awesome raksha..great..so blissful

    ReplyDelete