ಮಜ್ಜಿಗೆ ಹುಳಿ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಇದು ದಕ್ಷಿಣ ಭಾರತದ ಪ್ರಸಿದ್ಧ ಅಡುಗೆ. ಬಹಳ ರುಚಿಕರವಾಗಿರುತ್ತದೆ. ಚಳಿಗಾಲದಲ್ಲಿ ಶುಂಠಿ, ಮೆಣಸು, ಜೀರಿಗೆ ಬೀಳುವುದರಿಂದ ಆರೋಗ್ಯಕರವೂ ಹೌದು. ಇದನ್ನು ಕುಂಬಳಕಾಯಿ, ಸೀಮೆ ಬದನೆಕಾಯಿ, ಬಣ್ಣದ ಸೌತೆಕಾಯಿ (ಮಂಗಳೂರು ಸೌತೆಕಾಯಿ), ಸೌತೆಕಾಯಿ, ಸೋರೇಕಾಯಿ, ಬೆಂಡೆಕಾಯಿ ಈ ತರಹದ ತರಕಾರಿಗಳಿಂದ ತಯಾರಿಸಬಹುದು. ಪಾಲಕ್ ಸೊಪ್ಪನ್ನು ಬಳಸಿ ಸಹ ಮಾಡಬಹುದು.
ನಾನಿಲ್ಲಿ ಸೋರೇಕಾಯಿ ಮಜ್ಜಿಗೆ ಹುಳಿ ಮಾಡುವ ವಿಧಾನವನ್ನು ವಿಸ್ತಾರವಾಗಿ ತಿಳಿಸುತ್ತೇನೆ. ಇದನ್ನು ಯಾರಿಗೂ ಮಾಡಲು ಬರುವುದಿಲ್ಲ ಎಂದೇನಲ್ಲ, ಸುಲಭವಾಗಿ ಹಾಗು ತರಕಾರಿಗಳ ಸದ್ಬಳಕೆಯೊಂದಿಗೆ ಹೇಗೆ ಕಡಿಮೆ ಸಮಯದಲ್ಲಿ ಮಾಡಬಹುದೆಂದು ತಿಳಿಸುತ್ತೇನೆ.
ಬೇಕಾಗುವ ಸಾಮಗ್ರಿಗಳು :
1. ಹೆಚ್ಚಿದ ಸೋರೇಕಾಯಿ ಹೋಳುಗಳು
2. ತೆಂಗಿನಕಾಯಿ ತುರಿ - 1 ಬಟ್ಟಲು
3. ಹಸಿರು ಮೆಣಸಿನಕಾಯಿ 2-3(ನಿಮ್ಮ ಖಾರದ ಅಪೇಕ್ಷೆಗೆ ತಕ್ಕಂತೆ)
4. ಮೆಣಸಿನ ಕಾಳು - 6 ರಿಂದ 8
5. ಜೀರಿಗೆ - 1 ಟೀ ಸ್ಪೂನ್
6. ಶುಂಠಿ - ಒಂದು ಸಣ್ಣ ಚೂರು
7. ನೆನೆಸಿದ ಕಡಲೇಬೇಳೆ ಅಥವಾ ಹುರಿಗಡಲೆ - 1 ಟೇಬಲ್ ಸ್ಪೂನ್
8. ಕೊತ್ತಂಬರಿ ಬೀಜ 1 ಟೀ ಸ್ಪೂನ್ ಅಥವಾ ಕೊತ್ತಂಬರಿ ಸೊಪ್ಪು
9. ಚಿಟಿಕೆ ಅರಿಶಿನ, ಕರಿಬೇವು
10. ಮೊಸರು - 200 ml
11. ಉಪ್ಪು - ರುಚಿಗೆ ತಕ್ಕಷ್ಟು
12. ಒಗ್ಗರಣೆಗೆ - ಸಾಸಿವೆ, ಜೀರಿಗೆ, ಕರಿಬೇವು, 1 ಒಣ ಮೆಣಸಿನಕಾಯಿ, ಚಿಟಿಕೆ ಇಂಗು
ಮಾಡುವ ವಿಧಾನ -
ಹೆಚ್ಚಿದ ಹೋಳುಗಳನ್ನು ಒಂದು ಬಾಣಲೆ / ಪಾತ್ರೆಯಲ್ಲಿ ಒಂದು ತೊಟ್ಟು ನೀರು, ಹಾಗು ಸ್ವಲ್ಪ ಉಪ್ಪು ಹಾಕಿ ಬೇಯಿಸಿಕೊಳ್ಳಬೇಕು. ಇಲ್ಲಿ ಗಮನಿಸಬೇಕಾದ ವಿಷಯವೇನೆಂದರೆ ತರಕಾರಿಯನ್ನು ಕುಕ್ಕರ್ ನಲ್ಲಿ ಬೇಯಿಸದೆ ಹೀಗೆ ತೆರೆದ ಪಾತ್ರೆಯಲ್ಲಿ ಬೇಯಿಸುವುದರಿಂದ ಹೋಳುಗಳು ಕರಗಿ ಹೋಗುವುದಿಲ್ಲ. ಅಲ್ಲದೇ ಈ ಸಮಯದಲ್ಲೇ ಸ್ವಲ್ಪ ಉಪ್ಪು ಹಾಕುವುದರಿಂದ ಹೋಳುಗಳಿಗೆ ಚೆನ್ನಾಗಿ ಉಪ್ಪು ಹತ್ತಿ ರುಚಿಕಟ್ಟಾಗುತ್ತದೆ.
ಇಲ್ಲಿ ಇನ್ನೊಂದು ಟಿಪ್. ಸೋರೇಕಾಯಿ ಹೆಚ್ಚಿದಾಗ ಅದರ ತಿರುಳನ್ನು ಬಿಸಾಡಬೇಡಿ. ಫ್ರಿಜ್ ನಲ್ಲಿ ತೆಗೆದಿಡಿ. ಅದನ್ನು ಬಳಸಿ ದೋಸೆ ಮಾಡುವುದನ್ನು ಇನ್ನೊಂದು ಸಲ ಬರೆಯುತ್ತೇನೆ. ಕುಂಬಳಕಾಯಿ ಹಾಗು ಬಣ್ಣದ ಸೌತೆಕಾಯಿ ತಿರುಳನ್ನು ಸಹ ಇದೇ ರೀತಿ ಬಳಸಬಹುದು.
ಕೆಳಗಿನ ಚಿತ್ರದಲ್ಲಿ ತೋರಿಸಿರುವ ಸಾಮಗ್ರಿಗಳನ್ನು ಚಿಟಿಕೆ ಅರಿಶಿನ ಹಾಗೂ ಕರಿಬೇವಿನ ಎಸಳುಗಳನ್ನ ಸೇರಿಸಿ ರುಬ್ಬಿಕೊಳ್ಳಿ.
ರುಬ್ಬಿದ ಈ ಮಿಶ್ರಣವನ್ನು ಬೆಂದ ಹೋಳುಗಳೊಂದಿಗೆ ಸೇರಿಸಿ ಕುದಿಸಿ. ಈ ಸಮಯದಲ್ಲಿ ರುಚಿಗೆ ಸ್ವಲ್ಪ ಉಪ್ಪು ಸೇರಿಸಿ. ಹೀಗೆ ಎರಡು ಹಂತಗಳಲ್ಲಿ ಉಪ್ಪು ಬೆರೆಸುವುದರಿಂದ ಹದವಾಗಿ ರುಚಿಕಟ್ಟಾಗುತ್ತದೆ.
ನಂತರ ಮೊಸರು ಬೆರೆಸಿ ಒಂದು ಕುದಿ ಕುದಿಸಿ. ಮೊಸರು ಹಾಕಿದ ಮೇಲೆ ಜಾಸ್ತಿ ಕುದಿಸಬಾರದು.
ಗ್ಯಾಸ್ ಆಫ್ ಮಾಡಿದ ನಂತರ ಒಗ್ಗರಣೆ ಕೊಡಿ. ಈಗ ಮಜ್ಜಿಗೆ ಹುಳಿಯನ್ನು ಬಿಸಿ ಬಿಸಿಯಾಗಿ ಅನ್ನದೊಂದಿಗೆ ಸವಿಯಿರಿ. ಈಗ ನಾನು ತೋರಿಸುವ ಅಳತೆಯಲ್ಲಿ 4-5 ಜನರಿಗೆ ಸಾಲುತ್ತದೆ.
Ingredients -
1. Bottlegaurd cut into pieces
2. Grated coconut - 1 cup
3. Green chillies 2-3 (according to your spiciness requirement)
4. Cumin seeds - 1 Tea spoon
5. Ginger - 1 small piece
6. Pepper - 6-8
7. Coriander seeds - 1 tea spoon/Dhaniya
8. Soaked Channa dal/ roasted Bengal gram
9. Pinch of turmeric powder
10. Curry leaves
11. Curd - 200 ml
12. For Seasoning - Mustard, Cumin, 1 dry chilly, curry leaves, pinch of asafoetida/hing
13. Salt to taste
Method of preparation -
Cook cut vegetables in open vessel. Don't pressure cook. Add salt to taste for vegetables.
Grind below ingredients in picture along with curry leaves and turmeric powder.
Add ground paste to cooked vegetables and allow to boil. Add salt to taste in this second stage.
Add curd and allow for boiling again for small time and switch off the gas.
Prepare tadka and add it.
Serve hot with rice. To shown measurements above will serve 4-5 people.

| ರುಬ್ಬಲು ಬೇಕಾದ ಸಾಮಗ್ರಿಗಳು |

Super
ReplyDeleteಸೂಪರ್ ಮಜ್ಜಿಗೆ ಹುಳಿ ರಮೇಶ್ ಕೃಷ್ಣ
ReplyDeleteThank you
DeleteYummy! Great venture! U are unstoppable
ReplyDeleteVery nice !
ReplyDeleteThank you
Delete