ನಿನ್ನೆ ನಾ ಕಂಡ 'ಕೃಷ್ಣ' ರ ಬಗ್ಗೆ ಬರೆದಿದ್ದೆ. ರಾಮನ ಪಾತ್ರ ಮಾಡಿದವರ ಬಗ್ಗೆ ಬರೆಯದಿದ್ದರೆ ಹೇಗೆ ಅಂತ ಅನ್ನಿಸ್ತು. ಎಷ್ಟೇ ಆದರೂ ರಾಮ, ಕೃಷ್ಣ ಇಬ್ಬರೂ ವಿಷ್ಣುವಿನ ಅವತಾರವಲ್ಲವೇ.
\
ರಾಮನ ಪಾತ್ರ ಮಾಡುವುದರಲ್ಲೂ ಎನ್.ಟಿ.ಆರ್. ಮತ್ತು ಡಾ.ರಾಜ್ ರದ್ದೇ ಎತ್ತಿದ ಕೈ.
ಇವರಿಬ್ಬರ ವಿಶೇಷತೆ ಎಂದರೆ ರಾವಣನ ಪಾತ್ರಕ್ಕೂ ಇವರೇ ಸೈ.
![]() |
| N.T.R ಮತ್ತು ಡಾ.ರಾಜ್ ಭೂಕೈಲಾಸದಲ್ಲಿ ರಾವಣರಾಗಿ |
ದಶಾವತಾರ, ಭೂಕೈಲಾಸ ಚಿತ್ರಗಳಲ್ಲಿ ಡಾ.ರಾಜ್ ರಾವಣ. ಈ ಚಿತ್ರಗಳಲ್ಲಿ ರಾವಣ ಅದೆಷ್ಟು ಪ್ರಭಾವಶಾಲಿ ಎಂದರೆ, ರಾಮನ ಪಾತ್ರ ಅದ್ಯಾರು ಮಾಡಿದ್ದಾರೆ ಅಂತ ನೆನಪಿನಲ್ಲಿ ಉಳಿಯುವುದೇ ಕಷ್ಟ. ಭೂಕೈಲಾಸ ಚಿತ್ರದಲ್ಲಿ ರಾಮನ ಪಾತ್ರವೇ ಇಲ್ಲ . 'ರಾಮನ ಅವತಾರ ರಘುಕುಲ ಸೋಮನ ಅವತಾರ ... ' ಹಾಡಿನಲ್ಲಿ ಅತಿಥಿ ಪಾತ್ರದಲ್ಲಿ ಒಬ್ಬ ಸಹಕಲಾವಿದ ರಾಮನಾಗಿ ಕಾಣಿಸಿಕೊಂಡಿದ್ದಾನೆ.
| ರಾಮ ಶಿವಧನಸ್ಸನ್ನು ಮುರಿಯುತ್ತಿರುವ 'ರಾಮನ ಅವತಾರ.. ' ಹಾಡಿನ ದೃಶ್ಯ |
ಕನ್ನಡದ ದಶಾವತಾರ ಚಿತ್ರದಲ್ಲಿ ರಾಜಾಶಂಕರ್ ರಾಮನಾಗಿ ಕಾಣಿಸಿಕೊಂಡಿದ್ದಾರೆ.
'ವೈದೇಹಿ ಏನಾದಳೋ ' ಹಾಡು ಬಹಳ ಜನಪ್ರಿಯ. ನೆನಪಿಗೆ ಬಂತೆ??
![]() |
| ರಾಜಾಶಂಕರ್ ರಾಮನಾಗಿ 'ದಶಾವತಾರ' ಚಿತ್ರ ದಲ್ಲಿ |
ಇನ್ನು ಎನ್.ಟಿ.ಆರ್. ತೆಲುಗಿನ 'ಭೂಕೈಲಾಸಂ' ಹಾಗು 'ಸೀತಾರಾಮ ಕಲ್ಯಾಣಂ' ಎಂಬ ಚಿತ್ರಗಳಲ್ಲಿ ರಾವಣನಾಗಿ ಅಬ್ಬರಿಸಿದ್ದಾರೆ. ಇಲ್ಲೂ ರಾಮನ ಪಾತ್ರ ಮಾಡಿದ ನಟ ನೆನಪಿನಲ್ಲಿ ಉಳಿಯುವುದು ಕಷ್ಟ. ಭೂಕೈಲಾಸದಲ್ಲಿ ಯಥಾ ಪ್ರಕಾರ ರಾಮನದು ಅತಿಥಿ ಪಾತ್ರ. 'ಸೀತಾರಾಮ ಕಲ್ಯಾಣಂ' ಚಿತ್ರದಲ್ಲಿ ಹರನಾಥ್ ಎಂಬ ಕಲಾವಿದರು ರಾಮನಾಗಿ ನಟಿಸಿದ್ದಾರೆ.
![]() |
| N.T.R ರಾವಣನಾಗಿ, ಹರನಾಥ್ ರಾಮನಾಗಿ 'ಸೀತಾರಾಮ ಕಲ್ಯಾಣ೦' ಚಿತ್ರದಲ್ಲಿ |
ತೆಲುಗಿನ 'ಲವಕುಶ' ಚಿತ್ರದಲ್ಲಿ ಸಹ ಎನ್.ಟಿ.ಆರ್. ರಾಮನಾಗಿ ಅಮೋಘವಾಗಿ ನಟಿಸಿದ್ದಾರೆ.
![]() |
| N.T.R. ರಾಮನಾಗಿ ಲವಕುಶ ತೆಲುಗು ಚಿತ್ರದಲ್ಲಿ |
'ಶ್ರೀ ರಾಮ ಪಟ್ಟಾಭಿಷೇಕಮ್' ಎಂಬ ತೆಲುಗು ಚಿತ್ರದಲ್ಲಿ N.T.R ಅವರೇ ರಾಮ, ರಾವಣರಾಗಿ ಅಬ್ಬರಿಸಿದ್ದಾರೆ.
![]() |
| N.T.R. ರಾಮ ಮತ್ತು ರಾವಣನಾಗಿ ದ್ವಿಪಾತ್ರದಲ್ಲಿ |
ಕನ್ನಡದ 'ಶ್ರೀ ರಾಮಾಂಜನೇಯ ಯುದ್ಧ' ಚಿತ್ರದಲ್ಲಿ ಡಾ.ರಾಜ್ ರಾಮನಾಗಿ ಅಭಿನಯಿಸಿದ್ದರು. ಅದೇ ಚಿತ್ರದ ತೆಲುಗಿನ ಅವತರಣಿಕೆಯಲ್ಲಿ ಮತ್ತೆ N.T.R ರಾಮ.
![]() |
| ಡಾ.ರಾಜ್ ಮತ್ತು N.T.R ರಾಮನಾಗಿ ಶ್ರೀ ರಾಮಾಂಜನೇಯ ಯುದ್ಧ ಚಿತ್ರದ ಕನ್ನಡ ಹಾಗು ತೆಲುಗು ಅವತರಣಿಕೆಗಳಲ್ಲಿ |
ಶ್ರೀನಿವಾಸ ಕಲ್ಯಾಣ ಕನ್ನಡ ಚಿತ್ರದಲ್ಲಿ ರಾಮನ ಅವತಾರದ ಒಂದು ದೃಶ್ಯ ಬರುತ್ತದೆ. ಆ ದೃಶ್ಯದಲ್ಲಂತೂ ಅಣ್ಣಾವ್ರು ರಾಮನಾಗಿ ಬಹಳ ಸೊಗಸಾಗಿ ಕಾಣಿಸಿಕೊಳ್ಳುತ್ತಾರೆ.
| ಶ್ರೀನಿವಾಸ ಕಲ್ಯಾಣ ಚಿತ್ರದ ದೃಶ್ಯ |
ಇನ್ನು ತೆಲುಗಿನಲ್ಲಿ N.T.R ಅಲ್ಲದೇ ಶೋಭನ್ ಬಾಬು, ರವಿ ಎಂಬ ಯುವನಟ ಹಾಗೂ, ಬಾಲಕೃಷ್ಣ ರಾಮನ ಪಾತ್ರದಲ್ಲಿ ಯಶಸ್ವಿಯಾಗಿದ್ದಾರೆ. 'ಸಂಪೂರ್ಣ ರಾಮಾಯಣಂ' ಚಿತ್ರದಲ್ಲಿ ಶೋಭನ್ ಬಾಬು, 'ಸೀತಾ ಕಲ್ಯಾಣಂ' ಹಾಗು 'ಸೀತಾರಾಮ ವನವಾಸಂ' ಚಿತ್ರಗಳಲ್ಲಿ ರವಿ, ಇತ್ತೀಚಿನ 'ಶ್ರೀ ರಾಮರಾಜ್ಯಮ್' ಚಿತ್ರದಲ್ಲಿ ಬಾಲಕೃಷ್ಣ ರಾಮನಾಗಿ ಮಿಂಚಿದ್ದಾರೆ.
1996ರ ತೆಲುಗು ಭಾಷೆಯ ಮಕ್ಕಳ ರಾಮಾಯಣ ಭಾರೀ ಜನಪ್ರಿಯವಾಯಿತು. ಇಲ್ಲಿ ಜೂ. ಎನ್. ಟಿ. ಆರ್ ರಾಮನಾಗಿದ್ದರು.
![]() |
| ಜೂ. NTR ರಾಮನಾಗಿ |
ಕನ್ನಡದಲ್ಲಿ ಡಾ.ರಾಜ್ ಮತ್ತು ಜಯಪ್ರದ ರಾಮ ಸೀತೆಯರಾಗಿ ನಟಿಸಿದ್ದ 'ಲವಕುಶ' ಚಿತ್ರ ಸೆಟ್ಟೇರಿತ್ತು. ಆದರೆ ಯಾಕೋ ಅದು ಬಿಡುಗಡೆಯಾಗಲೇ ಇಲ್ಲ. ಚಿತ್ರೀಕರಣ ಅರ್ಧಕ್ಕೇ ನಿಂತು ಹೋಯ್ತು. ಕನ್ನಡಿಗರಿಗೆ ರಾಜ್ ರನ್ನು ರಾಮನಾಗಿ ಕಾಣುವ ಇನ್ನೊಂದು ಅವಕಾಶ ಮಿಸ್ ಆಯ್ತು.
![]() |
| ಅರ್ಧಕ್ಕೇ ನಿಂತು ಹೋದ ಕನ್ನಡದ 'ಲವಕುಶ' ಚಿತ್ರದ ದೃಶ್ಯ |
ಇನ್ನು ಬಾಲಿವುಡ್ ನ ವಿಚಾರಕ್ಕೆ ಬಂದರೆ, ನನಗೆ ನೆನಪಿರುವುದು ಮೂರು ಚಿತ್ರಗಳು. 'ಸಂಪೂರ್ಣ ರಾಮಾಯಣ್ ' , ಮತ್ತು ಎರಡು ಅವತರಣಿಕೆಗಳಲ್ಲಿ ಬಿಡುಗಡೆಯಾದ 'ಲವ್ ಕುಶ್' (1967,1997).
ಇವುಗಳಲ್ಲಿ ಕ್ರಮವಾಗಿ ಮಹಿಪಾಲ್, ಅಶೀ೦ ಕುಮಾರ್ ಹಾಗು ಜಿತೇಂದ್ರ ರಾಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಕಿರುತೆರೆಯ ವಿಚಾರಕ್ಕೆ ಬಂದರೆ 1987ರ ರಮಾನಂದ ಸಾಗರ್ ಅವರ ರಾಮಾಯಣ ಧಾರಾವಾಹಿ ಬಹಳ ಜನಪ್ರಿಯ. ನಂತರ 39 ಎಪಿಸೋಡ್ ಗಳ ಲವ್ ಕುಶ್ ಧಾರಾವಾಹಿಯೂ ಬಹಳ ಜನಪ್ರಿಯ. ಇದರಲ್ಲಿ ಅರುಣ್ ಗೋವಿಲ್ ರಾಮನ ಪಾತ್ರಧಾರಿಯಾಗಿ ಕಾಣಿಸಿಕೊಂಡರು. ಅನೇಕರ ಮನೆಯಲ್ಲಿ ಈ ಧಾರಾವಾಹಿಯ ರಾಮಸೀತೆಯರ (ಅರುಣ್ ಗೋವಿಲ್, ದೀಪಿಕಾ) ಪಟಕ್ಕೆ ಇಂದಿಗೂ ಪೂಜೆ ನಡೆಯುತ್ತಿರುವುದನ್ನು ನಾನು ನೋಡಿದ್ದೇನೆ.
![]() |
| ರಮಾನಂದ ಸಾಗರರ 'ರಾಮಾಯಣ'ದ ದೃಶ್ಯ |
![]() |
| ಹಿಂದೀ ಕಿರುತೆರೆಯ ಇನ್ನಿತರ 'ರಾಮಾಯಣ' |
ನನಗಿಷ್ಟವಾದ ರಾಮನ ಪಾತ್ರಧಾರಿಗಳು ಡಾ. ರಾಜ್, N.T.R , ರವಿ ಮತ್ತು ಅರುಣ್ ಗೋವಿಲ್. ನಿಮಗ್ಯಾವ 'ರಾಮ' ಇಷ್ಟವಾದ? comments ಮೂಲಕ ತಿಳಿಸಿ.
ಮುಗಿಸುವ ಮುನ್ನ: ಅಂದ ಹಾಗೆ ನಿನ್ನೆ ನಾ ಕಂಡ 'ಕೃಷ್ಣ' ರ ಬಗ್ಗೆ ಬರೆಯುವಾಗ ಒಬ್ಬ ಬಾಲಕೃಷ್ಣನನ್ನ ಉಲ್ಲೇಖಿಸಲು ಭರೆತಿದ್ದೆ. ಇವರೇ ನೋಡಿ ಆ ಪುಟಾಣಿ ಪವರ್ ಸ್ಟಾರ್ ಕೃಷ್ಣ
![]() |
| ಭೂಮಿಗೆ ಬಂದ ಭಗವಂತ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ |
signing off














ನಿಜವಾದ ರಾಮನನ್ನು ನೋಡಿದವರಾರು ಇಲ್ಲ.ಆದರೆ ಕನ್ನಡರಿಗರಾದ ನಾವು ರಾಮ ರಾಮಣ ಮಯೂರ ಕೃಷ್ಣ ಕೃಷ್ಣ ದೇವರಾಯ ರಾಘವೇಂದ್ರ ಸ್ವಾಮಿಗಳು ಇಮ್ಮಡಿ ಪುಲಕೇಷಿ ಕಾಳಿದಾಸ ಯಾರನ್ನೆ ಆಗಲಿ ಕಣ್ಣಿಗೆ ಡಾ.ರಾಜ್ ಅವರೊಬ್ಬರೆ. ತಂದೆ ತಾಯಿಯ ಮೇಲಿನ ಮಮತೆ ಅಣ್ಣತಂಮ್ಮಂದಿರ ಸಂಭಂದ ತಂಗಿಮದುವೆಯಾದ ಮೇಲೆ ಅಣ್ಣನ ಮದುವೆ ಇಂತಹ ಆದರ್ಶಗಳನ್ನು ಕಲಿಸಿದ್ದೆ ಡಾ.ರಾಜ್. ಕನ್ನಡಿಗರಿಗೆ ಕನ್ನಡ ಕಲಿಸಿದ ಗುರು. ಕನ್ನಡಕ್ಕೊಬ್ಬನೆ ರಾಜ ಅವರೆ ಮುತ್ತುರಾಜ.
ReplyDeleteತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಡಾ. ರಾಜ್ ಎಲ್ಲಾ ಪಾತ್ರಗಳೂ ಅಮೋಘವಾಗಿ ಮೂಡಿಬಂದಿದವೆ.
ReplyDelete