ಧುಮ್ಮಿಕ್ಕಿ ಹರಿವ ಜಲಧಾರೆ ಜೋಗ
ಕನ್ನಡ ಜನತೆಗೆ ಇದುವೇ ಯೋಗಾಯೋಗ!
ಮಲೆನಾಡ ಹಚ್ಚ ಹಸುರಿನ ನಡುವೆ ಇದೆ ಸಾಗರ
ಇದೇ ಭೋರ್ಗರೆಯುವ ಶರಾವತಿಯ ಆಗರ
ಮುಂಜಾವಿನ ಮಂಜಿನಲ್ಲಿ ಬೆರೆತ ಹೊಂಬಣ್ಣ
ಇದಕದೇ ಕಾರಣವು ಪ್ರಥಮ ಉಷಾಕಿರಣ!
ಬಾನಂಗಳದಿ ಬರುವುದು ಮಳೆಬಿಲ್ಲ ಚಿತ್ತಾರ,
ಸೌಂದರ್ಯ ಸರಸ್ವತಿಯ ನಿಜದ ಅವತಾರ!
ಇದಕಿರುವ ಇನ್ನೊಂದು ಹೆಸರು ಗೇರುಸೊಪ್ಪ
ಜಲಕಾಂತಿಯಬ್ಬರದಿ ಉರಿವುದು ವಿದ್ಯುದ್ದೀಪ!!
ರಾಜಗಾಂಭೀರ್ಯದಿ ಮೆರೆವ ಅವನೇ ರಾಜ,
ಅಂಕುಡೊಂಕಿನ ಬೆಡಗಿ ಅವಳದೋ ರಾಣಿ
ಬಂಡೆಗಳ ನಡುವೆ ಘರ್ಜಿಸುವ ರೋರರ್!
ಬಿರುಸಿನಾ ಬಾಣದೊಲು ಬರುವವನು ರಾಕೆಟ್.
ದೃಶ್ಯ ವೈಭವದ ಸುಗ್ಗಿ ಜೋಗ ಜಲಪಾತ
ಮೈ ಮರೆತೀರಿ ಜೋಕೆ! ಕೆಳಗಿದೆ ಪ್ರಪಾತ!!
ಇನ್ನೂ ನೋಡಿಲ್ಲವೇ ಬೇಗ ಬನ್ನಿರಣ್ಣ,
ತಣಿಸುವುದು ನಿಮ್ಮ ಮೈ ಮನಸು ಕಣ್ಣ.
-ರಕ್ಷಾ
ಜೋಗ ಜೋಗ ಜೋಗ
ReplyDeleteಬಂತು ಯೋಗ ಯೋಗ
ಮನರಂಜೆಯ ಭೋಗ ಭೊಗ
ಪರಮಾನಂದದ ಜೀವನದ ಭಾಗ ಭಾಗ
ರಮೇಶ್ ಕೃಷ್ಣ
ಪ್ರತಿಕ್ರಿಯಾತ್ಮಕ ಕವನ ಚೆನ್ನಾಗಿದೆ.
DeleteThank you
Deleteಒಳ್ಳೆಯ ಪ್ರಯತ್ನ. ಕಾವ್ಯಾಂಶ ಇನ್ನೂ ಹೆಚ್ಚಿರಬಹುದಿತ್ತು.
ReplyDeleteಲಕ್ಷ್ಮೀನಾರಾಯಣ ಕೆ
Thank you, will try further
Delete