ಚಲನಚಿತ್ರ ಸಂಗೀತವು ಬೇಡವೆಂದರೂ ನಮ್ಮ ಜೀವನದ ಹಾಸುಹೊಕ್ಕಾಗಿ ಬೆರೆತುಹೋಗುತ್ತವೆ!!!
ನಾನಿಲ್ಲಿ ಶಾಸ್ತ್ರೀಯ ಸಂಗೀತದ ರಾಗಪ್ರಧಾನವಾದ ಜನಪ್ರಿಯ (ನನ್ನ ಮೆಚ್ಚಿನ!!) ಚಿತ್ರಗೀತೆಗಳನ್ನ ಮೆಲುಕು ಹಾಕುವ ಪ್ರಯತ್ನ ಮಾಡಿದ್ದೇನೆ.
ನನಗೆ ಎಲ್ಲದಕ್ಕಿಂತ ಮೊದಲು ನೆನಪಿಗೆ ಬರುವುದು ಅಣ್ಣಾವ್ರ 'ಜೀವನಚೈತ್ರ' ಚಿತ್ರದ 'ನಾದಮಯ... ' ಗೀತೆ. ಅತ್ಯುತ್ತಮ ಗಾಯನಕ್ಕಾಗಿ ರಾಷ್ಟ್ರೀಯ ಪುರಸ್ಕಾರ ಪಡೆದ ಮೊದಲ ನಟ ಎಂಬ ಶ್ರೇಯ ಡಾ. ರಾಜ್ ಅವರದು!!(ಗಮನಿಸಿ, 'ಮೊದಲ ನಟ', ಮೊದಲ ಗಾಯಕ ಅಲ್ಲ!). ಈ ಗೀತೆ ಕರ್ನಾಟಕ ಶಾಸ್ತ್ರೀಯ ಸಂಗೀತದ 'ಹನುಮತೋಡಿ' ರಾಗಾಧಾರಿತ ಗೀತೆ. ಚರಣದ ಸ್ವರಾಲಾಪನೆಯಲ್ಲಿ ಮೋಹನವೂ ಬಂದು ಹೋಗುತ್ತದೆ. ಈ ಗೀತೆಯ ಸಾಹಿತ್ಯ ಚಿ. ಉದಯಶಂಕರ್ ಅವರದ್ದಾದರೆ ಸಂಗೀತ ಉಪೇಂದ್ರ ಕುಮಾರ್ ಅವರದ್ದು. ಈ ಗೀತೆ ಕನ್ನಡ ಚಿತ್ರಸಂಗೀತದ ಚಿರಸ್ಥಾಯಿಯಾಗಿ ಉಳಿದಿದೆ.
ನನಗೆ ನೆನಪಿಗೆ ಬರುತ್ತಿರುವ ಮುಂದಿನ ಹಾಡು, ಬಭೃವಾಹನ ಚಿತ್ರದ 'ಆರಾಧಿಸುವೆ ಮದನಾರಿ'. ಇದು ಖರಹರಪ್ರಿಯ ರಾಗದಲ್ಲಿ ಸೊಗಸಾಗಿ ಮೂಡಿ ಬಂದಿರುವ ಗೀತೆ. ಸಂಗೀತ ಟಿ.ಜಿ. ಲಿಂಗಪ್ಪ, ಸಾಹಿತ್ಯ ಮತ್ತೆ ಉದಯಶಂಕರ್ ಅವರದು. ಇದನ್ನೂ ಸಹ ಡಾ. ರಾಜ್ ಸೊಗಸಾಗಿ ಹಾಡಿದ್ದಾರೆ. ಅರ್ಜುನನು ಸುಭದ್ರೆಯನ್ನು ಒಲಿಸಿಕೊಳ್ಳಲು ಶಿವನನ್ನು ಕುರಿತು ಸನ್ಯಾಸಿಯಂತೆ ನಟಿಸುವ ಸಂದರ್ಭದಲ್ಲಿ ಮೂಡಿಬಂದ ಹಾಡು. ಸ್ವರಾಲಾಪನೆ, ನಟುವಾಂಗ ಎಲ್ಲವೂ ಸೊಗಸಾಗಿ ಮೂಡಿಬಂದಿದೆ. ಹಾಡಿನ ದೃಶ್ಯಗಳೂ ಸಹ ಮರೆಯುವಂತಿಲ್ಲ. ಡಾ.ರಾಜ್ ಹಾಡುತ್ತಾ, ವೀಣೆ ನುಡಿಸುತ್ತಾ, ಕೊಳಲನೂದುತ್ತಾ, ಮೃದಂಗ ನುಡಿಸುತ್ತಾ, ಘಟ ಭಾರಿಸುತ್ತಾ, ಅಮೋಘ ಅಭಿನಯ ನೀಡಿದ್ದಾರೆ.
ನನ್ನ ನೆಚ್ಚಿನ ಇನ್ನೊಂದು ಹಾಡು, ಸಂಧ್ಯಾರಾಗ ಚಿತ್ರದ 'ನಂಬಿದೆ ನಿನ್ನ ನಾದ ದೇವತೆಯೇ ... ' ಗೀತೆ. ಈ ಗೀತೆಯನ್ನು ಚಿತ್ರದ ಬೇರೆ ಬೇರೆ ಸಂದರ್ಭಗಳಲ್ಲಿ ಮೂವರು ಗಾಯಕರು ಹಾಡಿದ್ದಾರೆ. ಮೂರೂ ಸೊಗಸಾಗಿ ಮೂಡಿ ಬಂದಿವೆ. ಭಾರತರತ್ನ ಭೀಮಸೇನ್ ಜೋಶಿ, ಡಾ. ಬಾಲಮುರಳಿಕೃಷ್ಣ ಹಾಗು ಎಸ್. ಜಾನಕಿ ಈ ಗಾಯಕರು. ಗೀತಸಾಹಿತ್ಯ ಜಿ.ವಿ. ಅಯ್ಯರ್ ಅವರದು, ಸಂಗೀತ ಜಿ.ಕೆ. ವೆಂಕಟೇಶ್. ಈ ಹಾಡು ಪೂರ್ವಿಕಲ್ಯಾಣಿ ರಾಗದಲ್ಲಿ ಸ್ವರ ಸಂಯೋಜನೆಗೊಂಡಿದೆ.
ಪುಟ್ಟಣ್ಣ ಕಣಗಾಲ್ ಅವರ ಉಪಾಸನೆ ಚಿತ್ರದ ಎಲ್ಲ ಹಾಡುಗಳೂ ಮಧುರವಾಗಿವೆ. ಸಂಗೀತ ಸಾಧಕಿಯೊಬ್ಬಳ ಕಥೆಯಾಗಿರುವುದರಿಂದ ಚಿತ್ರದ ಎಲ್ಲ ಹಾಡುಗಳೂ ಸಹ ರಾಗಪ್ರಧಾನವಾದವೇ . ಇದರಲ್ಲಿ ನನ್ನ ಮೆಚ್ಚಿನ ಹಾಡು 'ಭಾರತ ಭೂ ಶಿರ ಮಂದಿರ ಸುಂದರಿ... ' ಈ ಹಾಡನ್ನು ಎಸ್.ಜಾನಕಿ ಅಮೋಘವಾಗಿ ಹಾಡಿದ್ದಾರೆ. ಸಾರಮತಿ ರಾಗದಲ್ಲಿ ಸ್ವರ ಸಂಯೋಜನೆಗೊಂಡಿರುವ ಈ ಹಾಡಿನ ಸಂಗೀತ ವಿಜಯಭಾಸ್ಕರ್ ಅವರದಾದರೆ, ಸಾಹಿತ್ಯ ವಿಜಯನಾರಸಿಂಹ ಅವರದು.
ಹಾಗೆಯೇ "ಸಂಪಿಗೆ ಮರದ ಹಸಿರೆಲೆ ನಡುವೆ ... " ಈ ಹಾಡು, ರಾಗಮಾಲಿಕೆಯಲ್ಲಿದೆ. ಚಕ್ರವಾಕ, ಮಧ್ಯಮಾವತಿ ಮತ್ತು ದುರ್ಗಾ (ಶುದ್ಧಸಾವೇರಿ) ರಾಗಗಳನ್ನೊಳಗೊಂಡಿದೆ.

ಸಿದ್ಧಲಿಂಗಯ್ಯನವರ ಹೇಮಾವತಿ ಚಿತ್ರದ 'ಶಿವ ಶಿವ ಎನ್ನದ ನಾಲಿಗೆ ಏಕೆ .... ' ಹಾಡು ಸೋಜಿಗ ಸೃಷ್ಟಿಸುವ ಹಾಡು. ಏಕೆಂದರೆ ಈ ಹಾಡಿನ ವೈಶಿಷ್ಟ್ಯವೇ ಹಾಗಿದೆ. ಈ ಹಾಡಿನ ಪರ್ಯಾಯ (alternate) ಸಾಲುಗಳು ಒಂದೊಂದು ರಾಗದಲ್ಲಿವೆ. ಮೊದಲ ಸಾಲು ಅಭೋಗಿ ರಾಗದಲ್ಲಿದ್ದರೆ, ಎರಡನೆಯ ಸಾಲು ಹನುಮತೋಡಿ. ಮತ್ತೆ ಮೂರನೆಯ ಸಾಲು ಅಭೋಗಿಯಾದರೆ, ನಾಲ್ಕನೆಯ ಸಾಲು ಹನುಮತೋಡಿ. ಇಡೀ ಗೀತೆ ಹೀಗೆಯೇ ಸಾಗುತ್ತದೆ. ಸ್ವರಾಲಾಪನೆಯೂ ಸಹ !! ಈ ಮಾಂತ್ರಿಕತೆ ಸೃಷ್ಟಿಸಿದ ಸಂಗೀತಜ್ಞ ಎಲ್. ವೈದ್ಯನಾಥನ್. ಗೀತ ಸಾಹಿತ್ಯ ಚಿ. ಉದಯಶಂಕರ್ ಅವರದಾದರೆ, ಈ ಹಾಡನ್ನು ಅತ್ಯದ್ಭುತವಾಗಿ ಹಾಡಿರುವ ಶ್ರೇಯ ಎಸ್.ಜಾನಕಿ ಅವರದು. ಅನೇಕ ಸಂದರ್ಶನಗಳಲ್ಲಿ ಜಾನಕಿಯವರು ಈ ಹಾಡಿನ ಕಠಿಣತೆಯ ಬಗ್ಗೆ ಪ್ರಸ್ತಾಪ ಮಾಡಿರುವುದನ್ನು ನೀವೆಲ್ಲ ಕೇಳಿರಬಹುದು.
ಸನಾದಿ ಅಪ್ಪಣ್ಣ ಚಿತ್ರದ 'ಕರೆದರೂ ಕೇಳದೇ ...' ಹಾಡು ಬೇಹಾಗ್ ರಾಗದಲ್ಲಿ ಸಂಯೋಜನೆಗೊಂಡಿದೆ. ಈ ಹಾಡನ್ನು ಹಾಡಿರುವವರು ಎಸ್. ಜಾನಕಿ. ಈ ಗೀತೆಯ ಮುಖ್ಯ ಆಕರ್ಷಣೆ ಭಾರತರತ್ನ ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರ ಶಹನಾಯಿ ವಾದನ. ರಾಗ-ನೃತ್ಯ ಪ್ರಧಾನವಾದ ಈ ಗೀತೆಯ ಸಾಹಿತ್ಯ ಚಿ. ಉದಯಶಂಕರ್ ಅವರದಾದರೆ, ಸಂಗೀತ ಜಿ.ಕೆ. ವೆಂಕಟೇಶ್ ಅವರದು.
ಕೆ.ಎಸ್.ಎಲ್. ಸ್ವಾಮಿ (ರವೀ) ಅವರ ಮಲಯಮಾರುತ ಚಿತ್ರದ ಎಲ್ಲ ಗೀತೆಗಳೂ ಬಹಳ ಜನಪ್ರಿಯ. ಇದರಲ್ಲಿನ ಮಲಯಮಾರುತ ರಾಗದ "ಶಾರದೆ ದಯೆ ತೋರಿದೆ .... " ಹಾಗೂ ಸಾರಮತಿ ರಾಗದ " ಎಲ್ಲೆಲ್ಲೂ ಸಂಗೀತವೇ ..." ಹಾಡು ನನಗೆ ತುಂಬಾ ಪ್ರಿಯವಾದವು. ಇದರ ಸಾಹಿತ್ಯ ಚಿ. ಉದಯಶಂಕರ್ ಅವರದು. ಕಣಗಾಲ್ ಪ್ರಭಾಕರ ಶಾಸ್ತ್ರೀ ಸಾಹಿತ್ಯ ಒದಗಿಸಿರುವ 'ನಟನ ವಿಶಾರದ ನಟಶೇಖರ... " ಹಾಡು ಹಿಂದೋಳ ರಾಗದಲ್ಲಿದ್ದು, ಇವೆಲ್ಲವನ್ನು ಕೆ.ಜೆ. ಏಸುದಾಸ್ ಸುಮಧುರವಾಗಿ ಹಾಡಿದ್ದಾರೆ. ವಲ್ಲಭಾಚಾರ್ಯರ ಮಧುರಾಷ್ಟಕವಂತೂ ಅಭೇರಿ ರಾಗದಲ್ಲಿ (ಭೀಮಪಲಾಸ್ ಎನ್ನುತ್ತಾರೆ ಹಿಂದೂಸ್ಥಾನಿ ಪ್ರಕಾರದಲ್ಲಿ) ವಾಣಿ ಜಯರಾಮ್ ಅವರ ಧ್ವನಿಯಲ್ಲಿ ಜೇನಿನಂತೆ ಸ್ಫುರಿಸುತ್ತದೆ. ಎಸ.ಪಿ.ಬಿ. ಈ ಗೀತೆಗೆ ಸಹ ಗಾಯನ ಮಾಡಿದ್ದಾರೆ. ಈ ಅದ್ಭುತವಾದ ಸಂಗೀತಮಯ ಚಿತ್ರಕ್ಕೆ ವಿಜಯಭಾಸ್ಕರ್ ಅವರ ಸ್ವರ ಸಂಯೋಜನೆಯಿದೆ.
ಕವಿರತ್ನ ಕಾಳಿದಾಸ ಚಿತ್ರದ "ಸದಾ ಕಣ್ಣಲಿ ಪ್ರಣಯದ ಕವಿತೆ ..." ಹಾಡು, ಘಜಲ್ ಶೈಲಿಯದು; ಈ ಗೀತೆಯನ್ನು ಬೃಂದಾವನಿ ಸಾರಂಗ ರಾಗದಲ್ಲಿ ಎಂ. ರಂಗರಾವ್ ಅವರು ಸಂಯೋಜಿಸಿದ್ದಾರೆ. ಡಾ.ರಾಜ್ ಹಾಗು ವಾಣಿ ಜಯರಾಮ್ ಸುಮಧುರವಾಗಿ ಹಾಡಿರುವ ಈ ಗೀತೆಯ ಸಾಹಿತ್ಯ ಚಿ. ಉದಯಶಂಕರ್ ಅವರದು. ಇದೇ ಚಿತ್ರದಲ್ಲಿ ಬರುವ ಶ್ಯಾಮಲಾದಂಡಕ 'ಮಾಣಿಕ್ಯ ವೀಣಾ...' ಗೀತೆಯು ರಾಗಮಾಲಿಕೆಯಲ್ಲಿದೆ. ನನಗೆ ತಿಳಿದಿರುವ ಹಾಗೆ, ಹಂಸಧ್ವನಿಯಲ್ಲಿ ಪ್ರಾರಂಭವಾಗಿ, ಕಾಪಿ, ಹಿಂದೋಳ, ಕಲ್ಯಾಣಿ (ಯಮನ್), ಆರಭಿ, ಭೈರವಿ ರಾಗಗಳಲ್ಲಿ ಸಂಚರಿಸಿ, ಮೋಹನ ರಾಗದಲ್ಲಿ ಅಂತ್ಯವಾಗುತ್ತದೆ (ಇಲ್ಲಿ ನಾನು ಯಾವುದಾದರೂ ರಾಗ ಬಿಟ್ಟಿದ್ದರೆ ಅಥವಾ ಬೇರೆ ರಾಗವಿದೆ ಅನಿಸಿದರೆ, ಓದುಗರಿಗೆ ತಿಳಿದಿದ್ದರೆ ದಯವಿಟ್ಟು ತಿಳಿಸಿ).
ಘಜಲ್ ಶೈಲಿಯ ಇನ್ನೊಂದು (ಶೋಕಭರಿತ) ಹಾಡು ಹೊಸಬೆಳಕು ಚಿತ್ರದ 'ಕಣ್ಣೀರ ಧಾರೆ... '. ಹಿಂದೂಸ್ಥಾನಿ ಪ್ರಕಾರದಲ್ಲಿ ಇದು ಲಲಿತ್ ರಾಗದ ಸಂಯೋಜನೆ. ಇದನ್ನೂ ಸಹ ಎಂ.ರಂಗರಾವ್ ಅವರೇ ಸಂಯೋಜಿಸಿ ಡಾ.ರಾಜ್ ಅವರು ಹಾಡಿದ್ದಾರೆ. ಸಾಹಿತ್ಯ ಮತ್ತೆ ಚಿ.ಉದಯಶಂಕರ್ ಅವರದು.
ಗಡಿಬಿಡಿ ಗಂಡ ಚಿತ್ರದ ಹಿಂದೋಳ ರಾಗಾಧಾರಿತ "ನೀನು ನೀನೇ ಇಲ್ಲಿ ನಾನು ನಾನೇ ..." ಹಾಡು ಬಹಳ ಜನಮೆಚ್ಚುಗೆ ಗಳಿಸಿದ ಗೀತೆ. ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರೇ ರವಿಚಂದ್ರನ್ ಹಾಗು ತಾಯ್ ನಾಗೇಶ್ ಇಬ್ಬರಿಗೂ ಅದ್ಭುತವಾಗಿ ಹಿನ್ನಲೆ ಗಾಯನ ಒದಗಿಸಿದ್ದಾರೆ. ಈ ಚಿತ್ರಗೀತೆಯ ಸಾಹಿತ್ಯ -ಸಂಗೀತ ಹಂಸಲೇಖ ಅವರದು.

ಸೂಪರ್ ನನ್ನ ಮೆಚ್ಚಿನಗೀತೆ
ReplyDeleteನಾದಮಯ ಸಂಗೀತ ಲೋಕಕ್ಕೆ ಕರೆದೊಯ್ಯುವ ಈ ಗೀತೆ
ಎಷ್ಟು ಬಾರಿ ಕೇಳಿದರು ಸಂತೋಷ
ರಮೇಶ್ ಕೃಷ್ಣ
Thank you
ReplyDeleteನನಗೆ ನಂಬಿದೆ ನಿನ್ನ ನಾದ ದೇವತೆ ಇಷ್ಟ
ReplyDeleteI like Kanneera dhare
ReplyDeleteThank you
ReplyDeleteYou have chosen a good topic. Well composed.
ReplyDeleteThere are many sites for linking ragas and Hindi film songs. Virtually for any Hindi song you may google these sites and find out the raga. To a great extent it is even true for Tamil songs.
But unfortunately there are no such well formed sites for Kannada film songs. Therefore your efforts deserves appreciation.
I have tried earlier to develop one such blog-link (not released so far https://blogbuster-lakshminarayana-k.blogspot.com/2019/07/kannada-film-songs-based-on-classical.html) and I want to add more songs to it. You too can contribute for enriching it.
Also Sanadi Appanna song 'Karedaru kelade', you have mentioned it as behaag. But I have observed that it contains strong traces of raag Yaman/Kalyani too. Please check and confirm.
Thank you for detailed review 😀
ReplyDeleteI am planning on another part including some more songs...
Regarding "Karedaroo KeLade... " Behaag only.... it is very similar to "Nayanadali Doreyiralu... " from Kittur Chennamma movie ...
Shruthi Seridaaga title track as well... there you find swara aalaapa which confirms it as Behaag
Please check out these songs
https://youtu.be/gDmwVIAi-oM
https://youtu.be/0GWHWuGujVI