ಹೋಗೋಣ ಬಾ ಬಾ ಜಾತುರೇಗೆ ನಲ್ಲ ಹೋಗೋಣ ಬಾ ಬಾ ಜಾತುರೇಗೆ
ನಮ್ಮೂರ ಜಾತುರೇಗೆ ತವರೂರ ಪರಿಸೆಗೇ ....
ಬಂಡಿ ಬಂಡೀಲಿ ಹಿಂಡ್ ಹಿಂಡು ಜನಗಳು ಬಂದು ಕುಂತೋರೆ ನಂಟರ ಕೂಡಿಕೊಂಡು
ಉಕ್ಕುವ ಹೊಳೆ ಹಾಂಗೆ ದ್ಯಾವರ ಬಂಟರು .... (೨)
ಹೂವನ್ನು ಹೊಯ್ ಹೊಯ್
ಹಣ್ಣನ್ನು ಹೊಯ್ ಹೊಯ್
ಹೂವನ್ನು ಹಣ್ಣನ್ನು ದವನಾವ ಮರುಗಾವ
ತೇರ ಮ್ಯಾಲೆ ಎಸೆದೋರೆ ದ್ಯಾವರ ನೆನೆಸಿಕೊಂಡು ... (೨)
ಗುಡಿಯಿಂದ ಹೊರಡುವ ದ್ಯಾವರ ಮುಂದೆ ಎಷ್ಟೊಂದು ಗುಂಪು ಸೇರೈತೆ
ಆಹಾ ಭಕ್ತರ ಗುಂಪು ಸೇರೈತೆ (೨)
ಕಹಳೆಯ ಹೊಯ್ ಹೊಯ್ ಊದೋರೆ ಹೊಯ್ ಹೊಯ್
ಕಹಳೆಯ ಊದೋರೆ ನಗಾರಿ ಹೊಡೆದೊರೆ,
ದ್ಯಾವರ ಹಾಡ ಹೇಳಿಕೊಂಡು, ಹಾಡಿಕೊಂಡು,
ಭಕ್ತಿಯಿಂದ ತೇರ ಎಳೆದೌರೇ ...
ನಮ್ಮೂರ ಚೌಕದ ಮಧ್ಯದಲ್ಲಿ ಎಲ್ಲಾ ದೇವರು ಸೇರುವ ತಾಣದಲ್ಲಿ
ಊರಗಲ ಚಪ್ಪರ ಹಾಕೌರೆ
ಥರಥರದ ಕೋಲಾಟ (೨)
ಸಂಭ್ರಮದ ಕೂಗಾಟ (೨)
ವಾಲಗವ ಓದುತ್ತ ತಾಳವ ಹಾಕುತ್ತ
ಮೈ ಮರೆತು ಎಲ್ಲ ಕುಣಿದೌರೆ ....
No comments:
Post a Comment