ಇದೀಗ ಪ್ರಿಮಿಯರ್ ಆಗಲಿದೆ ... ೬ ಗಂಟೆಗೆ
ಸಾಹಿತ್ಯ - ಶತಾವಧಾನಿ ಗಣೇಶ್
ರಾಗ - ಕಾನಡ
ಸಂಯೋಜನೆ - ರೋಹಿಣಿ ಸುಬ್ರಹ್ಮಣ್ಯಂ
ವೀಡಿಯೊ ಪರಿಕಲ್ಪನೆ & ಗಾಯನ - ರಕ್ಷಾ ಮಹೇಂದ್ರ
ರಾಮನ ಪರಿವಾರ ಅಸಮಾನ ಗುಣಾಧಾರ
ಸ್ವಾಮಿಯ ಪರಿವಾರ ರಸಾನೇಮಿಯ ಸಂಸಾರ ।।ಪಲ್ಲವಿ||
ಸೀತೆಯಂಥ ಸತಿ ಮತ್ತೆಲ್ಲಿ ದಾಂಪತ್ಯ ಪಥ್ಯ ಪಥವಿನ್ನೆಲ್ಲಿ
ಲವಕುಶರಂಥ ಸುತರೆಲ್ಲಿ ......
ಲವಕುಶರಂಥ ಸುತರೆಲ್ಲಿ ಶಿವಕುಶಲತೆಗಳಿಗೆಡೆಯಿನ್ನೆಲ್ಲಿ ।।ರಾಮನ ಪರಿವಾರ ||
ಭರತ ಲಕ್ಷ್ಮಣ ಶತ್ರುಘ್ನರ ಪರಿ ಇರುವರೇ ಸಹಜರೆಡೆಯಲ್ಲಿ
ಗುಹ ಸುಗ್ರೀವ ವಿಭೀಷಣರಂಥ ಗೆಳೆಯರಿರುವರೇ ಧರೆಯಲ್ಲಿ ।।ರಾಮನ ಪರಿವಾರ ||
ಎಲ್ಲಕ್ಕೂ ಮಿಗಿಲು ಹನುಮನ ಹಾಗೆ ಸಲ್ಲುವರೇ ಸೇವಕರು
ನಿಲ್ಲುವರೇ ಭಾವಕರು ಗೆಲ್ಲುವರೇ ಜೀವಕರು ।।ರಾಮನ ಪರಿವಾರ ||
No comments:
Post a Comment